ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟೇಟರ್ ದಾನ

ಹರಪನಹಳ್ಳಿ.ಜೂ.೩:  ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ, ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಪಿ. ವೀಣಾ ಮಹಾಂತೇಶ ಹಾಗೂ ಕೆ.ಪಿ.ಸಿ.ಸಿವೈದ್ಯ ಘಟಕದ ರಾಜ್ಯ ಉಪಾಧ್ಯಕ್ಷರಾದ ಡಾ. ಮಹಾಂತೇಶ ಚರಂತಿಮಠ ಜಂಟಿಯಾಗಿ ಹರಪನಹಳ್ಳಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಉಚಿತವಾಗಿ  ಮೂರು ಆಕ್ಸಿಜನ್ ಕಾನ್ಸೆಂಟೇಟರುಗಳನ್ನು ಆಸ್ಪತ್ರೆಯ ಆಡಳಿತಾಧಿಕಾರಿಯವರಿಗೆ  ಹಸ್ತಾಂತರಿಸಿದರು. ಆಕ್ಸಿಜನ್ ಕಾನ್ಸೆಂಟೇಟರನ್ನು ಸ್ವೀಕರಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ.ವೆಂಕಟೇಶ್ ಕೊರೋನಾ ಮಹಾಮಾರಿ ಎಂಬ ಸೋಂಕಿಗೆ ಜನರ ಜೀವನ, ಆರ್ಥಿಕತೆ ಕುಸಿದು ಹೋಗಿದೆ. ಸೋಂಕಿಗೆ ಕಡಿವಾಣ ಹಾಕುವಲ್ಲಿ  ಸರ್ಕಾರದ ಜೊತೆಗೆ  ದಾನಿಗಳ ಸಹಕಾರ ಅತ್ಯಮೂಲ್ಯವಾದುದು. ಜನರ ಜೀವ ರಕ್ಷಿಸುವಲ್ಲಿ ಮಹತ್ತರ ಪಾತ್ರವಹಿಸಿ, ನಿಮ್ಮಿಂದಾದ ಸಹಕಾರ ನೀಡಿದ ತಮಗೂ ಹಾಗೂ ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.
ಈ ಸಂಧರ್ಭದಲ್ಲಿ ದಾದಪೀರ, ಮಂಜುನಾಥ, ಅರುಣ, ಪ್ರಜ್ವಲ್, ಕೆ.ಎಂ.ಸಚಿನ್‌, ಮದಾಾನ ಸ್ವಾಮಿ,ಮತ್ತಿತರರು ಉಪಸ್ಥಿತರಿದ್ದರು,