ಸರ್ಕಾರದ ಸುತ್ತೋಲೆಗೆ ವಿರೋಧ:ನಿವೃತ್ತ ಪಿಂಚಣಿದಾರರ ಪ್ರತಿಭಟನೆ

ದಾವಣಗೆರೆ.ಜ.೧೦: ಸರ್ವೋಚ್ಚ ನ್ಯಾಯಾಲಯದ ಆದೇಶ ಧಿಕ್ಕರಿಸಿ ಅನುಕೂಲಕ್ಕೆ ತಕ್ಕಂತೆ ಮಾರಕ ಸುತ್ತೋಲೆ ಹೊರಡಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ  ದಾವಣಗೆರೆಯ ಭವಿಷ್ಯ ನಿಧಿ ಕಚೇರಿ ಎದುರು ನಿವೃತ್ತ ಪಿಂಚಣಿದಾರರು ಪ್ರತಿಭಟನೆ ನಡೆಸಿದರು.ಸರಿ ಸುಮಾರು ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಸರ್ಕಾರಿ, ಸಾರಿಗೆ ಸಂಸ್ಥೆ ಇತರಡೆ ಕೆಲಸ ಮಾಡಿ ನಿವೃತ್ತರಾದವರು ಅತೀ ಕಡಿಮೆ ಪ್ರಮಾಣದ ಪಿಂಚಣಿ ನೀಡುತ್ತಿರುವುದರಿಂದ ನಿವೃತ್ತಿ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಸರಾಸರಿ ಏಳೂವರೆ ಸಾವಿರ ಪಿಂಚಣಿ, ಮರಣ ಹೊಂದಿದ ನಿವೃತ್ತರ ಪತ್ನಿಯರಿಗೆ ಪೂರ್ಣ ಪ್ರಮಾಣದ ಪಿಂಚಣಿ ವಿತರಣೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.ಸರ್ವೋಚ್ಚ ನ್ಯಾಯಾಲಯ ಸೂಕ್ತ ಅಂದರೆ ಗೌರವಯುತ ಜೀವನ ನಡೆಸಲು ಅನುಕೂಲವಾಗುವಂತೆ ಪಿಂಚಣಿ ನೀಡಬೇಕು ಎಂದು ಆದೇಶಿಸಿದೆ.‌ ಒಂದು ವಾರದಲ್ಲಿ ಸುತ್ತೋಲೆ ಹೊರಡಿಸಬೇಕು ಎಂದು ತಮಗೆ ಬೇಕಾದಂತೆ ಸುತ್ತೋಲೆ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದು ದೂರಿದರು.ಸಮಿತಿಯ ಜಿಲ್ಲಾ ಸಂಚಾಲಕ ಎಂ. ಶಾಂತಪ್ಪ, ಕೆ.ಎಂ. ಮರುಳಸಿದ್ದಯ್ಯ ನಾಗರಾಜ್, ಚಂದ್ರಪ್ಪ, ರುದ್ರಪ್ಪ, ಸಂಗಪ್ಪ, ಗಂಗಾಧರ್, ಡಿ.ಎಚ್. ಶೆಟ್ಟರ್, ಗುರುಮೂರ್ತಿ, ವಿಶ್ವನಾಥಯ್ಯ, ನಾರಾಯಣ ಶಿಂಧೆ, ಕೆ. ನಾಗಪ್ಪ ಇತರರು ಇದ್ದರು.