ಸರ್ಕಾರಿ ಕಾರ್ಯಕ್ರಮದಲ್ಲಿ ಸೀರೆ ವಿತರಣೆ: ಅರವಿಂದ್ ಆಕ್ರೋಶ

ಚಿತ್ತಾಪುರ: ಮಾ.27:ಮತಕ್ಷೇತ್ರದ ವಿವಿಧ ಇಲಾಖೆಯ ಕಾಮಗಾರಿಗಳ ಅಡಿಕಲ್ಲು ಉದ್ಘಾಟನೆ ಹಾಗೂ ಹಕ್ಕು ಪತ್ರ ವಿತರಣೆ ಈ ಸರ್ಕಾರಿ ಕಾರ್ಯಕ್ರಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ವಿತರಣೆ ಮಾಡಿ ಶಾಸಕ ಪ್ರಿಯಾಂಕ್ ಖರ್ಗೆ ನಿಯಮ ಉಲ್ಲಂಘಿಸಿದರೆ ಎಂದು ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್.19 ರಂದು ಪಟ್ಟಣದಲ್ಲಿ ದಿ. ವಾಲ್ಮೀಕಿ ನಾಯಕ ಅವರ ಪುಣ್ಯತಿಥಿ ಅಂಗವಾಗಿ ನಮ್ಮ ಸೋಹದರರಾದ ವಿಠ್ಠಲ್ ನಾಯಕ್ ಅವರು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದ್ರೆ ಚುನಾವಣೆ ಹತ್ತಿರ ಬರುತ್ತಿದೆ ಎಂದು ಕುಂಟು ನೆಪವೊಡ್ಡಿ ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಚಿತ್ತಾಪುರ ಆಗಮಿಸಿ ಬಿಜೆಪಿ ಮುಖಂಡರನ್ನು ಕರೆಸಿ ಉಡಿ ತುಂಬುವ ಕಾರ್ಯಕ್ರಮ ಮಾಡುವಂತಿಲ್ಲ ಎಂದು ತಡೆಹಿಡಿದ್ರು ನಾವು ಕಾರ್ಯಕ್ರಮ ರದ್ದು ಮಾಡಿವಿ ಆದ್ರೆ ನಿನ್ನೆ ಸರ್ಕಾರಿ ಕಾರ್ಯಕ್ರಮದಲ್ಲಿ ಮತದಾರರ ಮತಗಳನ್ನು ಸೆಳೆಯಲು ಸೀರೆ ವಿತರಣೆ ಮಾಡಿದ್ದು ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಇರಲಿಲ್ವ? ಹಾಗೂ ತಾಲೂಕಿನ ಅಧಿಕಾರಿಗಳು ಸಹ ಇದ್ದರೂ ಅವರ ಮುಂದೆ ಶಾಸಕರು ಸರಕಾರಿ ಕಾರ್ಯಕ್ರಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ಹಂಚಿಕೆ ಮಾಡಿರುವುದು ಖಂಡನೀಯ ಕೂಡಲೇ ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಇಷ್ಟು ದಿನ ಬಿಜೆಪಿ ಸರ್ಕಾರ ಅನುದಾನವನ್ನೇ ಕೊಡ್ತಿಲ್ಲ ಅಂತ ಸುಳ್ಳು ಹೇಳುತ್ತಿದ್ದ ಶಾಸಕರು ಮೊನ್ನೆ ತಾನೆ ಚಿತ್ತಾಪುರಕ್ಕೆ ಆಗಮಿಸಿ 173 ಕೋಟಿ ರೂಪಾಯಿಯ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಶಾಸಕರಾಗಿ 10 ವರ್ಷ ಕಳೆದರೂ ತಾಲೂಕಿನ ಮಹಿಳೆಯರ ಘನತೆ ಹಾಗೂ ಗೌರವದ ನೆನಪಾಗಿರಲಿಲ್ಲ. ಈಗ ಎಲೆಕ್ಷನ್ ಹತ್ತಿರ ಬಂದ ಕೂಡಲೇ, ತಾಲೂಕಿನ ಹಳ್ಳಿಗಳಲ್ಲಿ ನೈರ್ಮಲ್ಯ ಶೌಚಾಲಯ ನಿರ್ಮಿಸುವ ಭರವಸೆ ನೀಡುತ್ತಿದ್ದಾರೆ ಇದಕ್ಕಾಗಿ ಶಂಕು ಸ್ಥಾಪನೆಯನ್ನು ನೆರವೇರಿಸಿರುವುದಾಗಿ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ ಇದು ಮಹಿಳೆಯರಿಗೆ ಮೋಸ ಮಾಡುವ ಕುತಂತ್ರವಾಗಿದೆಯೇ ಹೊರತು, ಬೇರೇನೂ ಅಲ್ಲ. ಇವರು ಘೋಷಿಸಿರುವ ನೈರ್ಮಲ್ಯ ಶೌಚಾಲಯ ಎಲ್ಲಿ ನಿರ್ಮಾಣವಾಗುತ್ತೆ? ಇದಕ್ಕಾಗಿ ಗ್ರಾ.ಪಂ ಯಾವ ಜಾಗ ಮೀಸಲಿರಿಸಿದೆ? ಎಂಬ ಯಾವ ಮಾಹಿತಿಯೂ ಆಯಾ ಗ್ರಾ.ಪಂ ಸದಸ್ಯರಿಗಾಗಲಿ ಅಥವಾ ಅಲ್ಲಿನ ಪಿಡಿಓ ಗಳಿಗಾಗಲಿ ಇಲ್ಲ ಎಂದು ಹೇಳಿದರು.
