ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಸರ್ವೆ

ಕೆಜಿಎಫ್:ಡಿ:೨೨: ದಲಿತ ಸಂಘರ್ಷ ಸಮಿತಿ ಮುಖಂಡರಾದ ದಾಸ್ ಹಾಗೂ ಶಿವಶಂಕರ್ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಪಾರಾಂಡಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಗುಟ್ಟಹಳ್ಳಿ ಗ್ರಾಮದ ಸ.ನ. ೬ ರಲ್ಲಿ ಗೋಮಾಳ ಜಮೀನು ಒತ್ತುವರಿ ಮಾಡಿಕೊಂಡಿದ್ದು ಸರ್ವೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಲು ಆದೇಶ ನೀಡಬೇಕೆಂದು ದೂರು ನೀಡಿದರ ಮೇರೆಗೆ ಸರ್ವೆ ಅಧಿಕಾರಿ ಮೌಲಖಾನ್,ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ,ಗ್ರಾಮ ಲೆಕ್ಕಾಲಿಗ ಮಲ್ಕಪ್ಪ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸರ್ವೇ ಕಾರ್‍ಯವನ್ನು ಕೈಗೊಳ್ಳಲಾಯಿತು .
ಸರ್ವೇ ನೀಡಿರುವ ವರದಿಯಲ್ಲಿ ಸರ್ವೆ ನಂ ೬ ರಲ್ಲಿ ೬ ಎಕರೆ ಜಮೀನು ಇದ್ದು ಇದರಲ್ಲಿ ಮನೆಗಳು ಸೈಟುಗಳು ಇರುತ್ತವೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ತಹಶೀಲ್ದಾರ್ ಗೆ ವರದಿ ನೀಡುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ದಲಿತ ಮುಖಂಡ ದಾಸ್ ಗುಟ್ಟಹಳ್ಳಿ ಗ್ರಾಮದ ಸ.ನ. ೬ ರನ್ನು ೫ ಬ್ಲಾಕ್‌ಗಳನ್ನಾಗಿ ವಿಂಗಡಿಸಿದ್ದು ಬ್ಲಾಕ್ ೨ ರಲ್ಲಿ ಒಟ್ಟು ವಿಸ್ಥೀರ್ಣ ೧ ಎಕರೆ ೧೫ ಗುಂಟೆ ಪ್ರದೇಶ ಇದ್ದು ೩ ಗುಂಟೆ ವಿರ್ಸ್ಥೀಣವು ಪಕ್ಷಿಮ ಭಾಗದವರು ಒತ್ತುವರಿ ಮಾಡಿಕೊಂಡಿದ್ದರೆ ಬ್ಲಾಕ್ ೪ ರಲ್ಲಿ ಒಟ್ಟು ವಿರ್ಸ್ಥೀಣ ೨ ಎಕರೆ ೧೦ ಗುಂಟೆ ಪ್ರದೇಶವು ಒತ್ತುವರಿಯಾಗಿದ್ದು ಬ್ಲಾಕ್ ೫ ರಲ್ಲಿ ವಿರ್ಸ್ಥೀಣ ೧ ಎಕರೆ ೧೦ ಗುಂಟೆ ಪ್ರದೇಶವು ಒತ್ತುವರಿಯಾಗಿದೆ ಸರ್ಕಾರಿ ಜಮೀನುಗಳನ್ನು ಕಬಳಿಸಿರುವ ಪ್ರಭಾವಿ ವಿರುದ್ಧ ಕಾನೂನು ಕ್ರಮಕೈಗೊಂಡು ಸರ್ಕಾರಿ ಜಮೀನನ್ನು ಸರ್ಕಾರ ಉಳಿಸಿಕೊಂಡು ನಿವೇಶನವಿಲ್ಲದ ಬಡವರಿಗೆ ನಿವೇಶನವನ್ನು ವಿತರಿಸುವ ಕೆಲಸವನ್ನು ಮಾಡಬೇಕು ಅಧಿಕಾರಿಗಳು ಸರ್ಮಪಕವಾಗಿ ಸರ್ವೆ ನಡೆಸಿ ವರದಿಯನ್ನು ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.