ಸರ್ಕಾರಿ ನೌಕರರು ಕರ್ತವ್ಯದ ಜೊತೆ ಸಾಹಿತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ

ದಾವಣಗೆರೆ; ಜೂ.7: ಸರ್ಕಾರಿ ನೌಕರರು ಇಲಾಖೆ ಕೆಲಸದ ಜೊತೆಯಲ್ಲೇ ತಾಂತ್ರಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ತಿಳಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ನೌಕರರಿಗೆ ಅದರಲ್ಲೂ ಚಾಲಕರಿಗೆ ಮೊದಲು ಗೌರವ ಧನವನ್ನು ನೀಡಬೇಕು ಹಾಗೂ ಕರ್ತವ್ಯ ನಿರ್ವಹಿಸಿದ ಎಲ್ಲರೂ ಕಡ್ಡಾಯವಾಗಿ ಹಾಜರಾತಿ ನೀಡಬೇಕು ಎಂದರು.   ಎಲ್ಲಾ ಸರ್ಕಾರಿ ನೌಕರರ ವೇತನವು ತಾಂತ್ರಿಕ ದೋಷದಿಂದ ತಡವಾಗಿದ್ದು ಶೀಘ್ರ ಕಾರ್ಯಗತವಾಗಲಿದೆ.   ಸರ್ಕಾರಿ ನೌಕರರು ತಮ್ಮ ಇಲಾಖಾ ಕೆಲಸಗಳಲ್ಲಿ ತೊಡಗಿ ಕೊಳ್ಳುವುದರ ಜೊತೆಯಲ್ಲಿ ತಮ್ಮ ಆರೋಗ್ಯದ ಕಡೆ, ಮಕ್ಕಳ ಭವಿಷ್ಯ ರೂಪಿಸುವ ಬಗ್ಗೆ ಹಾಗೂ ಸಾಹಿತ್ಯ ಸಂಗೀತ ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಮೊದಲನೇ ಬಾರಿಗೆ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದರು.  ಜಿಲ್ಲೆಯ ಶಾಮನೂರಿನಲ್ಲಿ ನಿರ್ಮಾಣವಾಗಿರುವ  ಸ್ಮಾರ್ಟ್ ಸಿಟಿ ಕಟ್ಟಡವನ್ನು ಸದ್ಯದರಲ್ಲೇ ಇಲಾಖೆಗೆ ರವನಿಸಲಾಗುತ್ತದೆ ಹಾಗೂ ಆಯುಷ್ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ ಆಯುರ್ವೇದಿಕ್ ವಸ್ತುಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ  ಎಂದರು.  ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ತಾಲ್ಲೂಕು ಮಟ್ಟದ  ನೌಕರರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.