ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ಚುನಾವಣಾ ಗಿಮೀಕ್ -ಸಿರಾಜ್ ಶೇಖ್


ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ26: ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ, ತಮ್ಮ ಮನಸ್ಸೊಇಚ್ಛೆ  ವರ್ತಿಸುವ ಮೂಲಕ ಸ್ಥಳೀಯ ಶಾಸಕರು ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಚುನಾವಣಾ ಗಿಮೀಕ್ ಆರಂಭಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿರಾಜ್ ಷೇಖ್ ಆರೋಪಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಭಾನುವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು‌‌ ಕೊಳಗೇರಿ ಅಭಿವೃದ್ಧಿ ಮಂಡಳಿ 60 ಘೋಷಿತ ಸ್ಲಂ ಗಳಲ್ಲಿ ಅನೇಕರಿಗೆ ಪಟ್ಟಾಗಳನ್ನು ಇತ್ತೀಚೆಗೆ ನೀಡಿದ್ದು ಆದೇಶಪಾಲನೆ, ಹಕ್ಕು ಪತ್ರವಿತರಣೆ, ಆದೇಶ ಹಾಗೂ ನಿಯಮಾವಳಿಗಳ ಪಾಲನೆ ಕ್ರಮಬದ್ಧವಾಗಿದೆಯೇ ಎಂಬ ಆತಂಕವೂ ಇದೆ ಈ ಪತ್ರಗಳು ಮಾನ್ಯವೇ ಅಥವಾ ಕೇವಲ ಚುನಾವಣಾ ಗಿಮೀಕ್ ಮಾಡುತ್ತಿರುವುದು ಸ್ಪಷ್ಟವಾಗಬೇಕು. ಕಾರ್ಯಕ್ರಮದ ಆಮಂತ್ರಣ ಪತ್ರದ ಮುದ್ರಣಾ ಮಾನ್ಯತೆ, ಶಿಸ್ತು ಪಾಲನೆಯು ಆಗಿಲ್ಲಾ ಇದನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ಮೌನವಾಗಿರುವುದು ಅಧಿಕಾರಿಗಳ ಅಸಹಾಯಕತೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನಾಳೆ ನಡೆಯುವ ವಿವಿಧ ಕಾಮಗಾರಿಗಳು ಉದ್ಘಾಟನಾ ಸಮಾರಂಭದ ಆಮಂತ್ರಣ, ಪುಸ್ತಕ ಹಂಚಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಂಗನವಾಡಿ ಕಾರ್ಯಕರ್ತರು ಹಾಗೂ ಹಾಜರಾಗಲು ಸ್ವಸಹಾಯ ಸಂಘದ ಕಾರ್ಯಕರ್ತರು ಕರೆತರಲು ಹೇಳಿದ್ದು ಎಷ್ಟು ಸರಿ?  ಆದೇಶ ಹಿಂಪಡೆಯಲು ಮತ್ತು ಇಂತಹ ಆದೇಶ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಮೇಲೆ ಅಮಿತ್ ಷಾ ಕಣ್ಣಿಟ್ಟಿದ್ದು ಶಾಸಕಸ್ಥಾನಕ್ಕಾಗಿ ಅಲ್ಲಾ ಮೈನಿಂಗ್ ಮೇಲಿನ ವ್ಯಾಮೋಹಕ್ಕಾಗಿ ಎಂದು ಆರೋಪಿಸಿದ್ದರು.
ಗೋಷ್ಠಿಯಲ್ಲಿ ತಂಬ್ರಳ್ಳಪ್ಪ, ಮಂಜುನಾಥ, ಬಣ್ಣದ ಮನೆ ಸೋಮಶೇಖರ, ಮಾರೆಣ್ಣ ಸೇರಿದಂತೆ ಇತರರು ಹಾಜರಿದ್ದರು.