ಸರ್ಕಾರಿ ಕನ್ಯಾ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕ ತೇಲ್ಕೂರ

ಸೇಡಂ, ನ,15: ಪಟ್ಟಣದಲ್ಲಿರುವ ಸರ್ಕಾರಿ ಕನ್ಯಾ ಪ್ರೌಢಶಾಲೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಅಧ್ಯಕ್ಷರು ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಇಂದು ಭೇಟಿ ನೀಡಿದರು. ಮಕ್ಕಳಿಗೆ ಶಾಲಾ ಕಾಂಪೌಂಡ್, ಮೈದಾನ ಮಾಡಿದ್ದರಿಂದ ವಿದ್ಯಾರ್ಥಿನಿಯರು ಶಾಲಾ ಶಿಕ್ಷಕರು ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ವೇಳೆಯಲ್ಲಿ ಸಹಾಯಕ ಉಪ ವಿಭಾಗ ಆಯುಕ್ತರಾದ ಎಮ್ ಕಾರ್ತಿಕ್ ತಹಸಿಲ್ದಾರ್ ಬಸವರಾಜ ಬೆಣ್ಣಿ ಶಿರೂರು, ಪುರಸಭೆ ಮುಖ್ಯಾಧಿಕಾರಿ ಸತೀಶ್ ಗುಡ್ಡೆ, ಶಾಲಾ ಶಿಕ್ಷಕರಾದ ಮಣಿಸಿಂಗ್ ಚವ್ಹಾಣ, ಶಿವಾನಂದ ಸ್ವಾಮಿ, ವೀರೇಶ್ ಹೂಗಾರ್, ಚಂದ್ರಕಾಂತ್ ಕುಂಬಾರ್, ಅಶೋಕ್ ಪವಾರ್, ವಿಜಯಕುಮಾರ್ ಆಡಕಿ, ಹಾಗೂ ಶಾಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.