ಸರ್ಕಾರಿ ಅನುದಾನಿತ ಮಾಧ್ಯಮ ಗುರುತಿಗೆ ಬಿಬಿಸಿ ಬೇಸರ

ಲಂಡನ್, ಏ.೧೦- ಟ್ವಿಟರ್ ಅಕೌಂಟ್‌ನಲ್ಲಿ ಸರ್ಕಾರಿ ಅನುದಾನಿತ ಮಾಧ್ಯಮ ಎಂದು ಗುರುತಿಸಿಕೊಂಡಿರುವ ವಿರುದ್ಧ ಇದೀಗ ಬಿಬಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಸಮಾಧಾನ ಹೊರಹಾಕಿದೆ.
ಸುಮಾರು ೨.೨ ದಶಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಬಿಬಿಸಿಯ ಟ್ವಿಟರ್ ಖಾತೆಯೊಂದರಲ್ಲಿ ಸರ್ಕಾರಿ ಅನುದಾನಿತ ಮಾಧ್ಯಮ ಎಂದು ಗುರುತಿಸಲಾಗಿದೆ. ಸದ್ಯ ಇದರ ವಿರುದ್ಧ ಬಿಬಿಸಿ ಆಕ್ಷೇಪ ಹೊರಹಾಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಸಿ, ಬಿಬಿಸಿ ಸ್ವತಂತ್ರವಾಗಿದ್ದು, ಎಂದಿಗೂ ಸ್ವತಂತ್ರವಾಗಿರಲಿದೆ. ನಾವು ಕೇವಲ ನಾವು ಪರವಾನಗಿ ಶುಲ್ಕದ ಮೂಲಕ ಬ್ರಿಟಿಷ್ ನಾಗರಿಕರಿಂದ ಹಣವನ್ನು ಪಡೆಯುತ್ತೇವೆ. ಹಾಗಾಗಿ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕಿದೆ. ಇನ್ನು ಟ್ವಿಟರ್‌ನ ಸರ್ಕಾರಿ ಅನುದಾನಿತ ಮಾಧ್ಯಮದ ಪ್ರಕಾರ, ರಾಜ್ಯ-ಸಂಯೋಜಿತ ಮಾಧ್ಯಮ ಖಾತೆಗಳು ರಾಜ್ಯವು ಸಂಪಾದಕೀಯ ವಿಷಯದ ಮೇಲೆ ಹಣಕಾಸು ಸಂಪನ್ಮೂಲಗಳು, ನೇರ ಅಥವಾ ಪರೋಕ್ಷ ರಾಜಕೀಯ ಒತ್ತಡಗಳು ಅಥವಾ ಉತ್ಪಾದನೆ ಮತ್ತು ವಿತರಣೆಯ ಮೇಲೆ ನಿಯಂತ್ರಣವನ್ನು ಹೊಂದಿದೆ ಎಂದು ಸೂಚಿಸಿದೆ. ಸದ್ಯ ಟ್ವಿಟರ್‌ನ ಈ ಕ್ರಮಕ್ಕೆ ಬಿಬಿಸಿ ಅಸಮಾಧಾನ ಹೊರಹಾಕಿದ್ದು, ತಾನೊಂದು ಸ್ವತಂತ್ರ ಮಾಧ್ಯಮ ಸಂಸ್ಥೆ ಎಂದು ಕರೆಸಿಕೊಂಡಿದೆ. ೧೯೨೭ ರಿಂದ, ಬಿಬಿಸಿಯು ಯುಕೆ ಸರ್ಕಾರದೊಂದಿಗೆ ಸಮ್ಮತಿಸಿದ ರಾಯಲ್ ಚಾರ್ಟರ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ನಿಗಮವು ಅದರ ವ್ಯವಹಾರಗಳ ಸಂಪಾದಕೀಯ ಮತ್ತು ಸೃಜನಶೀಲ ನಿರ್ಧಾರಗಳು, ಉತ್ಪಾದನೆ ಮತ್ತು ಸೇವೆಗಳನ್ನು ಪೂರೈಸುವ ಸಮಯಗಳು ಮತ್ತು ವಿಧಾನಗಳು ಮತ್ತು ನಿರ್ವಹಣೆಯಲ್ಲಿ ಸ್ವತಂತ್ರವಾಗಿರಬೇಕು” ಎಂದು ಹೇಳುತ್ತದೆ. ಅದರಲ್ಲೂ ಬಿಬಿಸಿಯು ಅಮೆರಿಕಾದ ನ್ಯಾಶನಲ್ ಪಬ್ಲಿಕ್ ರೇಡಿಯೋ (ಎನ್‌ಪಿಆರ್) ಜೊತೆ ಗುರುತಿಸಿಕೊಳ್ಳುವುದನ್ನು ವಿರೋಧಿಸಿದೆ. ಅಲ್ಲದೆ ಯುಎಸ್‌ನ ಎನ್‌ಪಿಆರ್ ಸಂಸ್ಥೆಯನ್ನು ಬಿಬಿಸಿಯು ರಾಜ್ಯ ಸಂಯೋಜಿತ ಮಾಧ್ಯಮವೆಂದು ಕರೆದಿದೆ. ಇನ್ನು ರಶ್ಯಾದ ಆರ್‌ಟಿ ಹಾಗೂ ಚೀನಾದ ಕ್ಸಿನ್ಹುವಾ ನ್ಯೂಸ್ ಸಂಸ್ಥೆಯನ್ನು ಕೂಡ ಟ್ವಿಟರ್ ಸರ್ಕಾರಿ ಪ್ರಾಯೋಜಿತ ಸುದ್ದಿಸಂಸ್ಥೆ ಎಂದು ಕರೆದಿದೆ.