ಸರ್ಕಾರದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಜಗಳೂರು.ಏ.೧೮; ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳಬಗ್ಗೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತೆಯಾಗಿ ಜಗಳೂರು ತಾಲೂಕು ಕಚೇರಿ ಸಭಾಂಗಣದಲ್ಲಿಂದು ತಾಲೂಕು ದಂಡಾಧಿಕಾರಿ ಡಾ.ನಾಗವೇಣಿ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ  ಉಚ್ಚ ನ್ಯಾಯಾಲಯದ ಕೆಲವೊಂದು ನಿರ್ದೇಶನಗಳನ್ನು ನೀಡಿದ್ದು ಅದರಂತೆ ಕ್ರಮ ಕೈಗೊಳ್ಳುತ್ತೇವೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅದರಲ್ಲೂ ಜನಸಂದಣಿ ಹೆಚ್ಚುತ್ತಿರುವ ಕೊಳಚೆ ಪ್ರದೇಶ ಹಾಗೂ ನಿರ್ಮಾಣ ಶಿಬಿರದಲ್ಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಮುಂದೆ ಬಂದು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕೊಳ್ಳಬೇಕುಆರೋಗ್ಯ ಇಲಾಖೆಯು ಕೋವಿಡ್ ಲಸಿಕಾ ಸಂಬಂಧಿಸಿದಂತೆ ನಿಗದಿಪಡಿಸಿರುವ ಆದ್ಯತೆ ಕ್ರಮಾಂಕಕ್ಕೆ ಧಕ್ಕೆಯಾಗದಂತೆ ಕೊಳಗೇರಿ ಹಾಗೂ ನಿರ್ಮಾಣ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರಿಗೆ ಕೋವಿಡ್ ಹೇಗೆ ಸಾಧಿಸಬಹುದು ಎಂಬುದನ್ನು ಕುರಿತು ಸ್ಥಳೀಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಕೋವಿಡ್ ಲಸಿಕೆ ಕುರಿತು ಕೊಳಗೇರಿ ನಿರ್ಮಾಣ ಶಿಬಿರ ಇನ್ನಿತರೆ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಅರಿವು ಮೂಡಿಸುವ ಚಟುವಟಿಕೆಯನ್ನು ಹಮ್ಮಿಕೊಳ್ಳಲು ವಹಿಸುತ್ತೇವೆ ಎಂದರು ನಂತರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಾಜು ಡಿ ಬಣಕಾರ್ ಮಾತನಾಡಿ ಸಾರ್ವಜನಿಕ ಪ್ರದೇಶಗಳಾದ ರೆಸ್ಟೋರೆಂಟ್ ಮದುವೆ ಆಲ್ ಮುಂತಾದವುಗಳಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ ಧರಿಸುವುದನ್ನು ಖಾತರಿಪಡಿಸಿಕೊಂಡು ಮದುವೆ ಸಮಾರಂಭಗಳಲ್ಲಿ 200 ಜನ ಮೀರದಂತೆ ತೆರೆದ ಪ್ರದೇಶಗಳಲ್ಲಿ ನೂರು ಜನ ಮೀರದಂತೆ ಕಲ್ಯಾಣ ಮಂಟಪ ಸಭಾಂಗಣಗಳು ಹಾಲ್ ನಲ್ಲಿ  ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ಮಾತ್ರ ಜನ ಸೇರಬಹುದು ಎಂದರು.
ಆರಕ್ಷಕ ಉಪ ನಿರೀಕ್ಷಕರಾದ ಸಂತೋಷ್ ಬಾಗೂಜೀ ಮಾತ
ನಾಡಿ ಜನದಟ್ಟಣೆ ಪ್ರದೇಶದಲ್ಲಿ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿಯಮ ಉಲ್ಲಂಘಿಸಿದವರಿಗೆ ನೂರು ರೂಪಾಯಿಗಳನ್ನು ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು  ಎಂದು  ತಿಳಿಸಿದರು ತಾಲೂಕು ಆರೋಗ್ಯಧಿಕಾರಿ ಡಾ.ನಾಗರಾಜ್ ಮಾತನಾಡಿ ಪಟ್ಟಣ ಪಂಚಾಯಿತಿ ಗುರುತಿಸುವ ಕೊಳಗೇರಿ ಪ್ರದೇಶ ಜನಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಕರೆತಂದು ಕೋವಿಡ್ ವ್ಯಾಕ್ಸಿನ್ ಚುಚ್ಚುಮದ್ದು ಹಾಕಿಸಲಾಗುವುದು ಎಂದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಕಂದಾಯ ನಿರೀಕ್ಷಕರಾದ ಸಂತೋಷ್ ಕುಮಾರ್ 
ಆರೋಗ್ಯ ನಿರೀಕ್ಷಕ ಕೀಪಾಹಿತ್ ಅಮದ್ ತಾಲೂಕು ಪಂಚಾಯಿತಿ ಶಿವಕುಮಾರ್ ಕಂದಾಯ ಇಲಾಖೆ ಸಿಬ್ಬಂದಿಗಳಾದ ಶ್ರೀನಿವಾಸ್ ವಿಜಯಕುಮಾರ್ ನಿಜಗುಣ ಸೇರಿದಂತೆ ಭಾಗವಹಿಸಿದ್ದರು