ಸರ್ಕಾರದ ವತಿಯಿಂದ ನೀಲಕಂಠೇಶ್ವರ ಜಯಂತಿ ಆಚರಿಸಲಿ : .ನೀಲಕಂಠಮಠ


ಗುಳೇದಗುಡ್ಡ,ಎ.17: ಯುಗಾದಿ ಹಬ್ಬವು ಕುರುಹಿನಶೆಟ್ಟಿ ನೇಕಾರ ಸಮುದಾಯದ ಹಬ್ಬವಾಗಿದೆ. ನಮ್ಮ ಕುರುಹಿನಶೆಟ್ಟಿ ಹುಟ್ಟು ಹೇಗಾಯಿತ್ತು ಅದಕ್ಕೆ ಕಾರಣ ಮತ್ತು ನಮ್ಮ 66 ಗೋತ್ರಗಳ ಮಹತ್ವ, ಶ್ರೀ ನೀಲಕಂಠೇಶ್ವರ ದೇವರು ಕುರುಹಿನಶೆಟ್ಟಿ ನಜಾಂಗದ ಕುಲ ದೇವರಾಗಿದ್ದು. ಸಮಾಜದ ಜನಾಂಗದವರು ಸಂಘಟನೆ ಬೆಳೆಸಿಕೊಂಡು ನೀಲಕಂಠೇಶ್ವರ (ರುದ್ರ) ದೇವರ ಜಯಂತಿ ಉತ್ಸವನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಮಾಡಲು ಸಮಾಜದ ಮುಖಂಡರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅಧ್ಯಕ್ಷತೆ ವಹಿಸಿದ ನಿವೃತ್ತ ಉಪನ್ಯಾಸಕ ಮಹಾದೇವಸ್ವಾಮಿ ನೀಲಕಂಠಮಠ ಹೇಳಿದರು. ಪಟ್ಟಣದ ಮಂಗಳವಾರ ಕುರುಹಿನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕುರುಹಿನಶೆಟ್ಟಿ ನೇಕಾರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನೀಲಕಂಠೇಶ್ವರ (ರುದ್ರ) ಜಯಂತಿ ಉತ್ಸವದಲ್ಲಿ ಭಾವಚಿತ್ರಕ್ಕೆ ಕರಡಿಮಜಲು, ವಾದ್ಯ ನುಡಿಸುವ ಮುಖಾಂತರ ಸಂಭ್ರಮದಿಂದ ಪೂಜೆ ನೆರವೇರಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಸಂಗಮೇಶ ಹುನಗುಂದ ಮಾತನಾಡಿ ಈ ಯುಗಾದಿ ಹಬ್ಬ ಅನ್ನೋದು ಭಾರತೀಯರ ಪಾಲಿನ ಹೊಸ ವರ್ಷದ ಸಂಭ್ರಮದ ದಿನ. ಈ ವರ್ಷದ ಯುಗಾದಿ ಎಲ್ಲರ ಜೀವನದಲ್ಲಿ ಕಹಿ ಮರೆಯಾಗಿ, ಸಿಹಿ ಬೆಲ್ಲದಂತಾಗಲಿ ಎಂದು ಶುಭ ಕೋರಿದರು.
ಈ ಜಯಂತಿಗಳಲ್ಲಿ ಭಾಗವಹಿಸುವ ಎಲ್ಲಾ ಕುರುಹಿನಶೆಟ್ಟಿ ನೇಕಾರ ಕುಲ ಭಾಂದವರು ಸೇರಿ ಈ ಆಚರಣೆಗೆ ಜಿಲ್ಲಾಡಳಿತವನ್ನು (ಸರಕಾರಕ್ಕೆ) ಒತ್ತಾಯಿಸುವ ಪೂರ್ವಭಾವಿ ಸಿದ್ಧತೆ ನಡೆಸುವ ಕೆಲಸವನ್ನು ಈಗಿಂದೀಗಲೇ ಆರಂಭಿಸಬೇಕು.
ನೇಕಾರ ಕುರುಹಿನಶೆಟ್ಟಿ ಸಂಘಟಿತರಾಗದಿರುವುದೇ ರಾಜಕಾರಣಿಗಳ ಅಸಡ್ಡಗೆ ಮುಖ್ಯ ಕಾರಣ. ನಾವೆಲ್ಲರೂ ಒಂದು ಚೌಕಟ್ಟಿಗೆ ಬಂದು ನಿಂತಾಗ ಸರ್ಕಾರವೂ ಜನಾಂಗದತ್ತ ತಿರುಗಿ ನೋಡುತ್ತದೆ. ಆಗ ಆರ್ಥಿಕ, ಶೈಕ್ಷಣಿಕ ನೆಲೆ ಹಾಗೂ ಮೀಸಲಾತಿ ಪಡೆಯಲು ಸಾಧ್ಯವಾಗುವುದು. ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಶ್ರೀ ನೀಲಕಂಠೇಶ್ವರ (ರುದ್ರ) ಜಯಂತಿ ಆಚರಣೆಯಾಗಬೇಕು,ಶ್ರೀ ನೀಲಕಂಠೇಶ್ವರ (ರುದ್ರ) ಜಯಂತಿಯಲ್ಲಿ ನಮ್ಮ ನೇಕಾರ ಕುಲಭಾಂದವರು ಪಾಲ್ಗೊಂಡು ಗೌರವ ಸಲ್ಲಿಸುವಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಜಯಂತಿಯ ಆಚರಣೆ ನಂತರ ಎಲ್ಲರಿಗೂ ಬೇವು ಮತ್ತು ಬೆಲ್ಲದ ಯಚ್ಚವನ್ನು ಹಚ್ಚಲಾಯಿತು.
ಈ ಸಂಧರ್ಭದಲ್ಲಿ ಕುರುಹಿನಶೆಟ್ಟಿ ಸಮಾಜದ ಹಿರಿಯರು, ಪುರಸಭೆ ಅಧ್ಯಕ್ಷೆ, ಸದಸ್ಯ, ಹಾಗೂ ಮಹಿಳಾ ಸಂಘಟನೆದಾರರು, ಕುರುಹಿನಶೆಟ್ಟಿ ಯುವ ಕುಟುಂಬ ಹಾಗೂ ವಿವಿಧೋದ್ದೇಶಗಳ ಸಂಘದವರು, ಸಮಾಜದ ಯುವಕರು ಮತ್ತಿತರರು ಇದ್ದರು.