ಸರ್ಕಾರಿ ಆಸ್ತಿ ನುಂಗಲ ಕೊಂಡಯ್ಯ ಯತ್ನ : ವೆಂಕಟೇಶ್ ಆರೋಪ

 • ಹೆಸರಿಗೆ ಸೇವೆ, ಸರ್ಕಾರಿ ಆಸ್ತಿ ದುರ್ಬಳಕೆ
 • ಮ್ಯಾಕ್ಸ್ ಕಟ್ಟಡಕ್ಕೆ ಪಾಲಿಕೆ ಪರವಾನಿಗೆ ಇಲ್ಲ.
 • ತೆರಿಗೆ ಕಟ್ಟಿಸಿಕೊಂಡ ಪಾಲಿಕೆ
 • ಡೆಮಾಲಿಷ್ ಮಾಡಿ, ಇಲ್ಲ ಸಾರ್ವಜನಿಕ ಬಳಕೆಗೆ ನೀಡಿ
 • ಕಾನೂನು, ಜನ ಹೋರಾಟಕ್ಕೆ ತೀರ್ಮಾನ
 • ಕ್ರಿಮಿನಲ್ ಕೇಸು ದಾಖಲಿಸಿ

  ಬಳ್ಳಾರಿ ಏ 02 : ನಗರದ ದುರ್ಗಮ್ಮ ದೇವಸ್ಥಾನದ ಬಳಿ‌ ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರಿ‌ ನಿವೇಶನದಲ್ಲಿ ವಿಧಾನ‌ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಸದಸ್ಯರಾಗಿರುವ ಟ್ರಸ್ಟ್ ನಿಂದ ನಿರ್ಮಿಸಲಾಗಿರುವ ಮ್ಯಾಕ್ಸ್ ಕಟ್ಟಡ ಡೆಮಾಲಿಷ್ ಮಾಡಿ, ಇಲ್ಲ‌ ಅದನ್ನು ವಶಕ್ಕೆ ಪಡೆದು ಸಾರ್ವಜನಿಕ ಉದ್ದೇಶಕ್ಕೆ ನೀಡಬೇಕೆಂದು ಸಾಮಾಜಿಕ ಹೋರಾಟಗಾರ ಕುಡುತಿನಿ ವೆಂಕಟೇಶ್ ಜಿಲ್ಲಾಡಕ್ಕೆ ಒತ್ತಾಯ ಮಾಡಿದ್ದಾರೆ.
  ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು ಕಳೆದ 20 ವರ್ಷಗಳ ಹಿಂದೆ ಕಾಂಗ್ರೆಸ್ ಕಚೇರಿ‌ ಕಟ್ಟಲು ಪ್ರಯತ್ನಿಸಿ. ಅದಕ್ಕೆ ಅವಕಾಶ ಇಲ್ಲ ಎಂದಾಗ ಈ ಹಿಂದೆ ಸಚಿವರು ಶಾಸಕರಿದ್ದ ಟ್ರಸ್ಟ್ ಮಾಡಿಕೊಂಡು ನಡುವೆ ಈ ನಿವೇಶನ ಮಂಜೂರು ಮಾಡಿಸಿಕೊಂಡು ನಂತರ ಅವರನ್ನೇ ಹೊರ ಹಾಕಿ ತಮ್ಮ‌ ಕುಟುಂಬ ಮತ್ತು ಬೆಂಬಲಿಗರನ್ನು ಸೇರಿಸಿಕೊಂಡು ಇಲ್ಲಿ ಕಟ್ಟಡ ಕಟ್ಟಿದ್ದಾರೆ. ಅದಕ್ಕೆ ಪಾಲಿಕೆ ಅನುಮತಿ ಸಹ‌ ಇಲ್ಲ. ಆದರೂ ಪಾಲಿಕೆ ಈ‌ ಕಟ್ಟಡಕ್ಕೆ ತೆರಿಗೆ ಕಟ್ಟಿಸಿ ಕೊಂಡಿದೆ.
