ಸರ್ಕಾರಿ ಆಸ್ಪತ್ರೆಗೆ ಔಷಧ ನೀಡಿಕೆ

ಮರಿಯಮ್ಮನಹಳ್ಳಿ, ಮೇ.29: ಕೊರೋನಾ ಮಹಾಮಾರಿ ದೇಶದಾದ್ಯಂತ ಆವರಿಸಿದ್ದು, ಸಾರ್ವಜನಿಕರು ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ, ರೋಗ ಮುಕ್ತರಾಗಿ ಬದುಕುವುದನ್ನು ಕಲಿಯಬೇಕು ಎಂದು ಎಸ್‍ಎಲ್‍ಆರ್ ಮೇಟಾಲಿಕ್ಸ್ ಕಂಪನಿಯ ನಿರ್ದೇಶಕ ಕೆ.ಸಿ.ಸಿದ್ದಪ್ಪ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊರೋನಾ ರೋಗದ ಅಗತ್ಯ ಔಷಧೋಪಚಾರಗಳನ್ನು ವಿತರಿಸಿ ಮಾತನಾಡಿದರು.
ಈಗಾಗಲೇ ಸ್ಥಳೀಯವಾಗಿ ಎಸ್‍ಎಲ್‍ಆರ್ ಕಂಪನಿಯಿಂದ ಹಬೊಹಳ್ಳಿಯ ತಾಲೂಕು ಆಡಳಿತಕ್ಕೆ ಅಗತ್ಯ ಔಷಧಗಳನ್ನು ನೀಡಲಾಗಿದೆ. ಪ್ರಸ್ತುತ ಮರಿಯಮ್ಮನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಂಪನಿಯಿಂದ ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್ ವೈದ್ಯಕೀಯ ಪರಿಕರಗಳನ್ನು ನೀಡಲಾಗಿದೆ. ಸಾರ್ವಜನಿಕ ಬಳಕೆಗೆ ಮುಂದಿನ ದಿನಗಳಲ್ಲಿ ಅಗತ್ಯ ಔಷಧಗಳನ್ನು ನೀಡಲಾಗುವುದು. ಕೊರೋನಾ ಸೋಂಕು ಹರಡದಂತೆ ತಡೆಯಲು ನಾವೆಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮನೆಯಲ್ಲಿಯೇ ಸುರಕ್ಷಿತವಾಗಿರುವುದು ತುಂಬಾ ಮುಖ್ಯ. ಸರ್ಕಾರದ ಮಾರ್ಗದರ್ಶನವನ್ನು ಪ್ರತಿಯೊಬ್ಬರು ಪಾಲಿಸಿದರೆ ಕೊರೊನಾವನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಹಕಾರ ನೀಡಿ ಎಂದರು.
ಈ ಸಂದರ್ಭದಲ್ಲಿ ಎಸ್‍ಎಲ್‍ಆರ್ ಕಂಪನಿಯ ಸಿಇಒ ದೇವದ್ಯೂತಿ ಸೆನ್, ಡಾ. ಜಿ.ಎಂ.ಸೋಮೇಶ್ವರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಕುಮಾರ್, ಡಾ.ಮಂಜುಳಾ, ಪ್ರಸನ್ನ ಡಂಬಳ್, ಡಿ.ಬಿ.ತಳವಾರ, ನಾರಾಯಣ, ರಾಜಶೇಖರ್, ವಿಠಲ್, ಪ್ರಕಾಶ್ ನಾಯ್ಕ್, ನಾಗರಾಜ್ ನಾಯ್ಕ್, ಮಧುಸೂದನ್ ಹಾಗೂ ಇತರರು ಇದ್ದರು.