ಸರ್ಕಾರಿ ನೌಕರರ ವರ್ಗಾವಣೆ ಆದೇಶ ವಿಸ್ತರಣೆ

ಬೆಂಗಳೂರು,ಜೂ.೧೬:ಸರ್ಕಾರಿ ನೌಕರರ ವರ್ಗಾವಣೆ ಅವಧಿಯನ್ನು ಈ ತಿಂಗಳ ಅಂತ್ಯದವರೆಗೂ ವಿಸ್ತರಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಈ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗೆ ಮೇ ೧೫ರವರೆಗೂ ಅವಕಾಶ ನೀಡಿ ಆದೇಶ ಹೊರಡಿಸಲಾಗಿತ್ತು.
ವರ್ಗಾವಣೆ ಅವಧಿಯನ್ನು ವಿಸ್ತರಿಸುವ ಅವಶ್ಯಕತೆಯನ್ನು ಮನಗಂಡು ಸರ್ಕಾರವು ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣಾ ಅವಧಿಯನ್ನು ಜೂನ್ ೩೦ರವರೆಗೂ ವಿಸ್ತರಿಸಿ ಇಂದು ಆದೇಶ ಹೊರಡಿಸಿದೆ.
ವರ್ಗಾವಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಈ ಹಿಂದೆ ಹೊರಡಿಸಿದ್ದ ಆದೇಶದಲ್ಲಿ ಹೇಳಲಾಗಿದ್ದು, ಅದರಂತೆ ನೌಕರರ ವರ್ಗಾವಣೆ ಮಾಡಬಹುದಾಗಿದೆ.