
ಸಂಜೆವಾಣಿ ನ್ಯೂಸ್
ಮೈಸೂರು: ಜು.23:- ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮೈಸೂರಿನ ಜಿಪಂ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಶ್ರೀವತ್ಸ ಮಾತನಾಡಿ, ರಾಜ್ಯದಲ್ಲಿ ಮೊನ್ನೆ ಮೊನ್ನೆ ವಿಪಕ್ಷಗಳು ಸಭೆ ನಡೆಸಿದ್ದರು. ಅವರು ಸಭೆ ನಡೆಸಿದ್ದಕ್ಕೆ ನಮಗೆ ತಕರಾರಿಲ್ಲ. ಆ ಸಭೆಗೆ ಹಿರಿಯ ಐಎಎಸ್ ಅಧಿಕಾರಿಗಳನ್ನ ಬಳಸಿಕೊಂಡಿದ್ದಕ್ಕೆ ನಮ್ಮ ವಿರೋಧವಿದೆ. ಪೆÇ್ರಟೋಕಾಲ್ ಎಲ್ಲರಿಗೂ ಅನ್ವಯಿಸುವುದಿಲ್ಲ. ನಾವು ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಶಾಸಕರನ್ನ ಸದನದಿಂದ 3ದಿನಗಳ ಕಾಲ ಅಮಾನತು ಮಾಡಿದ್ದರು. ಈ ಹಿಂದೆ ಸಿದ್ದರಾಮಯ್ಯನವರು ವಿಧಾನಸೌಧದ ಬಾಗಿಲಿಗೆ ಬೂಟು ಕಾಲಿನಲ್ಲಿ ಒದ್ದರು. ಪೆÇೀಲೀಸ್ ಅಧಿಕಾರಿ ಶಂಕರ್ ಬಿದರಿ ಕೊರಳಿಗೆ ಕೈ ಹಾಕಿದ್ದರು. ಶಾಸಕ ಸಂಗಮೇಶ್ ಬಟ್ಟೆ ಹರಿದುಕೊಂಡು ಸ್ಪೀಕರ್‍ಗೆ ಅಗೌರವ ತೋರಿದ್ದರು. ಜಮೀರ್ ಅಹ್ಮದ್ ಖಾನ್ ಸ್ಪೀಕರ್ ಬಳಿಯಿದ್ದ ಮೈಕ್ ಕಿತ್ತುಕೊಂಡು ಅಗೌರವ ತೋರಿದ್ದರು. ಆಗ ನಾವು ಇವರನ್ನ ಅಮಾನತು ಮಾಡಿದ್ದೇವೆ ಎಂದು ಪ್ರಶ್ನಿಸಿದರು.
ನಾವು ಕಾಂಗ್ರೆಸ್ ಗ್ಯಾರಂಟಿ ವಿರೋಧಿಗಳಲ್ಲ. ನೀವು ನೀಡಿರುವ ಗ್ಯಾರಂಟಿ ಯೋಜನೆಗಳನ್ನ ಎಲ್ಲರಿಗೂ ಕೊಡಿ ಎಂದು ಹೇಳುತ್ತಿದ್ದೇವೆ. ಗೃಹ ಸಚಿವರು ಬೆಂಗಳೂರಿನಲ್ಲಿ ಸಿಕ್ಕ ಶಂಕಿತ ಉಗ್ರರನ್ನ ಉಗ್ರಗಾಮಿಗಳಲ್ಲ ಅಂತ ಹೇಳುತ್ತಾರೆ. ನಾವು ಸರ್ಕಾರದ ವೈಫಲ್ಯದ ಹೋರಾಟ ಮಾಡುತ್ತಿದ್ದೇವೆ. ಬಜೆಟ್ನಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಾಡಿ, ಸಾಮಾನ್ಯರಿಗೆ ಮೋಸ ಮಾಡಲಾಗಿದೆ. ರೈತ ಕಿಸಾನ್ ನಿಧಿಯಡಿ ವಾರ್ಷಿಕವಾಗಿ 4 ಸಾವಿರ ಜಮೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ನೀರಾವರಿ ಯೋಜನೆಗೂ ಅನುದಾನ ಕಡಿತ ಮಾಡಲಾಗಿದೆ. ಒಟ್ಟಿನಲ್ಲಿ ಸರಕಾರವು ತನ್ನ ಸರ್ವಾಧಿಕಾರಿ ಧೋರಣೆಯನ್ನು ತೋರಲು ಹೋಗಿ ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರ ರೈತರ ಮಕ್ಕಳಿಗೆ, ನೇಕಾರರಿಗೆ, ಆಟೋ, ಟ್ಯಾಕ್ಸಿ, ಕ್ಯಾಬ್ ಡ್ರೈವರ್ಗಳು ಹಾಗೂ ಮೀನುಗಾರರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದೆ. ಬಿಜೆಪಿಯು ಮಾಡಿರುವ ಉತ್ತಮ ಕೆಲಸಗಳನ್ನು ಸಹಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಬಗ್ಗೆ ಸರಕಾರ ತುಟಿ ಬಿಚ್ಚುತ್ತಿಲ್ಲ. ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡದಿರುವುದೂ ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿಯು ಹೋರಾಟ ನಡೆಸುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮೇಯರ್ ಶಿವಕುಮಾರ್, ಉಪಮೆಯರ್ ರೂಪ, ಮುಡಾ ಮಾಜಿ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‍ಗೌಡ, ಮಾಜಿ ಶಾಸಕರಾದ ಹರ್ಷವರ್ಧನ್, ನಾಗೇಂದ್ರ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮಾಜಿ ಸಚಿವ ಸಿ.ಹೆಚ್.ವಿಜಯ್ ಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಚಾಮುಂಡೇಶ್ವರಿ ಬಿಜೆಪಿ ಮುಖಂಡ ಅರುಣ್ ಕುಮಾರ್‍ಗೌಡ, ಡಾ.ರೇವಣ್ಣ, ಬಿಜೆಪಿ ನಗರ ಮಹಿಳಾಧ್ಯಕ್ಷೆ ಹೇಮಲತ ನಂದೀಶ್, ಮಹದೇವಯ್ಯ ಇನ್ನಿತರರು ಹಾಜರಿದ್ದರು.