ಸರ್ಕಾರದ ವಿರುದ್ಧ ಪಿತೂರಿ ಮಾಹಿತಿ ಇದೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು. ಜು. ೨೪- ನಮ್ಮ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಉರುಳಿಸಲು ಕೆಲವರು ಹಿಂದೂಪುರದಲ್ಲಿ ಪಿತೂರಿ ನಡೆಸಿದ್ದಾರಂತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಆ ಬಗ್ಗೆ ನನಗೂ ನನದೇ ಆದ ಮೂಲಗಳಿಂದ ಮಾಹಿತಿ ಇದೆ ಎಂದರು.ಕೆಲವರು ಬೆಂಗಳೂರಿನಲ್ಲಿ ಆಗದ ಕೆಲಸವನ್ನು ಹಿಂದೂಪುರಕ್ಕೆ ಹೋಗಿ ಮಾಡುವುದು ಸಾಧ್ಯವಿಲ್ಲ. ಅವರು ಏನು ತಂತ್ರ ಮಾಡುತ್ತಿದ್ದಾರೆ, ಯಾರು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.
ರೈತರ ಸಭೆ
ಫೆರಿಫೆರಲ್ ರಿಂಗ್ ರಸ್ತೆ ಭೂ ಸ್ವಾಧೀನ ವಿಚಾರವಾಗಿ ಕೆಲ ರೈತರು ಇಂದು ನನ್ನ ಭೇಟಿ ಮಾಡಿದ್ದರು. ಈ ತಿಂಗಳ ೩೧ ರಂದು ಆ ರೈತರ ಜತೆ ಸಭೆ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.