ಸರ್ಕಾರಿ ಗೌರವಗಳೊಂದಿಗೆ ಪಿಎಸ್ಸೈ ಅವಿನಾಶರ ಅಂತ್ಯಕ್ರಿಯೆ

ಬಸವಕಲ್ಯಾಣ: ಜು.26:ಆಂಧ್ರ ಪ್ರದೇಶದ ಚಿತ್ತೂರ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪಿಎಸ್‍ಐ ಅವಿನಾಶ ಕಾಶಿನಾಥ (28) ಅವರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ತಾಲ್ಲೂಕಿನ ದಾಸರವಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಬೆಂಗಳೂರಿನ ಶಿವಾಜಿನಗರ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅವಿನಾಶ ಜುಲೈ 24ರಂದು ಗಾಂಜಾ ಮಾರಾಟಗಾರರ ಪತ್ತೆಗೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿತ್ತು. ಇವರೊಂದಿಗೆ ಇನ್ನಿಬ್ಬರು ಸಾವನ್ನಪ್ಪಿದ್ದರು.

ದಾಸರವಾಡಿಯಲ್ಲಿನ ಅವರ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿತು. ಪೆÇಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.

ಐಜಿಪಿ ಮನೀಷ ಕರ್ಬಿಕರ್, ಶಾಸಕರಾದ ರಾಜಶೇಖರ ಪಾಟೀಲ, ಶರಣು ಸಲಗರ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮತ್ತು ಗ್ರಾಮಸ್ಥರು ಇದ್ದರು.