ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ : ಬಡ ರೋಗಿಗಳ ಪರದಾಟ

ಬೆಂಗಳೂರು, ಸೆ.೧೬- ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ?ಯಂಡ್ ವೇರ್‌ಹೌಸಿಂಗ್ ಸೊಸೈಟಿಯಲ್ಲಿ ( ಕೆಡಿಎಲ್‌ಡಬ್ಲ್ಯುಎಸ್) ಸಮರ್ಪಕವಾಗಿ ಔಷಧಗಳು ಸಂಗ್ರಹವಾಗದ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಗಳು ಸಿಗದೆ ಬಡ ರೋಗಿಗಳ ಪರದಾಡುವ ವಾತಾವರಣ ನಿರ್ಮಾಣ ಆಗಿದೆ.
ಟೆಂಡರ್ ಪ್ರಕ್ರಿಯೆ ವಿಳಂಬ ಮತ್ತಿತರರ ಕಾರಣಗಳಿಂದ ಈ ರೀತಿಯ ಪರಿಸ್ಥಿತಿ ಬಂದು ನಿಂತಿದ್ದು, ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆ ಸಚಿವರು ಇತ್ತ ಗಮನ ಹರಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಕೇಳಿಬಂದಿದೆ.
ಶ್ವಾಸಕೋಶ, ಕರಳು, ರಕ್ತಹೀನತೆ, ಸರ್ಪಸುತ್ತು, ನ್ಯುಮೋನಿಯಾ, ಕ್ಯಾನ್ಸರ್, ಅಸ್ತಮಾ, ಸಕ್ಕರೆಕಾಯಿಲೆ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶ್ರಯ ರಕ್ತಸ್ರಾವ, ಹೃದಯಾಘಾತ, ಮೂಳೆ, ತುರಿಕೆ, ಂಗಸ್, ಮೈಗ್ರೇನ್, ಯೋನಿ ಸೋಂಕು, ಶೀತ, ಅನೆಸ್ತೀಯಾ, ಹೃದಯ ಶಸಚಿಕತ್ಸೆ, ರಕ್ತಹೆಪ್ಪುಗಟ್ಟುವಿಕೆ, ಹುಣ್ಣು, ನೋವು, ವಾಕರಿಕೆ, ವಾಂತಿ, ಮಿದುಳು ಮತ್ತು ನರ, ಕಣ್ಣಿನ ಸೊಂಕು ಸೇರಿ ವಿವಿಧ ಗಂಭೀರ ಕಾಯಿಲೆಗಳ ಔಷಧ ಗೋಧಾಮಿನಲ್ಲಿ ಸಂಗ್ರಹವಾಗಿಲ್ಲ.
ನಾಯಿ, ಹಾವು ಕಡಿತ ಔಷಧಕ್ಕೂ ಬರ: ಒಂದೆಡೆ ಜೀವ ರಕ್ಷಕ ಅಭಾವ ಉಂಟಾದರೆ ಇತ್ತ ನಾಯಿ ಹಾಗೂ ಹಾವು ಕಡಿತ ಔಷಧಕ್ಕೆ ಬರ ಎದುರಾಗಿದೆ. ಕಳೆದ ವರ್ಷ ಖರೀದಿಸಿ ಸಂಗ್ರಹಿಸಿ ಅಲ್ಪಸ್ವಲ್ಪ ಉಳಿದಿರುವ ಔಷಧಗಳನ್ನೇ ಬಳಸಲಾಗುತ್ತಿದೆ.
ಕೊರತೆಗೆ ಕಾರಣವೇನು?: ಆರೋಗ್ಯ ಇಲಾಖೆಯ ಅಧೀನದ ಭಾಗವಾಗಿರುವ ಕೆಡಿಎಲ್‌ಡಬ್ಲ್ಯುಎಸ್ ಔಷಧಗಳನ್ನು ಸಂಗ್ರಹಿಸಿ ೨೩ ಜಿಲ್ಲಾ, ೧೬೧ ತಾಲೂಕು ಆಸ್ಪತ್ರೆ, ೨೦೩ ಸಮುದಾಯ, ಆರೋಗ್ಯ ಕೇಂದ್ರ, ೨೩೩೧ ಪ್ರಾಥಮಿಕ ಆರೋಗ್ಯ ಕೇಂದ್ರ, ೧೭೯ ನಗರ ಆರೋಗ್ಯ ಕೇಂದ್ರ ಸೇರಿ ೩ಸಾವಿರಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಔಷಧ ಪೂರೈಕೆ ಮಾಡುತ್ತಿದೆ.
