ಸರ್ಕಾರದ ವೈಫಲ್ಯತೆ ಖಂಡಿಸಿ “ಬ್ಲಾಕ್ ಡೇ” ಘೋಷಣೆಯ ಪ್ರತಿಭಟನೆ

ಕಲಬುರಗಿ,ಮೇ.26- ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಆಗ್ರಹಿಸಿ ಹಾಗೂ ಜನ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ಸು ಪಡೆಯಲು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಗಳ ನೇತೃತ್ವದಲ್ಲಿಂದು ಪ್ರತಿಭಟನಾ ಪ್ರದರ್ಶನ ಕೈಗೊಳ್ಳಲಾಯಿತು.
ಜನ ವಿರೋಧಿ ಕೃಷಿ ಕಾಯಿದೆಗಳನ್ನು ಕೈಬಿಡಲು ಆಗ್ರಹಿಸಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟವು ಇಂದು ಮೇ 26 ಕ್ಕೆ 6 ತಿಂಗಳು ಪೂರ್ಣ ಗೊಳ್ಳಲಿದೆ. ಟ್ರೇಡ್ ಯೂನಿಯನ್‍ಗಳ ಅಖಿಲ ಭಾರತ ಮುಷ್ಕರವೂ 6 ತಿಂಗಳುಗಳನ್ನು ಪೂರ್ತಿಗೊಳಿಸುತ್ತಿದೆ.
ಜೊತೆಗೆ ದೇಶದಲ್ಲಿ ಮಾರಣಾಂತಿಕ ಕೋವಿಡ್ ಸೋಂಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರು ಸಮರ್ಪಕ ಚಿಕಿತ್ಸೆ ಸಿಗಲಾರದೇ ಸಾವೀಗೀಡಾಗುತ್ತಿದ್ದಾರೆ. ಇನ್ನೊಂದೆಡೆ ಸರಕಾರಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇಕಾಬಿಟ್ಟಿ ಲಾಕ್ಡೌನ್ ಘೋಷಿಸಿರುವುದರಿಂದಾಗಿ ಅಗತ್ಯ ಆಹಾರದ ಕೊರತೆಯಿಂದಾಗಿ ಹಸಿವಿನಿಂದ ಜನತೆ ಸಾಯುವಂತಾಗಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವ ಆಸ್ಪತ್ರೆಗಳು, ಔಷಧಿ, ಅಕ್ಸಿಜನ್, ವೆಂಡಿ ಲೇಟರ್, ಸಿಬ್ಬಂದಿ ನೇಮಕ ಇತ್ಯಾದಿ ಸೌಲಭ್ಯಗಳನ್ನು ಹಾಗೂ ಅಹಾರ ಭದ್ರತೆ ಒದಗಿಸಿ ಜನರ ಪ್ರಾಣಗಳನ್ನು ರಕ್ಷಿಸಬೇಕಾದ ಸರಕಾರ ಹೃದಯಹೀನವಾಗಿ ಕಾಪೆರ್Ç
ರೇಟ್‍ಪರ ನೀತಿಗಳನ್ನು ಜಾರಿಮಾಡುತ್ತಿದೆ.
ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ ಇಂದು ಕರ್ನಾಟಕ ರಾಜ್ಯವ್ಯಾಪಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿ-ಯುವಜನ-ಮಹಿಳೆಯರು, ರೈತ-ಕಾರ್ಮಿಕರು ಹಾಗೂ ಜನ ಸಾಮನ್ಯರೆಲ್ಲರೂ ಮನೆ ಮನೆ ಎದುರು ‘
“ಬ್ಲಾಕ್ ಡೇ” ಘೋಷಣೆಯ ಪ್ರತಿಭಟನೆ ನಡೆಸಿ ಬೇಡಿಕೆಯ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ಆಮ್ಲಜನಕ, ವೆಂಟಿಲೇಟರ್, ಔಷಧಿ ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಒದಗಿಸಲು ಪಿಎಂ ಕೇರ್ ನ ಬೃಹತ್ ಹಣವನ್ನು ಬಳಸಬೇಕು. ಸೆಂಟ್ರಲ್ ವಿಸ್ಟಾ ಯೋಜನೆ
ಯನ್ನು ನಿಲ್ಲಿಸಿ, ಅದರ ಹಣವನ್ನೂ ಸಹ ಕೋವಿಡ್ ರೋಗ ನಿಯಂತ್ರಣಕ್ಕೆ ಬಳಸಬೇಕು ಎಂದು ಒತ್ತಾಯಿಸಲಾಯಿತು.
ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು. ಎಲ್ಲಾ ನಾಗರಿಕರಿಗೆ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ನೀಡಬೇಕು.
ಖಾಸಗಿ ಆರೋಗ್ಯ ವ್ಯವಸ್ಥೆಯನ್ನು ನಿಯಂತ್ರಿಸಲು ತಕ್ಷಣವೇ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು.ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಬೇಕಾಗುವಷ್ಟು ಹಣವನ್ನು ನಿಗದಿಪಡಿಸಬೇಕು.
ತೆರಿಗೆದಾರರಲ್ಲದ ಕುಟುಂಬಗಳ ಖಾತೆಗೆ ತಕ್ಷಣ 10 ಸಾವಿರ ರೂಗಳನ್ನು ಹಾಕಬೇಕು. ಆರು ತಿಂಗಳವರೆಗೆ ಅಗತ್ಯವಿರುವ ಎಲ್ಲರಿಗೂ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು. ದ್ವಿದಳ ಧಾನ್ಯ, ಎಣ್ಣೆ, ಸಕ್ಕರೆ ಮುಂತಾದ ಇತರ ಅಗತ್ಯ ವಸ್ತುಗಳ ಜೂತೆಯಲ್ಲಿ ಸ್ಯಾನಿಟರಿ ನ್ಯಾಪಕಿನ್ ಸಹ ಪಿಡಿಎಸ್- ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಒದಗಿಸಬೇಕು.
ಮನರೇಗಾ ಯೋಜನೆಯಲ್ಲಿ 200 ದಿನದ ಕೆಲಸ ಹಾಗೂ 600 ಕೂಲಿಯನ್ನು ಹೆಚ್ಚಿಸಬೇಕು. ನಗರ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭಿಸಬೇಕು. ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ಬಡ್ಡಿ ಸಹಿತ ಸಾಲ ಮನ್ನಾ ಮಾಡಬೇಕು. ಹೊಸ ಸಾಲ ಸೌಲಭ್ಯ ನೀಡಬೇಕು.
.ಒಈI ಸಂಸ್ಥೆಗಳನ್ನು ನಿಯತ್ರಣ ಮಾಡಬೇಕು.
ಖಾಸಗಿ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು. ಎಲ್ಲಾ ನೋಂದಾಯಿತ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಪಡಿತರ ವ್ಯವಸ್ಥೆಯಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಉಚಿತವಾಗಿ ನೀಡಬೇಕು.
ಶೈಕ್ಷಣಿಕ ಕ್ಷೇತ್ರದ – ಸೆಮಿಸ್ಟರ್ ಶುಲ್ಕ ಸೇರಿದಂತೆ ಎಲ್ಲಾ ತರಹದ ಶುಲ್ಕಗಳನ್ನು ಹಿಂತೆಗೆದುಕೊಳ್ಳಬೇಕು. ಅನ್ ಲೈನ್ ಶಿಕ್ಷಣಕ್ಕೆ ಅಗತ್ಯವಾದ ಪರಿಕರಗಳನ್ನು ಎಲ್ಲಾ ಬಡವರಿಗೆ ಹಾಗೂ ಸಾಮಾಜಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಜಿಲ್ಲಾಧ್ಯಕ್ಷೆ ಅಮೀನಾ ಬೇಗಂ, ಜಿಲ್ಲಾ ಕಾರ್ಯದರ್ಶಿ ನಂದಾದೇವಿ ಮಂಗೊಂಡಿ ಸೇರಿದಂತೆ ಹಲವರಿದ್ದರು.