ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಸಚಿವ ಲಿಂಬಾವಳಿ ಭೇಟಿ

ಕೆ.ಆರ್.ಪುರ, ಏ.೩೦-ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಲಿ ಅವರು ಪರಿಶೀಲನೆ ನಡೆಸಿದರು.
ಮಹದೇವಪುರ ಕ್ಷೇತ್ರದ ರೈನ್ಬೋ ಆಸ್ಪತ್ರೆ,ಆವಲಹಳ್ಳಿ, ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ,ಕೊಲಾಂಬಿಯಾ ಏಶಿಯಾ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ,ಈಸ್ಟ್ ಪಾಯಿಂಟ್ ಆಸ್ಪತ್ರೆ ಸೇರಿದಂತೆ ಬರೋಕ ಗ್ಯಾಸ್ ಆಮ್ಲಜನಕ ಪೂರೈಕೆ ಬಗ್ಗೆ ಸಂಬಂಧಿಸಿದಂತೆ ವಿವರಗಳನ್ನು ಪಡೆದರು.
ಕ್ಷೇತ್ರದ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ, ಕೋವಿಡ್ ನಿಂದ ಸಾವನ್ನಪ್ಪಿರುವ ಪ್ರಕರಣಗಳ ಸಂಖ್ಯೆ ಹಾಗೂ ಕೋವಿಡ್ ರೋಗಿಗಳ ಚಿಕಿತ್ಸಾ ವಿಧಾನಗಳನ್ನು ಪರಿಶೀಲನೆ ನಡೆಸಿದರು, ಅಲ್ಲದೇ ಮಹದೇವಪುರ ಕ್ಷೇತ್ರದ ರೋಗಿಗಳಹರಡುತ್ತಿರು
ದ್ಯತೆ ನೀಡುವಂತೆ ಮನವಿ ಮಾಡಿದರು.
ರೆಮ್ಡಿಸಿವಿರ್, ಕೊವಿಡ್ ವ್ಯಾಕ್ಸಿನ್, ಆಕ್ಸಿಜನ್, ಸರ್ಕಾರದ ಕೋಟಾದ ಹಾಸಿಗೆಗಳ ಬಗ್ಗೆ ಮಾಹಿತಿ ಪಡೆದು ಕೊಂಡರು ಅಲ್ಲದೇ ಯಾವ ರೋಗಿಗೂ ತೊಂದರೆ ಆಗಬಾರದು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಉಚಿತವಾಗಿ ನೀಡಿ ಸರ್ಕಾರದ ಜೋತೆ ಕೈಜೋಡಿಸುವಂತೆ ತಿಳಿಸಿದರು.
ಬೊರೊಕೊ ಗ್ಯಾಸ್ ಸಂಸ್ಥೆ ಗೆ ಬೇಟಿ ನೀಡಿ ಆಡಳಿತ ಮಂಡಳಿ ಮುಖ್ಯಸ್ಥ ರೊಂದಿಗೆ ಮಾತನಾಡಿ ನಂತರ ಆಕ್ಸಿಜನ್ ಪ್ಲಾಂಟ್ ವೀಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗಳಿಗೆ ಆಕ್ಸಿಜನ್ ಒದಗಿಸಿ ಕೊಡುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಾಚಲಪತಿ, ತಹಶಿಲ್ದಾರ್ ಅಜಿತ್ ರೈ, ಡಿಸಿಪಿ ದೇವರಾಜ್, ಟಿಹೆಚ್‌ಒ ಡಾ.ಚಂದ್ರಶೇಖರ್, ಡಿಹೆಚ್‌ಒ ಸುರೇಂದ್ರ, ಜಲ ಮಂಡಳಿ ಇಇ ಮಿರ್ಜಾ, ಕ್ಷೇತ್ರದ ಅದ್ಯಕ್ಷರಾದ ಮನೋಹರ್ ರೆಡ್ಡಿ, ನಟರಾಜ್ , ಮುಖಂಡರಾದ ಎಲ್.ರಾಜೇಶ್, ರಾಜಾರೆಡ್ಡಿ ಪಿಳ್ಳಪ್ಪ,ಆವಲಹಳ್ಳಿ ಕಿಶೋರ್ ಇದ್ದರು.