ಸರ್ಕಾರಿ ಆಸ್ಪತ್ರೆ ಕಟ್ಟಡ ಬಿರುಕು-ಸಾರ್ವಜನಿಕರ ಆಕ್ರೋಶ

ನರೇಗಲ್ಲ,ಅ28 : ಕೊರೊನಾ ವೈರಸ್ ಸಾಕಷ್ಟು ಪ್ರಮಾಣದಲ್ಲಿ ಹರಡಿದ್ದು, ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಸೂಕ್ತ ವ್ಯವಸ್ಥೆ ಇಲ್ಲದೆ ಸೋಂಕಿತರಿಗೆ ಜಿಲ್ಲಾಢಳಿತ ವಿವಿಧ ಖಾಸಗಿ ಆಸ್ಪತ್ರೆ, ಹಾಸ್ಟೆಲ್, ಹೋಂ ಕ್ವಾರಂಟೈನ್‍ಗಳಲ್ಲಿ ಚಿಕಿತ್ಸೆ ನೀಡಲು ಮುಂದಾಗಿದೆ. ಪ್ರತಿಯೊಂದು ರೋಗಕ್ಕೆ ಚಿಕಿತ್ಸೆ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ 24 ಹಾಸಿಗೆ ಉಳ್ಳ ಆಸ್ಪತ್ರೆಯು ನಿರ್ಮಾಣ ಹಂತದಲ್ಲೇ ಬಿರುಕು ಕಾಣಿಸಿಕೊಂಡಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಕರ್ನಾಟಕ ಆರೋಗ್ಯ ವ್ಯವಸ್ಥೆ ಸುಧಾರಣೆ ಮತ್ತು ಅಭಿವೃದ್ಧಿ ಯೋಜನೆಯಡಿ 2 ಕೋಟಿ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಗುತ್ತಿಗೆ ಪಡೆದ ಗುತ್ತಿಗೆದಾರನ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ 24 ಹಾಸಿಗೆ ಉಳ್ಳ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಆಮೆವೇಗದಲ್ಲಿ ಸಾಗಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ನರ್ಸುಗಳು ಉತ್ತಮ ಸೇವೆ ಮೂಲಕ ಜಿಲ್ಲಾ ಹಾಗೂ ತಾಲೂಕಾ ಆಸ್ಪತ್ರೆಗಳಿಗಿಂತ ಹೆಚ್ಚು ಹೆಸರು ಪಡೆದುಕೊಂಡಿದೆ. ಕೇವಲ ಪಟ್ಟಣದ ರೋಗಿಗಳಷ್ಟೇ ಅಲ್ಲದೇ ಅಬ್ಬಿಗೇರಿ, ಹಾಲಕೆರೆ, ನಿಡಗುಂದಿ, ಜಕ್ಕಲಿ, ಬೂದಿಹಾಳ ಸೇರಿದಂತೆ ಸುತ್ತಲಿನ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಸುರಕ್ಷಿತ ಹೆರಿಗೆಗಾಗಿ ದೊಡ್ಡ ದೊಡ್ಡ ಆಸ್ಪತ್ರೆ ನಂಬಿಕೆಕ್ಕಿಂತ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ಮೇಲ್ದರ್ಜೆಗೆ ಏರಿಸಿ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಹಂತದಲ್ಲೇ ಕಳಪೆ ಮತ್ತು ಬಿರುಕು ಕಾಣಿಸಿಕೊಂಡಿರುವುದರಿಂದ ವೈದ್ಯರು, ಸಿಬ್ಬಂದಿಗಳು ಹಾಗೂ ರೋಗಿಗಳ ಕನಸಿಗೆ ನೀರು ಹಾಕಿದಂತಾಗಿದೆ.
ಇಲ್ಲಿನ ಆಸ್ಪತ್ರೆಯನ್ನು 6 ಹಾಸಿಗೆಯಿಂದ 24 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬಹುತೇಕ ಶೇಕಡಾ 90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಿರ್ಮಾಣ ಹಂತದಲ್ಲೇ ಕಾಮಗಾರಿ ಕಳಪೆಯಾಗಿದ್ದು, ನಿರ್ಮಾಣ ಆಗುತ್ತಿರುವ ಸಂದರ್ಭದಲ್ಲಿ ಗೋಡೆಗಳು ಹಾಗೂ ಮೇಲ್ಛಾವಣಿ ಬಿರುಕು ಬಿಡಲು ಪ್ರಾರಂಭಿಸಿದೆ. ಅಲ್ಲದೆ ಕಿಟಕಿ ಬಾಗಿಲುಗಳನ್ನು ಮತ್ತು ಗ್ಲಾಸ್‍ಗಳು ಅತ್ಯಂತ ಕಳಪೆ ದರ್ಜೆಯ ಸಾಮಾಗ್ರಿಗಳನ್ನು ಬಳಕೆಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ಕಿತ್ತು ಹೋಗಬಹುದು. ಬಿರುಕು ಬಿಟ್ಟ ಗೋಡೆ ಸ್ಲ್ಯಾಬ್‍ಗಳನ್ನು ಸಿಮೆಂಟ್ ತೇಪೆ ಮಾಡಿ ಬಣ್ಣ ಹಚ್ಚಿ ಮುಚ್ಚುವ ಕೆಲಸಮಾಡಲಾಗಿದೆ. ನೀರು ಪೂರೈಕೆಯಲ್ಲಿ ಕಳಪೆ ದರ್ಜೆಯ ಪೈಪ್ ಇನ್ನಿತರ ಸಾಮಾಗ್ರಿಗಳನ್ನು ಬಳಸಲಾಗಿದೆ.
ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡದ ಗುತ್ತಿಗೆದಾರ : 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಕಟ್ಟಡದ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗುತ್ತಿಗೆದಾರರಿಗೆ ಮಾಹಿತಿ ಹಾಗೂ ಕಟ್ಟಡ ಅಂದಾಜು ಪ್ರತಿ ವಿಚಾರಿಸಿದರೆ, ಸರ್ ನೀವು ನಿಮ್ಮ ಇಲಾಖೆಗೆ ಮಾಹಿತಿ ಕೇಳಿ ನಾನು ಕೇವಲ ಕೆಲಸ ಮಾಡುವನು ಅಷ್ಠೇ ಎಂದು ಗುತ್ತಿಗೆದಾರ ಉಢಾಫೆ ಉತ್ತರ ನೀಡಿದ್ದಾರೆ.
ನೀರಿನ ಟ್ಯಾಂಕಿಗೆ ಮುಚ್ಚಳ ಇಲ್ಲ : ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಸ್ಪತ್ರೆಯ ಪಕ್ಕದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ನಿತ್ಯ ನೂರಾರು ಜನ ಬರುತ್ತಾರೆ. ಚಿಕ್ಕ ಮಕ್ಕಳು, ವೃದ್ಧರು ಬರುತ್ತಾರೆ. ಆದರೆ. ಕಟ್ಟಡದ ಕಾಮಗಾರಿಗಾಗಿ ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿದ ನೀರಿನ ಟ್ಯಾಂಕಿಗೆ ಒಂದು ಸಣ್ಣ ಮುಚ್ಚಳ ಕೂಡ ಹಾಕದೆ ಗುತ್ತಿಗೆದಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ.
ಕೋಟ್ :