ಸರ್ಕಾರಿ ಕಚೇರಿಗಳಲ್ಲಿ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಿಸಿ

ಕಾಳಗಿ.ಎ.4: ಹಸಿರು ಕ್ರಾಂತಿ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ//ಬಾಬು ಜೀವನ್ ರಾಮ್ ರವರ 117 ನೇ ಜಯಂತಿ ಸರ್ಕಾರದ ಆದೇಶದಂತೆ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಬೇಕು ಭಾವಚಿತ್ರ ಕಡ್ಡಾಯವಾಗಿ ಅಳವಡಿಸಬೇಕು ಎಂದು ತಾಲೂಕ ಮಾದಿಗ ಸಮಾಜಮುಖಂಡ ರೇವಣಸಿದ್ದಪ್ಪ ಎಸ್ ಕಟ್ಟಿಮನಿ ಒತ್ತಾಯಿಸಿದ್ದಾರೆ.

ಒಂದು ವೇಳೆ ನಿರ್ಲಕ್ಷ ಮಾಡಿದ್ದೆ ಆದಲ್ಲಿ ತಾಲೂಕ ಆಡಳಿತವೇ ನೇರ ಹೊಣೆಯಾಗುತ್ತದೆ ಎಂದು ಈ ಮೂಲಕ ತಿಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾದಿಗ ಸಮಾಜ ಮುಖಂಡರಾದ ಸುಂದರ ಸಾಗರ್, ತಾಲೂಕ ಜಯಂತೋತ್ಸವ ಸಮಿತಿ ಅಧ್ಯಕ್ಷ ರವಿ ಸಿಂಗೆ, ಸಮಾಜ ಮುಖಂಡರಾದ ಹರೀಶ್ ಸಿಂಗೆ ಗೌರವ ಅಧ್ಯಕ್ಷರಾದ ರೇವಣಸಿದ್ದಪ್ಪ ಕೊಡ್ಲಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಮಹೇಶ್ ಭರತ್ನೂರ್, ಕಾರ್ಯಧ್ಯಕ್ಷರಾದ ಶರಣು ರಾಜಾಪುರ್, ಸಮಾಜ ಮುಖಂಡರ ಕರುಣಕುಮಾರ್ ರಾಜಪುರ ಅನೇಕ ಸಮಾಜ ಮುಖಂಡರು ಉಪಸ್ಥಿತರಿದ್ದರು.