ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ ಬೈಕ್ ರ್ಯಾಲಿ ಮುಖಾಂತರ ಮತದಾನ ಜಾಗೃತಿ

ಗುರುಮಠಕಲ್:ಎ.22: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭವನದಲ್ಲಿ. ಸರ್ಕಾರಿ ನೌಕರರ ದಿನಾಚರಣೆಯನ್ನು ಆಚರಿಸಿದರು ಈ ವೇಳೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಶ್ರೀ ಸಂತೋಷ್ ಕುಮಾರ ನಿರೇಟಿ ಯವರು ಮಾತನಾಡುತ್ತ ಭಾರತ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲು ಕರ್ನಾಟಕ ಸರ್ಕಾರ ನೌಕರರ ದಿನಾಚರಣೆಯನ್ನು ಮಾಡಿರುವ ರಾಜ್ಯ ಯಾವುದಾದರೂ ಇದ್ದರೆ ಅದು ಕರ್ನಾಟಕ ರಾಜ್ಯ ವೆಂದು ನಾವು ಹೆಮ್ಮೆಯಿಂದ ಹೇಳಿ ಕೊಳ್ಳ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಎಲ್ಲಾ ಸರ್ಕಾರಿ ನೌಕರರು .ಇವತ್ತು ನಾವು ಬೈಕ್ ರ್ಯಾಲಿ ಮುಖಾಂತರ ಮುಖ್ಯ ಬೀದಿಗಳಲ್ಲಿ ನಿಂತು ಜನಸಾಮಾನ್ಯರಿಗೆ ಮತದಾನ ಬಗ್ಗೆ ತಿಳಿಸಿ ಹೇಳುವುದರ ಮೂಲಕ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಅರಿವು ಮೂಡಿಸುವಲ್ಲಿ ಸತತವಾಗಿ ಪ್ರಯತ್ನ ಪಟ್ಟು ಬರುವ ಚುನಾವಣೆಯಲ್ಲಿ ಹೆಚ್ಚಿನ ಮತ ಸಂಖ್ಯೆ ನೀಡುವಲ್ಲಿ ಹಾಗೂ ಈ ಭಾಗದ ಬಹಳಷ್ಟು ಜನರು ಪಟ್ಟಣಗಳಿಗೆ ಗುಳೆ ಹೋಗಿದ್ದಾರೆ ಅವರಿಗೂ ಕೂಡ ಮತದಾನದ ಬಗ್ಗೆ ಅರಿವು ಮೂಡಿಸಲು ನಾವೆಲ್ಲ ಸರ್ಕಾರಿ ನೌಕರರ ಬಂದುಗಳು ಸತತ ಪ್ರಯತ್ನ ಮಾಡೋಣ ವೆಂದರು. ಈ ವೇಳೆ ಮುಖ್ಯ ಚುನಾವಣಾ ಅಧಿಕಾರಿ ಶ್ರೀ ಸಂತೋಷ್ ರೆಡ್ಡಿ ಪಾಟಿಲ್ ಅವರು ಮಾತನಾಡುತ್ತಾ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ಸಂಖ್ಯೆ ನೀಡುವಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಇವತ್ತು ಸರ್ಕಾರಿ ನೌಕರರು ನಾವೆಲ್ಲಾರು ಬೈಕ್ ರ್ಯಾಲಿ ಮಾಡುವದರ ಮೂಲಕ ಮತದಾನದ ಜಾಗೃತಿ ಮಾಡುವಂತಹ ಕಾರ್ಯವನ್ನು ಮಾಡಿದ್ದು ಈ ಜಾಗೃತಿ ಅಭಿಯಾನ ಕಾರ್ಯಕ್ರಮದಿಂದ ಗುರುಮಠಕಲ್ ಕ್ಷೇತ್ರದಲ್ಲಿ ಬರುವ ಎಲ್ಲಾ ಮತದಾರರು ಮತ ಚಲಾಯಿಸಲು ಅಂದರೆ ಶೇಕಡ 100/ ಕ್ಕೆ 100 ರಷ್ಟು ಮತದಾನ ಮಾಡಲು ಜನರಿಗೆ ಅರಿವು ಮೂಡಿಸುವಲ್ಲಿ ಪ್ರಯತ್ನ ಮಾಡೋಣ ಮತದಾನಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ ಅನ್ನುವ ಜೈಯ ಘೋಷಣೆ ಗಳು ಕೂಗುತ್ತಾ ಎಲ್ಲಾ ಸರ್ಕಾರಿ ನೌಕರರ ಬಂದುಗಳು ಪ್ರಯತ್ನ ಮಾಡೋಣ ವೆಂದರು. ಈ ವೇಳೆ ಎಲ್ಲಾ ಸರ್ಕಾರಿ ನೌಕರರು ಬೈಕ್ ರ್ಯಾಲಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.