ಸರ್ಕಾರಿ ನೌಕರರ ಮನಸ್ಥಿತಿ ಬದಲಾಗಬೇಕಿದೆ – ಕಟ್ಟಿಮನಿ

ಮಾನ್ವಿ,ಜ.೨೨-ಬಡತನದಲ್ಲಿ ಹುಟ್ಟಿ, ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದು ತಾರತಮ್ಯವನ್ನು ಅನುಭವಿ, ತಂದೆ ತಾಯಿ ಪರಿಶ್ರಮದಿಂದ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಪಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನೌಕರರೇ ದಯವಿಟ್ಟು ನಿಮ್ಮ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಿ ನಿಮ್ಮೊಂದಿಗೆ ನಿಮ್ಮ ಸಮಾಜದ ಬಡವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ ಅವರ ಸಾಧನೆಗೆ ನೀವು ಪ್ರೇರಣೆಯಾಗಿ ಎಂದು ಮಾದಿಗ ಕ್ಷೇಮಾಭಿವೃದ್ಧಿ ಜಿಲ್ಲಾ ಗೌರವ ಅಧ್ಯಕ್ಷ ಶಿಕ್ಷಕ ಮೂಕಪ್ಪ ಕಟ್ಟಿಮನಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರು ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಥಮ ಎಸ್‌ಸಿಎಸ್‌ಟಿ ಸಮಾವೇಶದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತಾನಾಡಿದವರು ಅವರು ಮನೆ ಗೆದ್ದು ಮಾರು ಗೆಲ್ಲು ಎನ್ನುವ ಗಾದೆಯಂತೆ ನಾವುಗಳು ಮೊದಲು ನಮ್ಮ ಮನಸ್ಥಿತಿಯನ್ನು ಗೆಲ್ಲಬೇಕು. ಒಗ್ಗಟ್ಟಿನ ಸಂಕೇತವಾಗಿ ಕಾಣಬೇಕು ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಬೇಕು ಅದಕ್ಕಾಗಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕು ಎಂದು ಎಂದರು.
ನಂತರ ಸಂತೋಷ ನಂದಿನಿ ಮಾತಾನಾಡಿ ಮೂಕಪ್ಪಣ್ಣಾ, ಜಿಂದಪ್ಪಣ್ಣಾ, ಸೇರಿದಂತೆ ಎಲ್ಲ ತಾಲೂಕಿನ ಅಧ್ಯಕ್ಷ ಕಾರ್ಯದರ್ಶಿ ಪದಾಧಿಕಾರಿಗಳು ಪರಿಶ್ರಮದಿಂದ ರಾಯಚೂರಿನಲ್ಲಿ ಪ್ರಥಮ ಕಾರ್ಯಕ್ರಮ ತುಂಬಾ ಅದ್ಭುತವಾಗಿತ್ತು. ಮುಂದೆಯೂ ಕೂಡ ನಾವು ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಮನೋವಾದಿಗಳ ಸಿದ್ದಾಂತವನ್ನು ಬಿಟ್ಟು ಬುದ್ದವಾದಿಗಳಾಬೇಕು ಎಂದು ಸ್ವಲ್ಪ ಖಾರವಾಗಿ ಮಾರ್ಮಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸನ್ಮಾನಿತರಾದ ವಿರುಪಣ್ಣ ಉಪ ತಹಶಿಲ್ದಾರರರು, ರೇವಣ ಸಿದ್ದಪ್ಪ, ಬೇಬಿ ಸುನೀತಾ, ರೇಖಾ ಆರ್, ಸಂಜೀವಪ್ಪ, ಸುರೇಶ ಜಗ್ಲಿ, ಪ್ರಶಾಂತ, ಸತೀಶ್, ಶಶೀಕಲಾ, ಸೇರಿದಂತೆ ವೇದಿಕೆಯಲ್ಲಿ ಸುರೇಶ ಕುರ್ಡಿ ಶ್ರೀಶೈಲ ಗೌಡ, ಆರೀಫ್ಮೀಯಾ, ಚಿಂದಪ್ಪ, ನಾಗರಾಜ್, ಹನುಂತಪ್ಪ ಭಂಡಾರಿ, ಭಾಗಯ್ಯ ನಾಯಕ, ಈಶಪ್ಪ ನಾಯಕ, ತಿಮ್ಮೇಶ ನಾಯಕ, ಶ್ರೀ ಶೈಲ ಅಂಗಡಿ, ನರಸಮ್ಮ, ಲಕ್ಷ್ಮಿಕಾಂತ, ಮಹೇಶ ಸೇರಿದಂತೆ ಅನೇಕರು ಇದ್ದರು.