ಸರ್ಕಾರಿನೌಕರರಿಗೆ ಅವಾಚ್ಯ ಪದಬಳಕೆ ತಡೆಗೆ ಸಿಎಂಗೆ ಪತ್ರ

ಚಿಂಚೋಳಿ,ಆ 14: ಕೆಲವೊಬ್ಬ ಸಚಿವರು ಮತ್ತು ಶಾಸಕರು ಜಿಲ್ಲಾ ಮತ್ತು ತಾಲೂಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಅವರ ಅಧೀನ ನೌಕರಿಗೆ ಅವಾಚ್ಯ ಶಬ್ದಗಳಿಂದ ಸಂಭೋಧಿಸಿ ಅವಾಜ್ ಹಾಕಿ ಮಾತನಾಡುವುದು ಮೀಡಿಯಾ ಗಳಲ್ಲಿ ಹರಿದಾಡುತ್ತಿವೆ. ಕೆಲವು ಕಾಂಗ್ರೆಸ್ ಪಕ್ಷದ ಮುಖಂಡರು ಕೂಡ ಅಧಿಕಾರಿಗಳೊಂದಿಗೆ ಮತ್ತು ಇತರೆ ಅಧೀನ ನೌಕರಿಗೆ ಫೆÇೀನ್ ಕರೆ ಮಾಡಿ ನೀವು ನನಗೆ ಭೇಟಿ ಮಾಡಿ ಮಾತನಾಡಬೇಕು. ನಿನ್ನ ಮೇಲೆ ದೂರು ಇದೆ ಅದು ಅವಾಜ್ ಹಾಕುತ್ತಿರುವದಾಗಿ ಅನೇಕ ಅಧಿಕಾರಿಗಳು ಹಾಗೂ ಅಧೀನ ನೌಕರರು ಗೋಳಾಡುತ್ತಿದ್ದಾರೆ. ಅಧಿಕಾರಿಗಳು ಮತ್ತು ನೌಕರರು ಅವರ ಕರ್ತವಲೋಪ ಮಾಡುತ್ತಿದ್ದರೆ ಅವರ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ವಿರುದ್ಧ ದೂರು ದಾಖಲಿಸಬಹುದು. ಸರ್ಕಾರಿ ನೌಕರು ಸೇವಾ ನಿಯಮಗಳ ಪ್ರಕಾರ ತಪ್ಪಿತಸ್ಥ ಅಧಿಕಾರಿಗಳು ಮತ್ತು ನೌಕರರ ಮೇಲೆ ಕ್ರಮ ಜರುಗಿಸಬಹುದು ಆದರೆ ಆ ಅಧಿಕಾರಿಗಳನ್ನು ಖಾಸಗಿ ನೌಕರರಂತೆ ಕರೆ ಮಾಡಿ ಅವಾಜ್ ಹಾಕುತ್ತಿರುವುದು ಒಳ್ಳೆಯ ನಡೆದ ಅಲ್ಲ.ಇದು ಸಾರ್ವಜನಿಕರಲ್ಲಿ ಕೆಟ್ಟ ಪರಿಣಾಮ ಬೀರುವದಂತೂ ಸತ್ಯ.ಆದ್ದರಿಂದ ಈ ಕುರಿತು ಸಚಿವ ಶಾಸಕ ಮುಖಂಡರಿಗೆ ಮಾರ್ಗದರ್ಶನ ಮಾಡಬೇಕೆಂದು ಚಿಂಚೋಳಿಯ ಹಿರಿಯ ಸಮಾಜ ಸೇವಕ ರಮೇಶ ಯಾಕಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮುಖಾಂತರ ಮನವಿ ಮಾಡಿದ್ದಾರೆ