ಸರ್ಕಾರಿ ಅಧಿಕಾರಿಗಳು ಬಿಜೆಪಿ ಏಜೆಂಟ್‌ಗಳು

ಕೆ.ಆರ್. ಪುರ,ಮಾ.೧೧- ಸರ್ಕಾರಿ ಅಧಿಕಾರಿಗಳು ಬಿಜೆಪಿ ಪಕ್ಷದ ಏಜೆಂಟ್ ಗಳಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆಂದು ಬಿದರಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ವಿ ವರುಣ್ ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇತ್ತಿಚೆಗೆ ಅಳವಡಿಸಿದ ಪ್ಲೆಕ್ಸ್ ಬ್ಯಾನರ್ ತೆರವುಗೊಳಿಸಿರುವುದನ್ನು ಖಂಡಿಸಿ ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹದೇವಪುರ ಕ್ಷೇತ್ರದ ಬಿದರಹಳ್ಳಿಯ ಪಂಚಾಯತಿ ಕಚೇರಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಪಕ್ಷದವರು ಸಭೆ ಸಮಾರಂಭಗಳಿಗೆ ಫ್ಲಕ್ಸ್ ಬ್ಯಾನರ್ ಗಳನ್ನು ಅಳವಡಿಸಿದರೆ ತಿಂಗಳಾದರು ತೆರವುಗೊಳ್ಳಿಸುವುದಿಲ್ಲ, ಅದರೆ ಕಾಂಗ್ರೆಸ್ ಪಕ್ಷದವರು ಹಾಕುವ ಬ್ಯಾನರ್ ಗಳನ್ನು ಕೇವಲ ಒಂದೆ ದಿನಕ್ಕೆ ತೆರವುಗೊಳ್ಳಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ಸಾರ್ವಜನಿಕವಾಗಿ ಕೆಲಸ ಮಾಡಬೇಕೆ ಹೊರತು, ಯಾವುದೇ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು. ಶಾಸಕರು ಅಧಿಕಾರಿಗಳ ಸಬೆ ಕರೆಯುವುದು ವಾಡಿಕೆ ಅದರೆ ಯಾವುದೇ ಹಕ್ಕು ಇಲ್ಲದಿದ್ದರೂ ಬಿಜೆಪಿ ಮುಖಂಡರು ನಡೆಸುವ ಸಭೆಗಳಿಗೆ ಸರಕಾರಿ ಅಧಿಕಾರಿಗಳು ಭಾಗವಹಿಸುವ ಮೂಲಕ ಬಿಜೆಪಿ ಪಕ್ಷದ ಕೈಗೊಂಬೆಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ಸರಕಾರಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಗತವಾಗಿ ಕೆಲಸ ಮಾಡಿದ್ದಾರೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಬಿದರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಲೋಹಿತ್ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಬಿದರಹಳ್ಳಿ ಬ್ಲಾಕ್ ಅಧ್ಯಕ್ಷ ಬಿ.ಡಿ ನಾಗಪ್ಪ,ಮಾಜಿ ಅಧ್ಯಕ್ಷ ಎಂಸಿಬಿ ಮುನಿರಾಜು, ಗ್ರಾ.ಪಂ ಸದಸ್ಯರಾದ ಬಿ.ಕೆ ಚಂದ್ರಶೇಖರ್, ಕುಮಾರ್, ಮುನಿಯಪ್ಪ,ಕಿಟ್ಟಿ, ಮುಖಂಡರಾದ ಸುನೀಲ್ ಉಪಸ್ಥಿತರಿದ್ದರು.