ಔಷಧ ಪೂರೈಕೆಗಾಗಿಯೇ ಪ್ರತಿ ವರ್ಷ ನೂರಾರು ಕೋಟಿ ರೂ.ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅದರಂತೆ, ಈ ಬಾರಿಯೂ ಕೂಡ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಅವುಗಳನ್ನು ಏಕಾಏಕಿ ರದ್ದು ಮಾಡಲಾಗಿದೆ.
ಟೆಂಡರ್ ನಿಯಮಾನುಸಾರ ಔಷಧ ಪೂರೈಕೆದಾರರಿಗೆ ೪೦ ದಿನದಲ್ಲಿ ಹಣ ಪಾವತಿ ಮಾಡಬೇಕೆಂಬ ನಿಯಮವಿದೆ. ಆದರೆ, ಸಂಸ್ಥೆಯ ಕೆಲ ಅಧಿಕಾರಿಗಳು ಕಮಿಷನ್‌ಗಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ, ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಉಳಿದಿದೆ. ನೆರೆಯ ತಮಿಳುನಾಡಲ್ಲಿ ೩೦ ದಿನದೊಳಗೆ ಸರಬರಾಜುದಾರರಿಗೆ ಹಣ ಬಿಡುಗಡೆಯಾಗುತ್ತಿದೆ. ಆದರೆ, ವರ್ಷವಾದರೂ ಪೇಮೆಂಟ್ ಆಗುವುದಿಲ್ಲ. ಇದರಿಂದ ಮತ್ತೆ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಗುತ್ತಿಗೆದಾರರು ಹಿಂದೇಟು ಆಗುತ್ತಿದ್ದಾರೆ.
ಔಷಧಗಳ ಬೇಡಿಕೆ ಹೆಚ್ಚು: ೨೦೧೭ರಲ್ಲಿ ೩೩೭ ಕೋಟಿ ರೂ.ಹಾಗೂ ೨೦೧೮ರಲ್ಲಿ ೩೬೦ ಕೋಟಿ ರೂ. ಔಷಧಗಳನ್ನು ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಪೂರೈಸಲಾಗಿತ್ತು. ಆದರೆ, ಈ ವರ್ಷದಿಂದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳ ಹಾಗೂ ರಾಜ್ಯದ ಎಲ್ಲ ಆಸ್ಪತ್ರೆಗಳಿಂದ ಹೆಚ್ಚಿನ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ೪೮೭.೭೫ ಕೋಟಿ ರೂ. ಮೊತ್ತದ ಔಷಧಗಳಿಗೆ ಬೇಡಿಕೆ ಬಂದಿದೆ.
ಮತ್ತೊಂದೆಡೆ ಕೆಡಿಎಲ್‌ಡಬ್ಲ್ಯುಎಸ್ ಕೆಲ ಭ್ರಷ್ಟ ಅಧಿಕಾರಿಗಳು ಕಮಿಷನ್ ಆಸೆಗಾಗಿ ಬೇಕೆಂತಲ್ಲೇ ಈ ಹಿಂದೆ ಕರೆದಿರುವ ಟೆಂಡರ್‌ಗಳನ್ನು ರದ್ದು ಮಾಡಿದ್ದಾರೆ ಎನ್ನಲಾಗಿದೆ. ಈ ಅಧಿಕಾರಿಗಳು ಕೊರೊನಾ ನಿಯಂತ್ರಿಸುವ ಅವಶ್ಯಕವಿರುವ ಔಷಧ ಹಾಗೂ ಉಪಕರಣಗಳ ಖರೀದಿಯಲ್ಲಿ ಈಗಾಗಲೇ ಕೋಟಿಗಟ್ಟಲೆ ಕಮಿಷನ್ ಪಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿತ್ತು. ಮೂವರ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರೂ ವರ್ಗಾವಣೆ ಮಾಡಲು ಸರ್ಕಾರ ಹಿಂದೇಟು ಆಗಿದೆ.
ಬಡವರಿಗೆ ತೊಂದರೆ..!
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿದರೆ ಕೆಲ ಔಷಧಗಳು ಸಿಗುತ್ತಿಲ್ಲ. ಅನಿವಾರ?ಯವಾಗಿ ಹೆಚ್ಚಿನ ಹಣ ಕೊಟ್ಟು ಮೆಡಿಕಲ್ ಸ್ಟೋರ್‌ಗಳಲ್ಲಿ ಖರೀದಿಸುವಂತಾಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳನ್ನು ಸುಲಿಗೆಗೆ ಇಳಿದಿವೆ.