ಸರ್ಕಾರಿ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ದಾವಣಗೆರೆ.ನ.೧; ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕೊರೊನಾ ಭೀತಿಯಿಂದ, ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ತೂ. ಕ ಶಂಕರಯ್ಯ ಮಾತನಾಡುತ್ತ ರಾಮಾಯಣದಂತ ಮಹಾನ್‌ಗ್ರಂಥವನ್ನು ರಚಿಸಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹನೀಯರಿಗೆ ಸಲ್ಲುತ್ತದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳಾದ ಪ್ರೊ.ಭೀಮಣ್ಣ ಸುಣಗಾರ್, ವೀರೇಶ್, ಗಿರಿಸ್ವಾಮಿ, ದಾದಾಪೀರ್, ದಿನೇಶ್, ತಿಪ್ಪಾರೆಡ್ಡಿ, ಮಂಜಣ್ಣ,ಪ್ರಕಾಶ್. ಕೊರಮರ, ಪ್ರಕಾಶ್. ಹಲಗೇರಿ, ರಾಜಮೋಹನ್, ಚನ್ನಬಸಪ್ಪ, ಜೆ. ಎಂ. ಮಂಜುನಾಥ್, ಮನೋಹರ್, ಜಯಣ್ಣ,ನಿಂಗಪ್ಪ, ಮರಳುಸಿದ್ದಪ್ಪ, ಧರ್ಮಾ. ನಾಯ್ಕ್, ಖಾನ್, ಹನುಮಂತಯ್ಯ, ಚಂದಮ್ಮ, ಗೀತಾದೇವಿ, ಮಂಜುಳಮ್ಮ, ಸತೀಶ್ ಉಪಸ್ಥಿತರಿದ್ದರು.