ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮಿನಿ ವಿಜ್ಞಾನ ಕೇಂದ್ರ

ಗುರುಮಠಕಲ್:ಎ.4: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮಿನಿ ವಿಜ್ಞಾನ ಕೇಂದ್ರ ಸರ್ಕಾರೆತರ ಸಂಸ್ಥೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಸರ್ಕಾರದ ಶಿಕ್ಷಣ ಇಲಾಖೆಯ ಸಹಭಾಗಿತ್ವದೊಂದಿಗೆ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 21 ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಗೊಂಡಿದ್ದು ಅದರಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆ ಗುರುಮಠಕಲ್ ನಲ್ಲಿ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮಿನಿ ವಿಜ್ಞಾನ ಕೇಂದ್ರವೂ ಒಂದು ಅಂತ ಹೇಳಬಹುದು. ಈ ಒಂದು ವಿಜ್ಞಾನ ಕೇಂದ್ರದಲ್ಲಿ ಚಟುವಟಿಕೆಗಳನ್ನು ಮಾಡುವ ಉದ್ದೇಶ ವೆನಂದರೆ ಮಕ್ಕಳಲ್ಲಿ ಕ್ರಿಯ ಶೀಲತೆಯನ್ನು ತಂದು ಕೊಡುವಂತಹ ಉದ್ದೇಶವನ್ನಿಟ್ಟು ಕೊಂಡು ಮಕ್ಕಳಿಗೆ ಚಟುವಟಿಕೆಯ ಆಧಾರಿತವಾಗಿ ಆಯ್ಕೆಮಾಡಿ ಕೊಂಡು ಮಕ್ಕಳನ್ನು ಚಟುವಟಿಕೆಗಳಲ್ಲಿ ಮುಂದುವರಿಸಿಕೊಂಡು ಮಕ್ಕಳಿಂದ ಚಟುವಟಿಕೆಗಳನ್ನು ಮಾಡಿದಾಗ ಮಕ್ಕಳಲ್ಲಿ ಮೊದಲನೆಯದಾಗಿ ಕ್ರಿಯಾಶೀಲತೆ ಬರುತ್ತದೆ. ಅದೇರೀತಿ ಮಕ್ಕಳಿಗೆ ಚಟುವಟಿಕೆಯನ್ನು ಕೊಟ್ಟಾಗ ಕ್ರಿಯಾತ್ಮಕವಾಗಿ ಮಕ್ಕಳು ಚಟುವಟಿಕೆಯನ್ನು ಮಾಡುತ್ತಾರೆ. ಮಕ್ಕಳು ಬೇರೆಯವರಿಗೆ ಹೇಳುವುದಕ್ಕೆ ಪ್ರಯತ್ನಪಡುತ್ತಾರೆ ಮಕ್ಕಳಿಗೆ ಚಟುವಟಿಕೆಗಳಲ್ಲಿ ಮನಸ್ಥೈರ್ಯ ಬರುವದಕ್ಕೆ ಮತ್ತು ಒಬ್ಬರಿಗೊಬ್ಬರು ತಿಳಿದುಕೊಳ್ಳುವ ಉದ್ದೇಶ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಉದ್ದೇಶವಾಗಿದೆ. ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಸಂಸ್ಥೆಯು ಸುಮಾರು 25 ವರ್ಷಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ 27 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅಂತಹದ್ದರಲ್ಲಿ ಚಟುವಟಿಕೆಗಳನ್ನು ಮಾಡಿಕೊಂಡು ಹೋಗುವಾಗ ಶಾಲೆಗಳಲ್ಲಿ ಆ ಮಕ್ಕಳಿಗೆ ಪಠ್ಯಪುಸ್ತಕಗಳ ಅನುಗುಣವಾಗಿ ಚಟುವಟಿಕೆಗಳು ಈ ವಿದ್ಯಾವರ್ಧಕ ಕೇಂದ್ರದಲ್ಲಿ ನಡೆಯುತ್ತವೆ. ಬೇಸಿಗೆಯ ಸಮಯದಲ್ಲಿ ಶಿಬಿರವನ್ನು ಮಾಡುತ್ತೇವೆ ಶಿಬಿರದಲ್ಲಿ ಮತ್ತೆ ಪುನಃ ಮಾದರಿ ಗುಂಪುಗಳನ್ನು ತಯಾರು ಮಾಡುವುದು ಚಟುವಟಿಕೆಗಳನ್ನು ತಯಾರು ಮಾಡುತ್ತಾ ಇದ್ದೇವೆ. ಈ ಒಂದು