ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಂಸದರು

ಸೇಡಂ,ಎ,28: ತಾಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಂಸದರಾದ ಡಾ.ಉಮೇಶ ಜಾದವ್ ದಿಢೀರ್ ಭೇಟಿ ನೀಡಿ ಕೋವಿಡ ಕುರಿತು ಪರಿಶೀಲಿಸಿದರು.ಈ ವೇಳೆಯಲ್ಲಿ ಸಹಾಯಕ ಉಪವಿಭಾಗ ಆಯುಕ್ತರಾದ ರಮೇಶ್ ಎಸ್ ಕೋಲಾರ್ ತಹಸೀಲ್ದಾರರಾದ ಬಸವರಾಜ್ ಬೆಣ್ಣಿ ಶಿರೂರು, ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಹಳ್ಳಿಗೋದಿ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಗುಡ್ಡೆ, ತಾಲೂಕಾ ಆರೋಗ್ಯಾಧಿಕಾರಿಗಾಳದ, ಸುರೇಶ್ ಮೇಕಿನ,ಡಾ.ಗೀತಾ ಹಾಗೂ ತಾಲೂಕ ಆರೋಗ್ಯ ರಕ್ಷಣೆ ಸ್ಥಾಯಿ ಸಮಿತಿ ಸದಸ್ಯರಾದ ಶ್ರೀಮಂತ ಅವಂಟಿ ಇನ್ನಿತರರು ಇದ್ದರು.