ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಲಿಂಕ್ ಮಾಡಿಸಿ

ಹರಿಹರ ಜೂ 14 ; ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಪ್ರತಿಯೊಬ್ಬ ಫಲಾನುಭವಿಗಳು ಆಧಾರ್ ನಂಬರ್ ಗೆ ಮೊಬೈಲ್ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು ಎಂದು ತಹಶೀಲ್ದಾರ್ ಗ್ರೇಟ್ 2 ಶಶಿಧರಯ್ಯ ತಿಳಿಸಿದರು.ನೀವು ಸರ್ಕಾರದಿಂದ ವೃದ್ಧಾಪ್ಯ ವೇತನ, ಅಂಗವಿಕಲ ವಿಧವಾ  ಸಂಧ್ಯಾ ಸುರಕ್ಷಾ ಮನಸ್ವಿನಿ ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುತ್ತಿರುವವರುಕೆಲವೊಂದು ತಾಂತ್ರಿಕ ಕಾರಣಗಳಿಂದ ನಿಮ್ಮ ಆಧಾರ್ ನಂಬರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲ ಲಿಂಕ್ ಆಗಿರದ ಫಲಾನುಭವಿಗಳು ಪಟ್ಟಿ ನಿಮ್ಮ ಪಿಂಚಣಿ ಜಮಾ ಹಾಗೂ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ನಲ್ಲಿ ಸಿಗುತ್ತದೆ ಮತ್ತು ನಿಮ್ಮ ಗ್ರಾಮದ ಆಡಳಿತ ಅಧಿಕಾರಿಗಳ ಬಳಿ ಲಭ್ಯವಾಗುತ್ತದೆ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿಲ್ಲ ಮತ್ತು ಎನ್ ಪಿ ಸಿ ಐ ಗೆ ಆಧಾರ್ ನಂಬರ್ ಲಿಂಕ್ ಆಗಿಲ್ಲ ಅನ್ನುವ 3 ರೀತಿಯ ಪಟ್ಟಿ ಇರುತ್ತದೆ ನೀವು ಕಡ್ಡಾಯವಾಗಿ ಜೂನ್ 15 ರ ಒಳಗಾಗಿ ಪಿಂಚಣಿ ಜಮಾ ಆಗುವ ಬ್ಯಾಂಕಿಗೆ ಪೋಸ್ಟ್ ಆಫೀಸ್ಗೆ ಹೋಗಿ ಆಧಾರ್ ನಂಬರ್ ಲಿಂಕ್ ಮಾಡಿಸಲೇ ಬೇಕು ತಪ್ಪಿದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ತಾವು ಪಡೆದುಕೊಳ್ಳಲು ತೊಂದರೆ ಆಗುತ್ತದೆ ಆದ್ದರಿಂದ ದಯಮಾಡಿ ಕಡ್ಡಾಯವಾಗಿ ಪ್ರತಿಯೊಬ್ಬ ಫಲಾನುಭವಿಗಳು ಆಧಾರ್ ನಂಬರ್ ಲಿಂಕ್ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರು