ಸರ್ಕಾರಿ ಜಮೀನನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ

ಲಿಂಗಸೂಗೂರು,ಜು.೩೧-ತಾಲ್ಲೂಕಿನ ಚಿತ್ರಾಮರ ಗ್ರಾಮದ ಸರ್ವೆ ನಂಬರ್ ೫೯ರಲ್ಲಿ ೩೫ ಎಕರೆ ೩೪ ಗುಂಟೆ ಗರಾಯಣಿ ಜಮೀನು ಸರಕಾರದ ಜಮೀನು ಎಂದು ಪಹಣಿಯಲ್ಲಿ ಇರುತ್ತದೆ. ಇದೇ ರೀತಿಯಾಗಿ ಸರ್ವೇ ನಂಬರ್ ೫೬ ರಲ್ಲಿ ಕ್ಷೇತ್ರ ೨೫ ಎಕರೆ ೩೫ ಗುಂಟೆ ಜಮೀನು ಪಹಣಿ, ಭೂ ರಹಿತ ಬಡ ಕುಟುಂಬಗಳಿಗೆ ಹಂಚಿಕೆ ಮಾಡುವ ಬದಲಾಗಿ ಇಂದಿನ ಹಸಿಲ್ದಾರರು. ಆಂಧ್ರದ ಮೂಲದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಿಮವಾದ ಸಂಘಟನೆಯ ಸದಸ್ಯರು ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ವ್ಯವಸಾಯ ಮಾಡುವವರು ಇಲಾಖೆಯ ನಿಯಮಾನುಸಾರದ ವಿರುದ್ಧ ವಾಗಿ ಭೂಮಿ ಉಳಿಮೆ.ಆಂದ್ರ.ಮೂಲದ.ಮಾಲಿಕರು ಮಾಡುತ್ತಿದ್ದಾರೆ. ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಂಡು ಸಾಗುವಳಿಯನ್ನು ನಿಲ್ಲಿಸಬೇಕು.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಲಿಂಗಸೂಗೂರು ಹೋಬಳಿಯ ಚಿತಾಪುರ ಗ್ರಾಮದ ಸರ್ವೆ ನಂಬರ್ ೫೯ ರಲ್ಲಿ ಕ್ಷೇತ್ರ ೩೫ ಎಕರೆ ೩೫ ಗುಂಟೆ ಸರ್ವೆ ನಂಬರ್ ೫೬ ರಲ್ಲಿ ೨೫ ಎಕರೆ ೩೫ ಗುಂಟೆ ಸರಕಾರದ ಜಮೀನು ಆಗಿರುತ್ತದೆ.ಎರಡು ಜಮೀನುಗಳನ್ನು ಅಕ್ರಮವಾಗಿ ಆಂಧ್ರದ ಮೂಲದವರು ಕಂದಾಯ ಇಲಾಖೆಯಲ್ಲಿ ಈ ಇಂದಿನ ತಹಶೀಲ್ದಾರ ಸದ್ಯ ನಿವೃತ್ತಿ ಹೊಂದಿದ ಚಾಮರಾಜ ಪಾಟೀಲ್ ಇವರು ಆಂಧ್ರ ಮೂಲದ ವ್ಯಕ್ತಿಯ ಜೊತೆಗೆ ಶ್ಯಾಮೀಲಾಗಿ ಸರಕಾರದ ಗಾರಾಯಣಿ “ಭೂಮಿ ಇವರ ಹೆಸರನ್ನು ಸೇರಿಸಲಾಗಿದೆ ಎಂದು ಪಹಣಿ ಪತ್ರಿಕೆಯಲ್ಲಿ ಕಂಡುಬಂದಿದೆ ಇದರಿಂದ ತಾಲ್ಲೂಕಿನ ಹಿಂದಿನ ದಂಡಾಧಿಕಾರಿ ಸಂಪೂರ್ಣವಾಗಿ ಅಕ್ರಮವಾಗಿ ಸರಕಾರದ ಭೂಮಿ ಖಾಸಗಿ ವ್ಯೆಕ್ತಿಗೆ ಮಾರಾಟ ಮಾಡಿದ್ದಾರೆ ಎಂಬುದು ಸಾಬೀತಾಗಿದೆ. ಸರಕಾರದ ಭೂಮಿಯನ್ನು
ಅಂಧ್ರದ ಮೂಲದವರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವರ ಅವರ ವಿರುದ್ಧ ಸೂಕ್ತ ಕ್ರಮ ಕೈಗೂಳ್ಳಬೇಕು.
