ಸರ್ಕಾರಿ ಡಿವಿಜಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಲೋಕಾರ್ಪಣೆ

ಮುಳಬಾಗಿಲು,ಜು,೮-ಹಣವಂತರು ಪ್ರಪಂಚದ ಎಲ್ಲಾ ಕಡೆ ಸಿಗುತ್ತಾರೆ ಸಂಪತ್ತು ಇದ್ದು ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ ಇಂತಹ ಸಮಯದಲ್ಲಿ ಅನುವಾಸಿ ಭಾರತೀಯರು ಓಸ್ಸಾಟ್ ಸಂಸ್ಥೆಯನ್ನು ಅಮೇರಿಕಾದಲ್ಲಿ ಸ್ಥಾಪನೆ ಮಾಡಿ ದೇಶದಲ್ಲಿ ಓಸ್ಸಾಟ್ ಶೈಕ್ಷಣಿಕ ಧರ್ಮದತ್ತಿ ಮೂಲಕ ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ಕಟ್ಟುವ ಕಾಯಕದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಶಾಸಕ ಸಮೃದ್ದಿ ವಿ.ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು.
ಓಸ್ಸಾಟ್ ಸಂಸ್ಥೆಯವರು ಮುಳಬಾಗಿಲು ನಗರದ ಕುಂಬಾರಪಾಳ್ಯ ಸರ್ಕಾರಿ ಡಿವಿಜಿ ಹಿರಿಯ ಪ್ರಾಥಮಿಕ ಶಾಲೆಯನ್ನು ೨ ಕೋಟಿ ೪೫ ಲಕ್ಷದಲ್ಲಿ ಅಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿದ್ದು ಇದನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಊರಿಗೊಂದು ಶಾಲೆ ಇರಬೇಕು ಅದರೆ ಬಹುತೇಕ ಶಾಲೆಗಳು ಶಿಥಿಲಾವ್ಯವಸ್ಥೆ ತಲುಪಿ ಮೂಲಭೂತ ಸೌಲಭ್ಯಗಳು ವಂಚಿತವಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಇದಕ್ಕೆ ಕಾರಣ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದಿರುವುದೇ ಕಾರಣವಾಗಿದೆ, ರಾಜಕೀಯ ಅಧಿಕಾರದ ಆಸೆಗಾಗಿ ಬಿಟ್ಟಿಭಾಗ್ಯಗಳನ್ನು ನೀಡುವ ಮೂಲಕ ಅಗತ್ಯ ಸೌಲಭ್ಯಗಳು ಇಲ್ಲವಾಗಿದೆ, ಈ ಮಧ್ಯೆಯೂ ಇಂತಹ ಸಂಸ್ಥೆಗಳು ಸರ್ಕಾರಿ ಶಾಲೆಗಳ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗುವ ಮೂಲಕ ದೇಶದ ಶೈಕ್ಷಣಿಕ ವ್ಯವಸ್ಥೆಗೆ ಭದ್ರ ಅಡಿಪಾಯ ಹಾಕುತ್ತಿದ್ದು ನಾವು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಗ್ರಾಮದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ, ಈ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಸಮೃದ್ದಿ ಮಂಜುನಾಥ್ ಹೇಳಿದರು.
ಮುಳಬಾಗಿಲು ರಾಜ್ಯದ ಗಡಿ ತಾಲ್ಲೂಕು ಆಗಿದ್ದು ಅಭಿವೃದ್ದಿಯೇ ಕಂಡಿಲ್ಲ ಎಂದ ಸಮೃದ್ದಿ ಮಂಜುನಾಥ್, ಕೋಲಾರ ಜಿಲ್ಲೆಯಿಂದ ೪ ಕಾಂಗ್ರೇಸ್ ಶಾಸಕರೂ ಇದ್ದರು ಮಂತ್ರಿ ಪದವಿ ಸಿಕ್ಕಿಲ್ಲ ಹೊರಗಿನವರೇ ಉಸ್ತುವಾರಿ ಸಚಿವರಾಗಿದ್ದಾರೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲದಿರುವುದು ಸರ್ಕಾರದಲ್ಲಿ ಕಾಣಲಾಗುತ್ತಿದೆ, ಧಾರ್ಮಿಕ ಪ್ರವಾಸಿ ಪುಣ್ಯ ಕ್ಷೇತ್ರಗಳು ಇದ್ದರೂ ಅಭಿವೃದ್ದಿ ಶೂನ್ಯವಾಗಿದೆ, ಪಕ್ಕದ ಆಂಧ್ರವನ್ನು ನೋಡಿಕಲಿಯಬೇಕಾಗಿದೆ ಎಂದರು.
ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪ್ಪ ಮಕ್ಕಳಾದ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಡಿ.ವಿ.ಗುಂಡಪ್ಪ, ಬಿಜಿಎಲ್ ಸ್ವಾಮಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಮರವಾಗಿ ಉಳಿಯತ್ತದೆ, ಮಂಕುತಿಮ್ಮನ ಕಗ್ಗದ ೯೪೫ ಎಫಿಸೋಡ್‌ಗಳನ್ನು ತೋರಿಸುವಷ್ಟು ಆಗಾದವಾದ ಜ್ಞಾನವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಓಸ್ಸಾಟ್ ಸಂಸ್ಥೆಯ ಟ್ರಸ್ಟಿ ವಾಧಿರಾಜ್ ಭಟ್ ಮಾತನಾಡಿ, ಡಿವಿಜಿ ಹೆಸರು ಉಳಿಸಲು ಪರಂಪರೆ ಮುಂದುವರೆಸಲು ನೆರವಾಗುವ ಸ್ಮಾರಕವಾಗಿದೆ, ಎಲ್ಲಾ ಜನರಿಗೂ ಮುಕ್ತ ಪ್ರವೇಶ ಹೊಂದಿರುವಂತಹ ಡಿವಿಜಿ ಗ್ರಂಥಾಲಯ ಒಳಗೊಂಡ ಭವ್ಯಕಟ್ಟಡವಾಗಿದೆ ಇದಕ್ಕೆ ಓಸ್ಸಾಟ್ ಸಂಸ್ಥೆಯ ಮಹಾಧಾನಿಗಳ ನೆರವು ಅಮೂಲ್ಯವಾಗಿದೆ ಎಂದರು.
ಡಿ.ಸಿ ಅಕ್ರಂ ಪಾಷಾ, ಹಾಸ್ಯಗಾರರಾದ ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮುನಿ, ಬಿಇಓ ಕೆ.ಆರ್.ಗಂಗರಾಮಯ್ಯ, ಶಾಲೆಯ ಮುಖ್ಯಶಿಕ್ಷಕ ಸಿ.ಸೊಣ್ಣಪ್ಪ, ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ, ತಹಸೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ, ತಾ.ಪಂ. ಇ.ಓ ಡಾ.ಕೆ.ಸರ್ವೇಶ್, ಪೌರಾಯುಕ್ತ ವಿ.ಶ್ರೀಧರ್, ನಗರಸಭೆ ಸದಸ್ಯ ಎಸ್.ವೈ.ರಾಜಶೇಖರ್, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಕೆ.ಶಂಕರಕೇಸರಿ, ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಮಧುಸೂಧನ ಇದ್ದರು.
ಓಸ್ಸಾಟ್ ಸಂಸ್ಥೆಯವರು ಮುಳಬಾಗಿಲು ನಗರದ ಕುಂಬಾರಪಾಳ್ಯ ಸರ್ಕಾರಿ ಡಿವಿಜಿ ಹಿರಿಯ ಪ್ರಾಥಮಿಕ ಶಾಲೆಯನ್ನು ೨ ಕೋಟಿ ೪೫ ಲಕ್ಷದಲ್ಲಿ ಅಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಶಾಲಾ ಕಟ್ಟಡ ಲೋಕಾರ್ಪಣೆಗೊಳಿಸಿದರು. ಶಾಸಕ ಸಮೃದ್ದಿ ವಿ.ಮಂಜುನಾಥ್, ಚಿತ್ರನಟ ರಮೇಶ್ ಅರವಿಂದ್, ಡಿ.ಸಿ. ಅಕ್ರಮ ಪಾಷಾ, ಎಸ್.ಪಿ ಎಂ.ನಾರಾಯಣ, ಬಿಇಓ ಕೆ.ಆರ್.ಗಂಗರಾಮಯ್ಯ ಇದ್ದರು.