
ಮಾನ್ವಿ,ಮಾ.೦೧- ರಾಜ್ಯಾದ್ಯಂತ ಸರ್ಕಾರಿ ನೌಕರರ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಒಂದು ದಿನದ ಮುಷ್ಕರಕ್ಕೆ ಮಣಿದ ರಾಜ್ಯ ಸರ್ಕಾರ ಸರ್ಕಾರಿ ನೌಕರರ ವೇತನದ ಶೇಕಡಾ ೧೭% ಹೆಚ್ವಳ ಮಾಡಿ ಆದೇಶ ನೀಡಿದ ಕಾರಣದಿಂದ ನಮಗೆ ತುಂಬಾ ಸಂತೋಷವಾಗಿದ್ದು, ಇನ್ನುಳಿದ ಬೇಡಿಕೆಯನ್ನು ಅದಷ್ಟು ಬೇಗನೆ ನೆರವೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಮ್ಮ ಮುಷ್ಕರವನ್ನು ಹಿಂಪಡೆದು ಕೆಲಸಕ್ಕೆ ಹಾಜರಿಯಾಗುತ್ತೆವೆ ಎಂದು ನೌಕರರ ಸಂಘದ ಅಧ್ಯಕ್ಷ ಶ್ರೀಶೈಲ ಗೌಡ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಮುಂಭಾಗದಲ್ಲಿ ಜಮಾವಣೆಗೊಂಡ ನೌಕರರು ೧೭% ಹೆಚ್ಚಳ ವೇತನಕ್ಕಾಗಿ ಸಂಭ್ರಮಾಚರಣೆ ಮಾಡಿ ಇದು ತಾತ್ಕಾಲಿಕ ಗೆಲುವು ಆಗಿದ್ದು ಇನ್ನೂ ನಮ್ಮ ಬೇಡಿಕೆಗಳಲ್ಲಿ ಪ್ರಮುಖವಾಗಿ ಹಳೆ ಪಿಂಚಣಿ ಮುಂದುವರೆಸುವಂತೆ ಸರ್ಕಾರಕ್ಕೆ ಒತ್ತಡ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಇತರೆ ಸಂಘಟನೆಯ ಪದಾಧಿಕಾರಿಗಳು ಇದ್ದರು.