ಸರ್ಕಾರಿ ನೌಕರರು ಸೋಂಕು ದಿಂದ ಮೃತಪಟ್ಟರೆ

ಕುಟುಂಬಸ್ಥರಿಗೆ ನೌಕರಿ ನೀಡಲು ಒತ್ತಾಯ
ರಾಯಚೂರು,ಮೇ.೩೧- ಕೊರೋನಾ ರೋಗದಿಂದ ಮೃತಪಟ್ಟ ಸರ್ಕಾರ ಕುಟುಂಬದವರಿಗೆ ನೌಕರಿ ನೀಡಲು ಸುಗ್ರೀವಾಜ್ಞೆ ಮಾಡಬೇಕೆಂದು ಜೆಡಿಎಸ್ ಪಕ್ಷದ ಜಿಲ್ಲಾಕಾರ್ಯಧ್ಯಕ ಎನ್ ಶಿವಶಂಕರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕಳೆದ ಎರಡು ವರ್ಷಗಳಿಂದ ಕೊರೋನಾ ರೋಗದಿಂದ ಸಂಕಷ್ಟ ದಿನಗಳಲ್ಲಿ ಹಲವಾರು ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸುತ್ತಿರುವಾಗ ಮೃತಪಟ್ಟಿರುತ್ತರೆ ಕರೋನ ಸಂದರ್ಭದಲ್ಲಿ ತಮ್ಮ ಕುಟುಂಬ, ಆರೋಗ್ಯ ಲೆಕ್ಕಿಸದೆ ಹಗಲು-ರಾತ್ರಿ ತಮ್ಮ ಕರ್ತವ್ಯ ಮಾಡಿದ್ದಾರೆ ಅವರು ಕೊರೋನಾ ವಾರಿಯರ್ಸ್ ರಾಗಿ ಕೆಲಸ ಮಾಡುವಾಗ ಸಂದರ್ಭದಲ್ಲಿ ಮೃತಪಟ್ಟಿರುತ್ತಾರೆ ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡುದ್ದಾರೆ ಅಂತಹ ಕುಟುಂಬಗಳು ಅರ್ಥಿಕ ಸಂಕಷ್ಟ ಎದುರಿಸುತ್ತಿವೆ ಅದಕಾರಣ ಸರ್ಕಾರ ಸುಗ್ರೀವ ಆಜ್ಞೆಯ ಮಾಡುವ ಮೂಲಕ ಅನುಕಂಪ ಆಧಾರದ ಮೇಲೆ ಅವರ ಕುಟುಂಬ ಸದಸ್ಯರಿಗೆ ನೇರವಾಗಿ ನೌಕರಿ ನೀಡಲು ಆದೇಶ ಮಾಡಬೇಕೆಂದರು.
ಕರ್ನಾಟಕ ಸಿವಿಲ್ ಸೇವಾ ನಿಯಮ( ಅನುಕಂಪ ಆಧಾರದ ನೇಮಕಾತಿ) ನಿಯಮಗಳು ೧೯೯೬ ಪ್ರಕಾರ ೩ ನಿಯಮ ಸರ್ಕಾರಿ ನೌಕರರ ಮೃತಪಟ್ಟ ನಂತರ ಕುಟುಂಬಕ್ಕೆ ಉಂಟಾಗವ ನಷ್ಟ ಮತ್ತು ನಿರಾತ್ರಿತೆಯನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಹೇಳಲಾಗಿದೆ
ಈ ಕೊರೋನಾ ಸಂಕಷ್ಟ ಸಮಯದಲ್ಲಿ ಸರ್ಕಾರ ಮೃತಪಟ್ಟ ನೌಕರರಿಗೆ ಯಾವುದೇ ಸಹಾಯ ಮಾಡಲಿಲ್ಲ ಈಗ ಅವರ ಕುಟುಂಬಗಳು ಜೀವನ ನಡೆಸಲು ಕಷ್ಟಪಡುತ್ತಿವೆ ಅದಕಾರಣ ಸರ್ಕಾರವು ಕೊರೋನಾ ಸಂದರ್ಭಲ್ಲಿ ಮೃತಪಟ್ಟ ಎಲ್ಲ ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೆ ವಿಶೇಷವಾಗಿ ಪರಿಗಣಿಸಿ ಸುಗ್ರೀವ ಆಜ್ಞೆಯ ಮುಖಾಂತರ ನೇಮಕಾತಿ ಮಾಡಿಕೊಳ್ಳುಲು ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.