ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಸಿರುಗುಪ್ಪ, ನ.17: ನಗರದ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯವತಿಯಿಂದ ರಕ್ತದಾನ ಶಿಬಿರಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಕೆ.ಶಶಿಕುಮಾರ ಚಾಲನೆ ನೀಡಿದರು. ನಿವೃತ್ತ ಸೈನಿಕ ಕೆ.ಮಹೇಶ ಅವರು ರಕ್ತದಾನ ನೀಡಿದರು. ಇವರು ಭಾರತೀಯ ಸೈನ್ಯದಲ್ಲಿ 17ವರ್ಷ ಸೇವೆ ಸಲ್ಲಿಸಿದ್ದಾರೆ. ಇಂದು 20ನೇ ರಕ್ತದಾನ ಮಾಡುವ ಮೂಲಕ ಸೇವೆ ಮೆರೆದರು.
ಇವರ ಸೇವೆಗೆ ಯುವ ಬೀಗ್ರೇಡ್ ತಾಲೂಕು ಘಟಕದಿಂದ ನಿವೃತ್ತ ಸೈನಿಕ ಕೆ.ಮಹೇಶ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದರು.
ಇದೆ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ದೇವರಾಜ, ವೈಧ್ಯರಾದ ಕೊಟ್ರೇಶ ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.