ಸರ್ಕಾರಿ ನೌಕರರಿಗೆ ನಿವೃತ್ತ ಅನಿವಾರ್ಯ

ಅರಸೀಕೆರೆ, ಆ. ೬- ನನ್ನ ೩೫ ವರ್ಷಗಳ ವೃತ್ತಿ ಜೀವನದಲ್ಲಿ ನನ್ನ ಸೇವೆ ತೃಪ್ತಿ ನೀಡಿದೆ. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಲಕ್ಷ್ಮಣ ಬಳೂಟಗಿ ಹೇಳಿದರು.
ಇಲ್ಲಿನ ಸರ್ಕಾಲಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಉಪಪ್ರಾಂಶುಪಾಲರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಪ್ರೌಢಶಾಲಾ ಶಿಕ್ಷಕನಾಗಿ ಸೇರ್ಪಡೆಗೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಮತ್ತೊಮ್ಮೆ ಕ್ಷೇತ್ರ ಸಮನ್ವಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಹಂಬಲ ನನಗೆ ಇತ್ತಾದರೂ ಅವಕಾಶವಾಗಲಿಲ್ಲ ಎಂದರು.
ಈ ಶಾಲೆಯಲ್ಲಿ ಉಪ ಪ್ರಾಂಶುಪಾಲನಾಗಿ ಅಲ್ಪಕಾಲ ಸೇವೆ ಸಲ್ಲಿಸುವ ಭಾಗ್ಯ ನನಗೆ ಸಿಕ್ಕಿತು. ಇಲ್ಲಿನ ಬೋಧಕ ವೃಂದ ಮತ್ತು ಸಿಬ್ಬಂದಿ ನಾನು ಅಸ್ವಸ್ಥನಾದ ಸಂದರ್ಭದಲ್ಲಿ ಸಕಾಲಿಕ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿ ನನಗೆ ಪುನರ್ಜನ್ಮ ನೀಡಿದ್ದಾರೆ. ನಾನು ಜೀವಿತದಲ್ಲಿ ಇದನ್ನು ಮರೆಯಲಾರೆ ಎಂದರು.
ತಮ್ಮ ಕಚೇರಿಯ ಸಿಆರ್‌ಪಿಗಳು, ಬಿಆರ್‌ಪಿ ಗಳು ಹಾಗೂ ಬಿಇಓ ಕಚೇರಿಯಲ್ಲಿ ನೌಕರ ವರ್ಗ ನನಗೆ ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಶಾಲಾ ಶಿಕ್ಷಕರುಗಳು ನನ್ನ ಮೇಲೆ ಬಹಳ ಅಭಿಮಾನ ಇಟ್ಟಿದ್ದಾರೆ. ನಾನು ಮರಳಿ ಇಲ್ಲಿಗೆ ಬಂದಾಗ ಅನೇಕರು ಬಂದು ನನ್ನನ್ನು ಅಭಿನಂದಿಸಿದರು. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ನಾನು ಆರು ಪುಸ್ತಕಗಳನ್ನು ಬರೆದಿದ್ದು, ಎರಡು ಪುಸ್ತಕಗಳು ಪ್ರಕಟಗೊಳ್ಳಬೇಕು. ನಿವೃತ್ತಿಯ ನಂತರ ಅತ್ತ ಗಮನ ಕೊಡುವುದಾಗಿ ಅವರು ಹೇಳಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಅನಿವಾರ್ಯ. ನಾವು ಮೂರು ಹಂತದಲ್ಲಿ ಅಭಿನಂದನೆಗೆ ಪಾತ್ರರಾಗುತ್ತೇವೆ. ಒಂದು ವರ್ಗಾವಣೆಗೊಂಡಾಗ, ನಂತರ ಬಡ್ತಿ ಹೊಂದಿದಾಗ ಹಾಗೂ ನಿವೃತ್ತಿಯಾದಾಗ ಅಭಿನಂದನೆಗೆ ಪಾತ್ರರಾಗುತ್ತೇವೆ. ಈ ಮೂರು ಸಮಯಗಳು ನಮ್ಮಲ್ಲಿ ಚಿರಸ್ಮರಣೀಯವಾಗಿ ಉಳಿಯುತ್ತವೆ. ಅಂತಹ ಸನ್ನಿವೇಶವನ್ನು ಒದಗುವಂತೆ ನಾವೇ ಸೃಷ್ಟಿಸಿಕೊಳ್ಳಬೇಕು ಎಂದರು.
