ಸರ್ಕಾರಿ ನಿಯಮ ಉಲ್ಲಂಘನೆ : ಪಿಡಿಓ ವಿರುದ್ಧ ಕ್ರಮಕ್ಕೆ ಒತ್ತಾಯ

ಲಿಂಗಸೂಗೂರು.ಏ.೨೫- ಇತ್ತೀಚಿನ ದಿನಗಳಲ್ಲಿ ಕೆಲ ಇಲಾಖೆ ಅಧಿಕಾರಿಗಳು ಹಿಟ್ಲರ್ ಮನೋಭಾವ ಹೊಂದಿರುವಾಗೇ ಕಾಣುತ್ತಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ತಾವು ಮಾಡಿದ್ದೇ ನಿಯಮ, ಆದೇಶ ಎಂಬಂತೆ ವರ್ತಿಸುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಈಚನಾಳ ಗ್ರಾಮದಲ್ಲಿ ೨೦೨೦-೨೦೨೧ ನೇ ಸಾಲಿನ ಪೆಭ್ರವರಿಯಲ್ಲಿ ನರೇಗಾ ಕಾರ್ಮಿಕರಿಗೆ ೨೭೫ ರೂ. ಕೂಲಿ ಬದಲು ೨೪೦ ರೂ. ಮೊತ್ತದ ಕೂಲಿ ಪಾವತಿ ಮಾಡುವ ಮೂಲಕ ಕೂಲಿಕಾರರ ಕೂಲಿಗೇ ಕತ್ತರಿ ಹಾಕುವ ಕೆಲಸ ಮಾಡಿದ್ದರು.
ಅಧಿಕಾರಿಗಳ ಈ ನಡೆಯನ್ನು ಪ್ರಶ್ನಿಸಿ ಮತ್ತು ಮಾರ್ಚ್ ತಿಂಗಳಲ್ಲಿ ನರೇಗಾ ಯೋಜನೆಯ ಕೆಲಸ ನೀಡುವಂತೆ ದಿನಾಂಕ ೦೭-೦೩-೨೦೨೧ ರಂದು ತಾಪಂ ಕಾರ್ಯಲಯದ ಮುಂದೆ ಕೆಲವು ಕಾರ್ಮಿಕರು ಧರಣಿ ನಡೆಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು.
ಮನವಿ ಸ್ಪಂದಿಸಿದ ನರೇಗಾ ಸಹಾಯಕ ನಿರ್ದೇಶಕರು ಮಾರ್ಚ್ ತಿಂಗಳಲ್ಲಿ ಒಂದು ವಾರದ ಮಟ್ಟಿಗೆಯಾದರೂ ಕೆಲಸ ನೀಡುವ ಭರವಸೆ ನೀಡಿದರು. ಆ ಭರವಸೆ ಕೂಡ ಹುಸಿ ಆಯಿತು. ತದನಂತರ ೨೦೨೧-೨೨ ನೇ ಸಾಲಿನಲ್ಲಿ ಏಪ್ರಿಲ್ ೧ ರಿಂದ ಖಂಡಿತಾ ಕೆಲಸ ನೀಡುತ್ತೇವೆ ಎಂದು ಭರವಸೆ ನೀಡಿದರು. ಅದೂ ಕೂಡ ಈಡೇರಲಿಲ್ಲ. ಈಗ ಅಂದ್ರೆ ೨೨ ನೇ ತಾರೀಖಿ ನಿಂದ ನರೇಗಾ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ.
ಆದರೆ ತಾಪಂ ಕಾರ್ಯಾಲಯದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ ಕಾರ್ಮಿಕರನ್ನು ಸುಮಾರು ೫ ಕಿಮೀ ದೂರದಲ್ಲಿ ನರೇಗಾ ಕೆಲಸ ನೀಡುವ ಮೂಲಕ ಗ್ರಾಮ ಪಂಚಾಯತ್ ಪಿಡಿಒ ಈ ಸೇಡು ತೀರಿಸಿಕೊಳ್ಳಲು ಮುಂದಾದ್ರ ಎಂದು ಕಾರ್ಮಿಕರು ಪರಸ್ಪರ ಮಾತನಾಡತೋಡಗಿದ್ದಾರೆ. ಏಕೆಂದರೆ ಕೆಲ ಕಾರ್ಮಿಕರಿಗೆ ಊರ ಸಮೀಪ ಕೆಲಸ ನೀಡಿದ್ದಾರೆ.
ನಮಗೆ ಮಾತ್ರ ಈ ರೀತಿ ದೂರ ಕೆಲಸ ಹಾಕಿದ್ದಾರೆ ಎಂದು ಕಾರ್ಮಿಕರ ಅಭಿಪ್ರಾಯ. ಅದಲ್ಲದೇ ಎನ್‌ಎಮ್‌ಆರ್ ದಾಖಲೆಯಲ್ಲಿ ನಿಗದಿಪಡಿಸಿದ ದಿನಾಂಕ್ಕಿಂತ ಒಂದು ದಿನ ಮೊದಲೇ ಕೆಲಸಕ್ಕೆ ಹಾಜರಾಗಲು ಸಂಬಂಧಪಟ್ಟ ಮೇಟ್‌ಗಳ ಕೈಗೇ ಕೆಲಸದ ಎನ್ ಎಮ್‌ಆರ್ ದಾಖಲೆಗಳನ್ನ ನೀಡುವುದು ನಿಯಮ. ಆದರೆ ಗ್ರಾಮ ಪಂಚಾಯತ್ ಅಧಿಕಾರಿಗಳು ಒಂದು ದಿನ ತಾವೇ ಕಾರ್ಮಿಕರ ಗೈರು ಹಾಜರಾಕಿ ಕಾರ್ಮಿಕರಿಗೆ ಸಿಗುವ ಒಂದು ದಿನದ ಗೈರು ಹಾಜರಿಯ ಅನುಕೂಲಕ್ಕೂ ಅಧಿಕಾರಿಗಳು ಕತ್ತರಿ ಹಾಕುತ್ತೀರುವುದು ಈಚನಾಳ ಗ್ರಾಮ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿತನ ಕ್ಕೆ ಹಿಡಿದ ಕೈಗನ್ನಡಿ ಆಗಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಈಚನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಾಕಷ್ಟು
ಬಾರಿ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇಂತಹ ಅಧಿಕಾರಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿ ಸಾರ್ವಜನಿಕ ಸಮಸ್ಯೆಗಳ ಬಗೆಹರಿಸಲು ಅಧಿಕಾರಿಗಳು ಅಭಿವೃದ್ದ ಮಾಡದೆ ಅನಗತ್ಯವಾಗಿ ತೊಂದರೆ ಉಂಟುಮಾಡುತ್ತಿದ್ಧಾರೆ . ಕೂಡಲೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ತಮ್ಮ ಈಚನಾಳ ಗ್ರಾಮಪಂಚಾಯತ ಪಿಡಿಓ ಹಟಾವೋ ಈಚನಾಳ ಗ್ರಾಮಪಂಚಾಯತ ಬಚಾವ್ ಎಂಬ ಹೊರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶರಣಬಸವ ಹಾಗೂ ಹನುಮಂತಪ್ಪ ಹುಲುಗಪ್ಪ
ಕರಿಯಪ್ಪ ನಾಗಪ್ಪ ಗದ್ದೆಪ್ಪ ಇವರುಗಳು ಸೇರಿದಂತೆ ಇತರರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.