ಸರ್ಕಾರದ ಸವಲತ್ತು ಪಡೆದು ಆರ್ಥಿಕವಾಗಿ ಸಬಲರಾಗಿ, ರೈತರಿಗೆ ಕಿವಿಮಾತು


ಸಂಜೆವಾಣಿ ವಾರ್ತೆ
ಕೂಡ್ಲಿಗಿ.. ಡಿ.25 :- ಸರ್ಕಾರವು ರೈತ ಪರ ಅನೇಕ ರೀತಿಯ ಯೋಜನೆಗಳನ್ನು ರೂಪಿಸಿದ್ದು ಆ ಯೋಜನೆಯ ಸವಲತ್ತು ಪಡೆಯುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗುವಂತೆ ಕೂಡ್ಲಿಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಂ ಟಿ ಸುನೀಲಕುಮಾರ ರೈತರಿಗೆ ಕಿವಿಮಾತು ಹೇಳಿದರು.
ಅವರು ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ರೈತರ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಾಜಿ ಪ್ರಧಾನಿ  ಚರಣ್‌ಸಿಂಗ್ ಅವರ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸುತ್ತಿದ್ದು, ಕೃಷಿಯೆಡೆಗಿನ ಅವರ ಕಾಳಜಿ ಮತ್ತು ಪ್ರಬುದ್ಧತೆಯಿಂದ ಅವರು  ರೈತರ ಚಾಂಪಿಯನ್ ಆಗಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಟಿ.ಸುನಿಲ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಸಿದ್ದನಗೌಡ,,ಪ್ರಧಾನ ಕಾರ್ಯದರ್ಶಿ ಕಕ್ಕುಪ್ಪಿ ಎಂ.ಬಸವರಾಜ ಮತ್ತು ರೈತ ಸಂಘದ ಜಿಲ್ಲಾ ಅಧ್ಯಕ್ಷ ದೇವರಮನೆ ಮಹೇಶ್ ಮಾತನಾಡಿ, ಕಡಿಮೆ ಖರ್ಚಿನಲ್ಲಿ  ಅಧಿಕ ಲಾಭಗಳಿಸಲು ರೈತರು ಸಾವಯವ, ವೈಜ್ಞಾನಿಕ ಕೃಷಿ ಜತೆಗೆ ಮಿಶ್ರಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಮಾಜಿ ಪ್ರಧಾನಿ ಹಾಗೂ ರೈತಪರ ಕಾಳಜಿಯ ರಾಜಕಾರಣಿಯಾಗಿದ್ದ ಚೌದ್ರಿ ಚರಣ್‌ಸಿಂಗ್ ಅವರ ಸಾಧನೆ ಹಾಗೂ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸುವ ಮೂಲಕ ವಿದ್ಯಾರ್ಥಿ ಹಂತದಲ್ಲೇ ಕೃಷಿಯ ಬಗ್ಗೆ ತಿಳಿಸುವಂತಾಗಬೇಕು ಎಂದರು.
ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಣವಿಕಲ್ಲು ಎರಿಸ್ವಾಮಿ, ಎಫ್‌ಪಿಒ ಅಧ್ಯಕ್ಷ ಕಕ್ಕುಪ್ಪಿ ಹನುಮಂತಪ್ಪ, ಸಿಇಒ ಆರ್.ಕೆ.ನಾಗರಾಜ, ಕಾನಹೊಸಹಳ್ಳಿ ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ ಮಾತನಾಡಿದರು. ತಾಲೂಕಿನ ಉತ್ತಮ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಪೂಜಾರಹಳ್ಳಿ ಈಶ್ವರಮ್ಮ, ಕಡೇಮನಿ ಭರಮಪ್ಪ, ಆರ್.ಎಂ.ಗುರುಬಸವರಾಜ, ಒಚಿಟಿ ಪಾಲಪ್ಪ, ಹೆಗ್ಗಪ್ಪ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಸದಸ್ಯ ಕೆ.ಸಿದ್ದಪ್ಪ, ಕೃಷಿ ತಾಂತ್ರಿಕ ಅಧಿಕಾರಿ ನೀಲಾನಾಯ್ಕ, ಕೃಷಿ ಅಧಿಕಾರಿಗಳಾದ ಸಾವಿತ್ರಿ, ಟಿ.ಚೈತ್ರಾ, ಗುರುಬಸವರಾಜ, ಆತ್ಮ ಯೋಜನೆ ಬಿಟಿಎಂಗಳಾದ ಶ್ರವಣಕುಮಾರ್, ರಾಮಕೃಷ್ಣ, ಗೌತಮಕುಮಾರ್, ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕರಾದ ಮಲ್ಲಿಕಾರ್ಜುನ, ಚನ್ನಪ್ಪ, ಅನುವುಗಾರ ಕಾನಹೊಸಹಳ್ಳಿ ಸಣ್ಣ ನಾಗಪ್ಪ ಸೇರಿ ಇತರರಿದ್ದರು.