
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ28: ರಾಜ್ಯ ಸರ್ಕಾರಿ ನೌಕರರ ಹಳೆ ಪಿಂಚಣಿಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಕೆ. ಹೇಳಿದರು.
ಈ ಕುರಿತು ಹೊಸಪೇಟೆ ಪತ್ರಿಕಾಭವನದಲ್ಲಿ ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೌಕರರಿಗೆ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು, 2006 ರಿಂದ ಈ ವರೆಗೂ 2.60ಲಕ್ಷ ನೌಕರರು ಪಿಂಚಣಿ ಯೋಜನೆಯ ವ್ಯಾಪ್ತಿಯಿಂದ ಹೊರಗೂಳಿದಿದ್ದು ಇದು ನೌಕರರ ಭವಿಷ್ಯಕ್ಕೆ ಮಾರಕವಾಗಿದ್ದು ದೇಶದ ಪಂಜಾಬ್, ರಾಜಸ್ಥಾನ, ಛತ್ತೀಸ್ಗಢ, ಸೇರಿದಂತೆ ಕೆಲ ರಾಜ್ಯದಲ್ಲಿ ಹಿಂಪಡೆದಂತೆ ನಮ್ಮ ರಾಜ್ಯದಲ್ಲಿ ಹಿಂಪಡೆದು ನೌಕರರಿಗೆ ಭವಿಷ್ಯ ರೂಪಿಸಬೇಕು ಎಂದು ಒತ್ತಾಯಿಸಿದರು.
ಭತ್ಯಗಳನ್ನು ಪರಿಷ್ಕರಿಸಬೇಕು, 7ನೇ ವೇತನಾ ಆಯೋಗವನ್ನು ಒಂದು ವರ್ಷಗಳ ಹಿಂದಿನಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದರು.
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು,
2023-24ನೇ ಸಾಲಿನ ಆಯ-ವ್ಯಯದಲ್ಲಿ ಪ್ರಸ್ತಾಪವಿಲ್ಲದಿರುವುದು ನಿರಾಸೆಮೂಡಿಸಿದೆ ಈ ಹಿನ್ನಲೆಯಲ್ಲಿ ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ, ಜಿಲ್ಲಾ ಉಪಾಧ್ಯಕ್ಷ ಕುಬೇರ ಆರ್ಚಾರಿ, ಸುಧಾದೇವಿ, ಜಾಕೀರ್ ಹುಸೇನ್, ದ್ಯಾಮಾನಾಯಕ, ಬಸವನಗೌಡ. ಲಲಿತಮ್ಮ, ಬಿ.ಬಸವರಾಜ, ನೀಲಮ್ಮ ಗಚ್ಚಿನಮಠ, ಕೆ, ಬಿ.ಕೆ.ಹೇಮರೆಡ್ಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕಡ್ಲಿ ವೀರಭದ್ರೇಶ್, ಪ್ರಕಾಶ ಕುಲಕರ್ಣಿ ಸೇರಿದಂತೆ ಇತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.