  ಈ ಕಟ್ಟಡವನ್ನು 2018 ರಿಂದ 10 ವರ್ಷಗಳಿಗೆ ತಿಂಗಳಿಗೆ 5 ಲಕ್ಷ ರೂ‌ನಂತೆ ಬಾಡಿಗೆ ನೀಡಿದ್ದಾರೆ.
  ಕೆಳ ಮಹಡಿಯಲ್ಲಿ ಯುವ ಜನರಿಗೆ ಕೌಶಲ್ಯ ತರಬೇತಿ ಸಂಸ್ಥೆ ನಡೆಸುತ್ತಿದ್ದು ಅಲ್ಲಿ 18 ಜನ ವಿದ್ಯಾರ್ಥಿಗಳು ಇದ್ದಾರೆ.
  ಈ‌ಮೊದಲು 30 ವರ್ಷಗಳಿಗೆ ಲೀಜ್ ನೀಡಿದ್ದ ಈ‌ನಿವೇಶನವನ್ನು ಖಾಯಂ ಮಂಜೂರು‌ ಮಾಡಿಸಿಕೊಳ್ಳಲು‌ಮುಂದಾಗಿದ್ದಾರೆ.
  ಇದಕ್ಕೆ ಪರಿಶೀಲಬೆ ಮಾಡಿ ವರದಿ‌ ನೀಡಿರುವ
  ಸಹಾಯಕ ಆಯುಕ್ತರು, ತಹಸಿಲ್ದಾರರು, ಕಂದಾಯ ಅಧಿಕಾರಿ ನೀಡಿರುವ ವರದಿಯಲ್ಲೇ ನೀಡಿರುವ ಉದ್ದೇಶಕ್ಕೆ ಬಳಸುವುದ ಜೊತೆಗೆ ವಾಣಿಜ್ಯ ಉದ್ದೇಶಕ್ಕೆ ಬಳಸಿ ನಿಯಮ‌ ಉಲ್ಲಂಘನೆ ಮಾಡಿದೆ ಎಂದು ವರದಿ ನೀಡಿದ್ದಾರೆ.
  ಸಾಮಾನ್ಯ ಜನ‌ ವಾಸಕ್ಕೆಂದು‌ ಸಣ್ಣ ಮನೆ ಕಟ್ಟಿದರೆ ಪರವಾನಿಗೆ ಇಲ್ಲದಿದ್ದರೆ. ಪಾಲಿಕೆಯವರು ಡೆಮಾಲಿಷ್ ಮಾಡಲು ಬರುತ್ತಾರೆ.
  ಇಂತಹ ಜನ‌ನಿಬಿಡ ಪ್ರದೇಶದಲ್ಲಿ ನಿಯಮ‌ ಉಲ್ಲಂಘನೆ ಮಾಡಿ, ಪರವಾನಿಗೆ ಇಲ್ಲದೆ ಕಟ್ಟಡ ಕಟ್ಟಿ ಬಾಡಿಗೆ ನೀಡಿರುವುದಕ್ಕೆ ಪಾಲಿಕೆ ಅಧಿಕಾರಿಗಳ ಮೌನ ಏಕೆ.
  ಜನಸಾಮಾನ್ಯರಿಗೆ ಒಂದು ಕೊಂಡಯ್ಯನಂತವರಿಗೆ ಒಂದು ನ್ಯಾಯವೇ.
  ಅದಕ್ಕಾಗಿ‌ ಕೂಡಲೇ
  ಜಿಲ್ಲಾಧಿಕಾರಿಗಳು ಕೊಂಡಯ್ಯ ಮತ್ತು ಅವರ ಟ್ರಸ್ಟ್ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು. ನಿವೇಶನ ಮತ್ತು ಕಟ್ಟಡ ವಶಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಕಾನೂನು ಮತ್ತು ಜನರೊಂದಿಗೆ ಇದರ ವಿರುದ್ದ ಹೋರಾಟ ಮಾಡಲಿದೆಂದು‌ ಹೇಳಿದರು.
  ಸುದ್ದಿಗೋಷ್ಟಿಯಲ್ಲಿ ಬಂಡೇಗೌಡ, ಕಪ್ಪಗಲ್ಲು ರಸೂಲ್ ಸಾಬ್ ಇದ್ದರು.

5070 ಚದರ ಅಡಿ