ಈ ಭೂಮಿಗಳನ್ನು ಭೂ ರಹಿತ ಕುಟುಂಬಗಳಿಗೆ ಚಿತ್ತಾಪರ ಗ್ರಾಮದ ಮತ್ತು ಇಲಾಖೆಯ ನಿಯಮಾ ನುಸಾರ ಸುತ್ತಮುತ್ತಲಿನ ಗ್ರಾಮಗಳ ಭೂ ರಹಿತ ಕುಟುಂಬಗಳನ್ನು ಕಡೆಗಣಿಸಿ ಅಂಧ್ರದ ಮೂಲದ ವರಿಗೆ ಅಕ್ರಮವಾಗಿ ಸಗುವಳಿ ಮಾಡಲು ಅವಕಾಶ ನೀಡಿದ ತಮ್ಮ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈಗಾಗಲೇ ಇಂದಿನ ಮಾನ್ಯ ಸಹಾಯಕ ಆಯುಕ್ತರು ಮೇಲಿನ ಉಲ್ಲೇಖ ಎರಡರ ಪ್ರಕಾರ ಆದೇಶ ಮಾಡಿ ಸರ್ವೆ ನಂಬರ್ ೫೯ ಮತ್ತು ಸರ್ವೆ ನಂಬರ್ ೫೬ ಈ ಎರಡು ಜಮೀನುಗಳು ಕರ್ನಾಟಕ ಸರಕಾರದ ಭೂಮಿ ಎಂದು ಆದೇಶ ಇದ್ದರು.
.ಒಂದು ವೇಳೆ ನಮ್ಮ ಲಿಂಗಸುಗೂರು ತಾಲ್ಲೂಕಿನ ಕರ್ನಾಟಕದ ಭೂ ರಹಿತ ಕುಟುಂಬಗಳನ್ನು ಗುರುತಿಸಿ ಭೂಮಿ ಮಂಜೂರು ಮಾಡಲು ಮುಂದಾಗಬೇಕು
ಭೂ ರಹಿತ ಕುಟುಂಬಗಳನ್ನು ಕಡೆಗಣಿಸಿದ: ತಾಲೂಕು ಆಡಳಿತ
ಚಿತ್ತಾಪುರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಈ ಜಮೀನನ್ನು ದಲಿತ ಅಸ್ಪುಶ್ಯರು ದಮನಿತ ವರ್ಗಗಳಿಗೆ ಭೂ ರಹಿತ ಕುಟುಂಬಗಳಿಗೆ ಈ ಸರ್ಕಾರಿ ಭೂಮಿ ಮಂಜೂರು ಮಾಡಿಕೊಡುವ ನಿಟ್ಟಿನಲ್ಲಿ ಸಾಮಾಜಿಕ ಪರಿಕಲ್ಪನೆ ಅಡಿಯಲ್ಲಿ ಶೋಷಣೆಗೊಳಗಾದ ಜನರಿಗೆ ಕೊಡಲು ತಾಲುಕು ಆಡಳಿತ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭೂ ರಹಿತ ಕುಟುಂಬಗಳ ಜೋತೆ ಸೇರಿಕೊಂಡು ತಾಲುಕು ಆಡಳಿತ ವ್ಯವಸ್ಥೆ ವಿರುದ್ಧ ತಹಶೀಲ್ದಾರ್ ಕಾರ್ಯಲಯದ ಮುಂದೆ ಹೊರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಯಂಕಪ್ಪ ಚಿತ್ತಾಪುರ ಎಚ್ಚರಿಕೆ ನೀಡಿದ್ದಾರೆ.
ಆಂಧ್ರದ ಮೂಲದ ವರಿಗೆ ಮಾಡಿಸಿ ಕೊಟ್ಟ ಅಧಿಕಾರಿಗಳ ಮೇಲೆ ಸುಮಾರು ವರ್ಷಗಳಿಂದ ಅಕ್ರಮವಾಗಿ ಸಾಗುಳಿ ಮಾಡಲು ಅವಕಾಶ ಮಾಡಿಕೊಟ್ಟು ಅವರ ಹೆಸರಿನಲ್ಲಿ ವರ್ಗಣೆ ಮಾಡಲು ಮುಂದಾಗಿದ್ದನ್ನು ಭೂ ರಹಿತ ಕುಟುಂಬಗಳು ಹಾಗೂ ವಿವಿಧ ದಲಿತಪರ ಸಂಘಟನೆಗಳು ಈ ಕಾರ್ಯಾಲಯದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಹಾಲಭಾವಿ, ಮೌನೇಶ್ ಗುಡುದುನಾಳ, ಯಮನೂರ್ ಸರ್ಜಾಪುರ್ ಕೆಂಚಪ್ಪ ಮ್ಯಾಗಳಮನಿ ಸೋಮಣ್ಣ ಕರಡಿ ಇತರರು ಇದ್ದರು.