ಸರ್ಕಾರಿ ನೌಕರರ ಮುಷ್ಕರ
ರೋಗಿಗಳ ಪರದಾಟ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,1- ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ  ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಹಿನ್ನಲೆಯಲ್ಲಿ ಆಸ್ಪತ್ರೆಗಳಿಗೆ ಆಗಮಿಸಿದ ರೋಗಿಗಳು ಪರದಾಡುವಂತಾಗಿದೆ.
ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಲ್ಲಿ 14 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು ಇದ್ದಾರೆ.
ಪ್ರಥಮ ಪಿಯುಸಿಯ ಅಂತಿಮ‌ ಪರೀಕ್ಷೆ ನಡೆಯುತ್ತಿದ್ದು ಮುಷ್ಕರದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಮಾ 4 ಕ್ಕೆ ಮುಂದೂಡಿದೆ. ಸಾರಿಗೆ ವ್ಯವಸ್ಥೆ ಎಂದಿನಂತೆ ಇದೆ. ಶಾಲೆ ಕಾಲೇಜುಗಳು ಬಂದ್ ಆಗಿವೆ. ಅದೇರೀತಿ ಕಂದಾಯ ಮೊದಲಾದ ಇಲಾಖೆಗಳಲ್ಲಿ ನೌಕರರು ಗೈರು ಹಾಜರಾಗಿದ್ದಾರೆ.
ಇನ್ನು ಆಸ್ಪತ್ರೆಗಳಲ್ಲಿ ತುರ್ತು ಘಟಕ ಮತ್ತು ಒಳರೋಗಿಗಳಿಗೆ ತೊಂದರೆ ಇಲ್ಲದೆ ಕಪ್ಪು ಪಟ್ಟಿಕೊಂಡು ವೈದ್ಯರು ಮತ್ತು ಸಿಬ್ಬಂದಿ ಕೆಲ ಮಾಡುತ್ತಿದ್ದಾರೆ. ಆದರೆ ಹೊರ ರೋಗಿಗಳ ತಪಾಸಣೆ ಇಲ್ಲದಿರುವುದರಿಂದ ಆಸ್ಪತ್ರೆಗೆ ಬಂದ ರೋಗಿಗಳು ಪರದಾಡುವಂತ ಪರಿಸ್ಥಿತಿ ನಗರದ ವಿಮ್ಸ್ ಮತ್ತು ಜಿಲ್ಲಾ ಆಸ್ಪತ್ರೆ ಮುಂದೆ ಕಂಡು ಬಂದಿದೆ.