2014 ರಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಬಸವ ಭವನ ನಿರ್ಮಿಸುವುದಾಗಿ ಘೋಷಿಸಿದ್ರು 50 ಲಕ್ಷ ರೂ.ಗಳನ್ನು ಕಡಿತಗೊಳಿಸಿ, ಕೇವಲ 50 ಲಕ್ಷ ರೂ.ಗಳಲ್ಲಿ ಬಸವ ಭವನ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಹಾಗಾದ್ರೆ, ಇನ್ನು 50 ಲಕ್ಷ ರೂ. ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು.
ಕಳೆದ 10 ವರ್ಷಗಳಿಂದ ಇಲ್ಲಿನ ಶಾಸಕರು ಎಂತಹ ಬೇಜವಾಬ್ದಾರಿ ಮನುಷ್ಯ ಎಂಬುದು ಚಿತ್ತಾಪುರದ ಜನತೆಗೆ ತಿಳಿದಿದೆ. ಎಲೆಕ್ಷನ್ ಸಮಯದಲ್ಲು ಬಂದು ಮೂಗಿಗೆ ತುಪ್ಪ ಸವರುವ ಇಂತಹ ಲೂಟಿಕೋರರನ್ನು ಇಲ್ಲಿನ ಜನರು ನಂಬುವುದಿಲ್ಲ.
ನಿನ್ನೆ ಶಂಕುಸ್ಥಾಪನೆ ನಡೆಸಿದ ಎಲ್ಲಾ ಕಾಮಗಾರಿಗಳು ಶಾಸಕರ ಮತ್ತು ಅವರ ಚೇಲಾಗಳ ಜೇಬು ತುಂಬಿಸಿ, ಆ ಹಣದಲ್ಲಿ ಎಲೆಕ್ಷನ್ ಮಾಡುವುದಕ್ಕಾಗಿ ಮಾತ್ರವೇ ಎಂಬುದು ಜನರಿಗೆ ತಿಳಿದಿದೆ.
ಈ ಸದಾಶಿವ ನಗರದ ಶಾಸಕರಿಗೆ ಎಲೆಕ್ಷನ್ ಬಂದಾಗ ಮಾತ್ರ ಚಿತ್ತಾಪುರ ಹಾಗೂ ಚಿತ್ತಾಪುರದ ಅಭಿವೃದ್ಧಿ ನೆನಪಾಗುತ್ತೆ. ಇನ್ನುಳಿದ ಸಂದರ್ಭದಲ್ಲಿ ಚಿತ್ತಾಪುರಕ್ಕೆ ಬಂದ ಅನುದಾನವನ್ನು ಲೂಟಿ ಹೊಡೆಯುವುದೇ ಇವರ ಕಾಯಕವಾಗಿರುತ್ತೆ. ಈ ಕಮೀಷನ್ ಖರ್ಗೆಯ ಭ್ರಷ್ಟಾಚಾರದಿಂದ ಚಿತ್ತಾಪುರದ ರಸ್ತೆಗಳ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲೂರ್ ಬಿ ಹಾಗೂ ಇವಣಿ ರಸ್ತೆಗಳು ಇವರ ಕಮೀಷನ್ ದಾಹಕ್ಕೆ ನಿರ್ಮಾಣವಾದ ಕೆಲವೇ ತಿಂಗಳುಗಳಲ್ಲಿ ಕಿತ್ತು ಹೋಗಿವೆ.
ಇಂತಹ ಭ್ರಷ್ಟ ಹಾಗೂ ಕಮೀಷನ್ ದಾಹಿಯನ್ನು ಸೋಲಿಸುವುದೇ ಚಿತ್ತಾಪುರದ ಜನತೆಯ ಗುರಿಯಾಗಿದೆ. ಕೇವಲ ಅಭಿವೃದ್ಧಿ ಎಂಬುದನ್ನು ತಮ್ಮ ಸಾಮಾಜಿಕ ಜಾಲತಾಣಗಳಿಗೆ ಸೀಮಿತಗೊಳಿಸಿದ ಇಂತಹ ಭ್ರಷ್ಟರನ್ನು ಸೋಲಿಸಿ, ಚಿತ್ತಾಪುರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಗುರಿಯಾಗಿದೆ ಎಂದರು ತಿಳಿಸಿದ್ದಾರೆ.