ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಯೋಗಾಸನ ಸ್ಪರ್ಧೆ ಸೇರ್ಪಡೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಫೆ.೧೬; ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಘಟಕದಿಂದ ಫೆ.೨೦ ಹಾಗೂ ೨೧ ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಇದೇ ಪ್ರಥಮ ಬಾರಿಗೆ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.೨೦ ಹಾಗೂ ೨೧ ರಂದು ಬೆಳಗ್ಗೆ ೧೦ ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಾಸನ ಸ್ಪರ್ಧೆ ನಡೆಯಲಿದೆ.೪೫ ವರ್ಷದೊಳಗಿನ ಹಾಗೂ ೪೫ ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಯೋಗಾಸನ ಸ್ಪರ್ಧೆಯಲ್ಲಿ ೫ ಆಸನಗಳು ಹಾಗೂ ೨ ಐಚ್ಛಿಕ ಆಸನಗಳನ್ನು ಮಾಡಲು ಅವಕಾಶವಿದೆ.ನಾಲ್ಕು ವಿಭಾಗದಲ್ಲಿ ಸ್ಪರ್ಧೆ ಜರುಗಲಿದೆ ಹಾಗೂ ಸುಮಾರು ೧೦ ಸೆಕೆಂಡ್ ಕಾಲಾವಕಾಶ ನಿಗಧಿ ಗೊಳಿಸಲಾಗಿದೆ ಎಂದರು.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೇನಪುರ ಮಾತನಾಡಿ ಇದೇ ಪ್ರಥಮ‌ಬಾರಿಗೆ ಯೋಗಸನಾ ಹಾಗೂ ಖೋ ಖೋ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಈಗಾಗಲೇ ಆನ್ ಲೈನ್ ಲಿಂಕ್ ಬಿಡುಗಡೆ ಮಾಡಲಾಗಿದ್ದು ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ.ಯೋಗಾಸನ ಸ್ಪರ್ಧೆಗಾಗಿ ಸ್ಥಳದಲ್ಲೇ ನೋಮದಣಿಗೆ ಅವಕಾಶ ಕಲ್ಪಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಿ.ಗುರುಮೂರ್ತಿ,ಡಾ.ಸಿದ್ದೇಶ್,ಪರಶುರಾಮ್,ಪ್ರಕಾಶ್ ಉತ್ತಂಗಿ,ತೀರ್ಥರಾಜ್,ನಿರಂಜನ ಆಲೂರು ಮತ್ತಿತರರಿದ್ದರು.