ಗುರುಮಠಕಲ್ ಶಾಲೆಯಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವದಕ್ಕೆ ಮಾರ್ಗದರ್ಶಕರಾಗಿ ನಾಗೇಶ್ ಡಿ. ಅವರನ್ನು ನೇಮಕ ಮಾಡಿದ್ದೇವೆ. ಪ್ರಸ್ತುತ ವಿಜ್ಞಾನ ಕೇಂದ್ರದಲ್ಲಿ ನಡೆಸಿಕೊಂಡು ಹೋಗುವಂತಹ ಚಟುವಟಿಕೆಗಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟಲಗೇರ. ಕಾಕಲವಾರ ಬೇಸ್. ಮಲ್ಲಯ್ಯ ಕಟ್ಟ ಹರಿಜನವಾಡ ಶಾಲೆಯ ಮಕ್ಕಳು ಬೇರೆ ಬೇರೆ ಶಾಲೆಯ ಮಕ್ಕಳು ಇಲ್ಲಿ ಸೇರಿಕೊಂಡಿದ್ದಾರೆ ನಮಗೆ ಸಮಗ್ರ ಕರ್ನಾಟಕ ಶಿಕ್ಷಣ ಯೋಜನೆ ಅಡಿಯಲ್ಲಿ ನಮ್ಮ ಯಾದಗಿರಿ ಜಿಲ್ಲೆ ಅನ್ವಯ ಶಿಕ್ಷಣ ಕರ್ನಾಟಕದ ಅನ್ವಯದಲ್ಲಿ ಉಪನಿರ್ದೇಶಕರು ಮತ್ತು ಯಾದಗಿರಿ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಸಮಗ್ರ ಶಾಲಾ ಎಲ್ಲಾ ಶಿಕ್ಷಕ ವೃಂದದವರು ಸಂಪೂರ್ಣ ಸಹಕಾರ ನೀಡಿ ಈ ಒಂದು ಶಾಲೆಯಲ್ಲಿ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಿ ಈ ಎಲ್ಲಾ ಶಾಲೆಯಲ್ಲಿ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಇದು ಒಂದು ಉಚಿತವಾಗಿ ನಡೆಯುವ ಶಿಬಿರವಾಗಿರುವುದರಿಂದ ಮಕ್ಕಳಿಗೆ ಸೃಜನಾತ್ಮಕ ವನ್ನು ಹುಟ್ಟಿಹಾಕುವಂತದ್ದು ಕಾರ್ಯಕ್ರಮವಾಗಿರುವುದರಿಂದ ಹೆಚ್ಚಿನ ಮಕ್ಕಳಿಗೆ ಅವಕಾಶವಿರುವುದರಿಂದ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಪಾಲಕರಿಗೆ ವಿನಯ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಪ್ರಾದೇಶಿಕ ಮುಖ್ಯಸ್ಥರು ಶ್ರೀ ಸುಬ್ರಹ್ಮಣ್ಯ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಇದು ಬೇಸಿಗೆಯ ಶಿಬಿರವಷ್ಟೇ ಅಲ್ಲದೆ ನಿರಂತರವಾಗಿ ಐದು ವರ್ಷಗಳ ತನಕ ನಡೆಯುವಂತಹ ಶಿಬಿರ ಇರುವುದರಿಂದ ನಾವು ಚಟುವಟಿಕೆ ಕಾರ್ಯಕ್ರಮ ಮಾಡುತ್ತೇವೆ ಐದು ವರ್ಷಗಳ ತನಕ ಶಿಕ್ಷಣ ಇಲಾಖೆಯ ಒಡಂಬಡಿಕೆ ಯೊಂದಿಗೆ ಈ ಕಾರ್ಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಯಾವುದೇ ತರಹದ ವಿದ್ಯಾರ್ಥಿಗಳಿಂದ ಶುಲ್ಕವನ್ನು ತೆಗೆದುಕೊಳ್ಳಲಾರದೆ ಸಂಪೂರ್ಣವಾಗಿ ಉಚಿತವಾಗಿ ನೀಡುವಂತಹದ್ದು. ಐದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ನಡೆಯುವಂತಹ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ ಎಂದು ತಿಳಿಸಿದರು ಈ ವೇಳೆ ಗುರುಮಠಕಲ್ ತಾಲೂಕ ಸಂಚಾಲಕರು ಡಿ ನಾಗೇಶ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.