
ತಾಳಿಕೋಟೆ:ಮಾ.1:ಸರ್ಕಾರಿ ನೌಕರರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದ ಕಾರಣ ಮಾರ್ಚ 1 ರಿಂದ ಅನಿರ್ದಿಷ್ಠಾವಧಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟ ನಡೆಯಲಿದೆ ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು ಇದರಿಂದ ಸರ್ಕಾರಿ ನೌಕರರ ಸಂಘ ಕೈಗೊಂಡಿರುವ ಹೋರಾಟಕ್ಕೆ ಶಕ್ತಿ ಬರಲಿದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ನಿಂಗನಗೌಡ ದೊಡಮನಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ಎಲ್ಲ ಇಲಾಖೆಗಳ ವೃಂದ ಸಂಘಗಳ ಸಹಯೋಗದಲ್ಲಿ ಮಾರ್ಚ 1 ರಿಂದ ನಡೆಯಲಿರುವ ಅನಿರ್ದಿಷ್ಠಾವಧಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ಕುರಿತು ಮಂಗಳವಾರರಂದು ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ-ಭತ್ಯಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿಯೋಜನೆ ಜಾರಿ ಗೊಳಿಸುವದು ಅಲ್ಲದೇ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಪಡೆದು ದಿ. 1-7-2022ರಿಂದ ಜಾರಿಗೆ ಬರುವಂತೆ ಶೇ. 40ರಷ್ಟು ವೇತನ ಹೆಚ್ಚಳ ಮತ್ತು ಎನ್‍ಪಿಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೊಳಿಸುವದು ಬೇಡಿಕೆಯಾಗಿದೆ ಈ ಬೇಡಿಕೆ ಇಡೇರಿಕೆಗಾಗಿ ನಡೆಯಲಿರುವ ಮುಷ್ಕರದಲ್ಲಿ 7 ಲಕ್ಷ ನೌಕರರು ಪಾಲ್ಗೊಳ್ಳಲಿದ್ದಾರೆ ಆದರೆ ಮುಷ್ಕರದಲ್ಲಿ ಯಾವುದೇ ಪ್ರತಿಭಟನೆ ಇರುವದಿಲ್ಲಾ ಮನವಿ ಸಲ್ಲಿಸುವದು ಇರುವದಿಲ್ಲಾ ಕೇವಲ ಕರ್ತವ್ಯಕ್ಕೆ ಗೈರಾಗುವ ಮೂಲಕ ನೌಕರರ ಬೇಡಿಕೆಯ ಬಗ್ಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹದ್ದಾಗಿದೆ ಯಾವುದೇ ನೌಕರರಿಗೂ ಅನ್ಯಾಯವಾಗಲು ಬಿಡುವದಿಲ್ಲಾ ಸಂಘ ಸಹಿಸುವದಿಲ್ಲಾ ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರು ಹೋರಾಟ ಕುರಿತು ಈಗಾಗಲೇ ರಾಜ್ಯದ ಎಲ್ಲ ನೌಕರರಿಗೆ ಕರೆ ನೀಡಿದ್ದಾರೆ ನಾವೇಲ್ಲರೂ ಒಂದಾಗಿ ಗಟ್ಟಿಯಾಗಿ ನಿಂತಾಗ ಬೇಡಿಕೆಗಳು ಇಡೇರಲು ಸಾಧ್ಯವಾಗುತ್ತದೆ ಎಂದ ದೊಡಮನಿ ಅವರು ಸರ್ಕಾರ ನಡೆಯಬೇಕಾದರೆ ಕಾರ್ಯಾಂಗ ಬಹಳೇ ಮುಖ್ಯವಾಗಿದೆ ಸರ್ಕಾರಿ ನೌಕರರು ಸರ್ಕಾರದ ಒಂದು ಭಾಗವಾಗಿದೆ ನಮ್ಮ ಬೇಡಿಕೆ ಕ್ರಮಬದ್ದವಾಗಿದ್ದು ಹೋರಾಟದಲ್ಲಿ ಶಿಕ್ಷಕರು, ಕಂದಾಯ ಇಲಾಖೆ, ಆರ್.ಡಿ.ಪಿ.ಆರ್.ನೌಕರರು, ಒಳಗೊಂಡು ಸುಮಾರು 29 ಇಲಾಖೆಯ ನೌಕರರು ಈ ಬೇಡಿಕೆಗಳಿಗೆ ಅರ್ಹರಿದ್ದೇವೆ ಈಗಾಗಲೇ ನಮ್ಮ ಬೇಡಿಕೆಗೆ ನೊಂದಣಿ ಇಲಾಖೆ, ಮಹಾನಗರ ಪಾಲಿಕೆಯ ಹೊರಗುತ್ತಿಗೆ ನೌಕರರು ಸಹ ಬೆಂಬಲ ನೀಡಿದ್ದು ಸ್ವಾಗತಾರ್ಹವಾಗಿದ್ದು ಮಾರ್ಚ 1 ರಿಂದ ನಡೆಯಲಿರುವ ಹೋರಾಟಕ್ಕೆ ಎಲ್ಲರೂ ಗಟ್ಟಿಯಾಗಿ ನಿಲ್ಲಬೇಕು ಇದರಿಂದ ಇನ್ನಷ್ಟು ಭಲ ಸಿಗುವದರ ಜೊತೆಗೆ ಬೇಡಿಕೆಗಳನ್ನು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವೆಂದರು.
ಇದೇ ಸಮಯದಲ್ಲಿ ಶಿಕ್ಷಕರ ಸಂಘದಿಂದ ಅಧ್ಯಕ್ಷ ಬಿ.ಟಿ.ವಜ್ಜಲ, ಕಂದಾಯ ಇಲಾಖೆ ನೌಕರರ ಸಂಘದ ಎಸ್.ಎಸ್.ಅಂಗಡಿ, ಆರ್.ಡಿ.ಪಿ.ಆರ್.ನೌಕರರ ಸಂಘದ ಉಪಾಧ್ಯಕ್ಷ ಶಂಕರ ತಳವಾರ ಅವರು ನೌಕರರ ಹೋರಾಟದಲ್ಲಿ ಎಲ್ಲರು ಭಾಗಿಯಾಗಬೇಕೆಂದರು.
ಈ ಸಮಯದಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಜಿ.ರಾಠೋಡ, ಆರ್.ಎಸ್.ಹಿಪ್ಪರಗಿ, ಟಿ.ಎಸ್.ಲಮಾಣೆ, ಶಿವನಗೌಡ ಚೌದ್ರಿ, ಬಿ.ಆಯ್.ಸಜ್ಜನ, ಜಿ.ಕೆ.ಪತ್ತಾರ, ಪಿ.ವಾಯ್.ಚಲವಾದಿ, ರಾಘವೇಂದ್ರ ಕೌದಿ, ಆರ್.ಎಂ.ಮುರಾಳ, ಸಿ.ಎಂ.ಮೇತ್ರಿ, ಬಾಲಾಜಿ ವಿಜಾಪೂರ, ಜಿ.ಆರ್.ಸೋನಾರ, ಬಸನಗೌಡ ಚೌದ್ರಿ, ವಾಯ್.ಎಸ್.ದಳವಾಯಿ, ಹಣಮಗೌಡ ಚೌದ್ರಿ, ಗುಂಡುರಾವ್ ಧನಪಾಲ, ಶಂಕರಗೌಡ ನರಸಲಗಿ, ಮೊದಲಾದವರು ಇದ್ದರು.
ಪ್ರಾಥಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬೀರಗೊಂಡ ನಿರೂಪಿಸಿ ವಂದಿಸಿದರು.