ನಮ್ಮ ಕಾರ್ಯದಕ್ಷತೆ ಹಾಗೂ ಇತರೊಂದಿಗೆ ನಮ್ಮ ಸ್ಪಂದನೆ ಯನ್ನು ಅವಲಂಬಿಸಿರುತ್ತದೆ. ಕರ್ತವ್ಯದಲ್ಲಿ ದಕ್ಷತೆ ಪ್ರಗತಿಯು ಬಹಳ ಮುಖ್ಯ ನಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ. ಕೆಲವೊಮ್ಮೆ ನಮ್ಮ ನಿರ್ಧಾರಗಳು ಬೇರೆಯವರಿಗೆ ಕಹಿ ಎನಿಸಿದರು. ಅದು ನಿಯಮದ ಚೌಕಟ್ಟಿನೊಳಗೆ ಅನಿವಾರ್ಯವಾಗಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ಸೂಕ್ಷ್ಮವಾಗಿ ಎದುರಿಸಬೇಕಾಗುತ್ತದೆ. ಲಕ್ಷ್ಮಣ ಬಳೂಟಗಿ ಅವರು ತಮ್ಮ ಸೇವೆ ಉತ್ತಮವಾಗಿ ಮಾಡಿದ್ದಾರೆ. ಎಲ್ಲರ ಮೆಚ್ಚುಗೆಗೂ ಪ್ರಾತರಾಗಿದ್ದಾರೆ. ಅವರ ನಿವೃತ್ತಿ ಜೀವನ ಸಂತಸಮಯವಾಗಿರಲಿ ಎಂದು ಹಾರೈಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್ ಮಾತನಾಡಿ, ಬಳುಟಿಗೆ ಅವರು ನನ್ನ ಗುರುಗಳು ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡು ಬಹುಮುಖ ಪ್ರತಿಭೆಯನ್ನು ಬಲೂಟಿಗೆ ಬಂದಿದ್ದಾರೆ. ಕಲಾಪ್ರಿಯರು ಸಾಹಿತಿಗಳು, ಹಾಡುಗಾರರು ಆಗಿದ್ದಾರೆ. ಕರ್ತವ್ಯದಲ್ಲಿ ಅವರಿಗೆ ವಿಶೇಷವಾದ ಆಸಕ್ತಿ ಇದೆ. ನಿವೃತ್ತಿ ಜೀವನದಲ್ಲಿ ಅವರು ಇತರ ಹವ್ಯಾಸಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಬಯಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಪೂರ್ಣಿಮಾ ಬಳೂಟಿಗೆ ಅವರು ಅಲ್ಪಸಮಯ ನಮ್ಮ ಶಾಲೆಯಲ್ಲಿ ಸೇವೆ ಸಲ್ಲಿಸಿದರು ನಮಗೆ ಹೆಚ್ಚಿನ ಮಾರ್ಗದರ್ಶನವನ್ನು ಆತ್ಮಸ್ಥೈರ್ಯವನ್ನು ನೀಡುತ್ತಿದ್ದರು. ಎಲ್ಲರನ್ನೂ ಲವಲವಿಕೆಯಿಂದ ಇಡುತ್ತಿದ್ದರಲ್ಲವೇ ಮಾರ್ಗದರ್ಶನವನ್ನು ನಗುಮೊಗದಲ್ಲಿಯೇ ನೀಡತ್ತಿದ್ದರು ಎಂದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೇಣುಕಾರಾಧ್ಯ ಮಾತನಾಡಿ, ಲಕ್ಷ್ಮಣ ಬಳ್ಳೂಟಿಗೆ ಅವರು ಸ್ನೇಹಜೀವಿ ಮತ್ತು ಸರಳ ವ್ಯಕ್ತಿ ನಮ್ಮ ಶಾಲಾ ಕಾಲೇಜಿನಲ್ಲಿ ಅವರು ನಿವೃತ್ತಿಯಾಗುತ್ತಿರುವುದು ನಮಗೂ ಹೆಮ್ಮೆ ಎನಿಸುತ್ತಿದೆ. ಅವರಲ್ಲಿ ಅನೇಕ ಪ್ರತಿಭೆಗಳು ಇವೆ ಎಂಬುದನ್ನು ಕೇಳಿದ್ದೇನೆ. ಭಗವಂತನು ಅವರ ನಿವೃತ್ತಿ ಜೀವನವನ್ನು ಸಂತಸವಾಗಿಡಲಿ ಎಂದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಜಿಲ್ಲಾ ಸಂಘದ ಉಪಾಧ್ಯಕ್ಷ ಕುಮಾರ್ ಬಲೂಟಿಗೆ ಅವರು ಶಾಲೆಗೆ ಬಂದರೆ ನೇರವಾಗಿ ತರಗತಿಗೆ ಹೋಗಿ ಮಕ್ಕಳನ್ನ ಸಂದರ್ಶಿಸುತ್ತಿದ್ದರು ಮಕ್ಕಳಿಗೂ ನಮಗೂ ಸೂಕ್ತ ಮಾರ್ಗದರ್ಶನಗಳನ್ನು ನೀಡುತ್ತಿದ್ದರು ಎಂದು ಹೇಳಿದರು.
ಬಿಆರ್‌ಪಿ ಗಳು ಮತ್ತು ಸಿಆರ್‌ಪಿಗಳು ಮಾತನಾಡಿ, ಲಕ್ಷಣಗಳು ತಮ್ಮ ಕಚೇರಿಯಲ್ಲಿ ಸೇವೆ ಸಲ್ಲಿಸುವ ವೇಳೆ ಕೆಲಸ ಆಗಲಿ ಎಂಬ ಉದ್ದೇಶಕ್ಕೆ ನಮ್ಮ ಮೇಲೆ ಗದರಿದರು ಸಹ ಮಾತಲ್ಲಿ ನಗುಮೊಗದಲ್ಲಿ ಮತ್ತೆ ಇಡೀ ವಾತಾವರಣವನ್ನೇ ತಿಳಿಗೊಳಿಸುತ್ತಿದ್ದರು. ಅವರಲ್ಲಿ ಕರ್ತವ್ಯದಲ್ಲಿ ಕಾಳಜಿ ಇದೆ. ಸಹೋದ್ಯೋಗಿಗಳನ್ನು ಸಿಬ್ಬಂದಿಗಳನ್ನು ಉತ್ತಮವಾಗಿ ನೋಡಿಕೊಳ್ಳುತ್ತಾ ಇದ್ದರು. ವಿಶ್ರಾಂತ ಜೀವನ ಸಂತಸವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದಮೂರ್ತಿ, ಕಾರ್ಯದರ್ಶಿ ಜಯರಾಮ್, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣಕುಮಾರ್, ಪದಾಧಿಕಾರಿಗಳು ಉಪಸ್ಥಿತರಿದ್ದರು.