ಸರ್ಕಾರಿ ನೌಕರರ ಮುಷ್ಕರಕ್ಕೆ ಬೆಂಬಲ

ಕಲಬುರಗಿ,ಫೆ.26-ರಾಜ್ಯ ಸರಕಾರಿ ನೌಕರರ 7ನೇ ವೇತನ ಜಾರಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಮಾರ್ಚ್ 1 ರಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘ ಬೆಂಬಲ ಸೂಚಿಸಿದೆ.
ಅಗತ್ಯವಾದರೆ ಹೋರಾಟದಲ್ಲಿಯು ಸಕ್ರಿಯವಾಗಿ ಭಾಗವಹಿಸಲು ಸಿದ್ಧರಾಗಿದ್ದೇವೆ ಎಂದು ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ, ಉಪಾಧ್ಯಕ್ಷ ಸಿದ್ದರಾಮ ಕರಣಿಕ, ಕಾರ್ಯದರ್ಶಿ ಶಿವಾಜಿ ಜಮಾದಾರ, ಸಹ ಕಾರ್ಯದರ್ಶಿ ಸಿದ್ದಪ್ಪ ದಶ್ಮಾ,ಖಜಾಂಚಿ ಶ್ರೀಕಾಂತ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.