ಸೇಡಂ, ಜೂ,20: ತಾಲೂಕಿನ ಕೊಡ್ಲಾ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಫುಡ್ ಫೈಜನ ಆಗಿರುವ ಕಾರಣ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವುದನ್ನು ಅರಿತ ಜೆ,ಡಿ,ಎಸ್ ಯುವ ಮುಖಂಡರಾದ ಶ್ರೀ ಬಾಲರಾಜ್ ಅಶೋಕ್ ಗುತ್ತೇದಾರ್ ಅವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು ಇದಕ್ಕೆ ಕಾರಣರಾದ ಅಧಿಕಾರಿಗಳನ್ನೂ ವಜಾ ಗೊಳಿಸಿ ಇದರ ಬಗ್ಗೆ ತನಿಖೆಯನ್ನು ಕೈಗೊಳ್ಳಬೇಕಾಗಿ ಅಧಿಕಾರಿಗಳಿಗೆ ತಿಳಿಸಿದರು. ಅದೇ ರೀತಿಯಾಗಿ ಎಲ್ಲಾ ಮಕ್ಕಳಿಗೆ ತೆಂಗಿನ ನೀರನ್ನು ಕುಡಿಸುವ ಮುಖಾಂತರ ಬೇಗನೆ ತಾವೆಲ್ಲರೂ ಗುಣಮುಖರಾಗಿ ತಮ್ಮ ವಿದ್ಯಾಭ್ಯಾಸಕ್ಕೆ ತೆರಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ವೇಳೆಯಲ್ಲಿ ರಾಜು ನೀಲಂಗಿ, ಅರುಣ್ ಪೂಜಾರಿ, ನಾಗರಾಜ್ ಮಂಗಾ ಮಳಖೇಡ, ಸೇರಿದಂತೆ ಕಾರ್ಯಕರ್ತರು ಇದ್ದರು.
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮುಂದಾದರು ಇಂತಹ ಘಟನೆ ಆಗದಂತೆ ತಾಲೂಕ ಆಡಳಿತ ಜನಪ್ರತಿನಿಧಿಗಳು ಎಚ್ಚರಗೊಳ್ಳಬೇಕಿದೆ.
ಬಾಲರಾಜ್ ಗುತ್ತೇದಾರ್ ಜೆಡಿಎಸ್ ಮುಖಂಡರು ಸೇಡಂ