ಸರ್ಕಾರದ ಯೋಜನೆಗಳ ಪ್ರಾಮಾಣಿಕವಾಗಿ ತಲುಪಿಸಲು ಕರೆ

ಬ್ಯಾಡಗಿ,ಮೇ31 : ಪ್ರತಿಯೊಬ್ಬ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಕಾರ್ಯೋನ್ಮುಖರಾಗಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ವತಿಯಿಂದ ನಡೆದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಜನಪ್ರತಿಗಳೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಜನರಿಗೆ ಮುಟ್ಟಿಸುವಲ್ಲಿ ಹಾಗೂ ಇಲಾಖೆಗಳಲ್ಲಿ ವಿವಿಧ ಕೆಲಸಗಳ ನಿಮಿತ್ಯ ಬರುವವರ ಸಮಸ್ಯೆಗಳನ್ನು ಅರಿತು ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪರಿಹಾರ ಒದಗಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

ತಾಲೂಕಾ ಸರ್ಕಾರಿ ನೌಕರರ ಸಂಘದ ಪರವಾಗಿ ನೂತನ ಶಾಸಕರಾದ ಬಸವರಾಜ ಶಿವಣ್ಣನವರ ಅವರನ್ನು ಸನ್ಮಾನಿಸಿ ಮಾತನಾಡಿದ ತಾಲೂಕಾಧ್ಯಕ್ಷ ಎಂ.ಎಫ್.ಕರಿಯಣ್ಣನವರ, ತಾಲೂಕಿನಲ್ಲಿ ಎಲ್ಲಾ ಇಲಾಖೆಗಳಲ್ಲೂ ಕಾರ್ಯ ನಿರ್ವಹಿಸುವ ನೌಕರ ವರ್ಗದವರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಪ್ರಾಮಾಣಿಕವಾಗಿ ಸೇವೆ ಒದಗಿಸುವುದಾಗಿ ತಿಳಿಸಿದರಲ್ಲದೇ, ರಾಜ್ಯದ ಸರ್ಕಾರಿ ನೌಕರರಿಗೆ ಶೇ 4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳದ ಆದೇಶವನ್ನು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲ ಸಚಿವ ಸಂಪುಟ ಬಳಗ ಮತ್ತು ಶಾಸಕ ವೃಂದಕ್ಕೂ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಚ್.ವೈ.ಬಾರ್ಕೇರ, ಜಗದೀಶ ಮಣ್ಣಮ್ಮನವರ, ವೈ.ಕೆ.ಮಟಗಾರ, ಹೆಚ್.ಟಿ.ಲಮಾಣಿ, ಶಬ್ಬೀರ ಬಾಗೇವಾಡಿ, ಎಚ್.ಟಿ.ಭರಮಗೌಡ್ರ, ಶ್ರೀಕಾಂತ ಗೂಳೇದ, ಪ್ರದೀಪ ಹೊರಟೇರ, ಎಂ.ಎ.ಕಳಗೊಂಡ, ಮಾಲತೇಶ ಕಂಬಳಿ, ನಾಗರಾಜ ಬಣಕಾರ, ಗಿರೀಶ ಕಾಟೇನಹಳ್ಳಿ, ಮಾಲತೇಶ ಚಳಗೇರಿ, ಸಿ.ಬಿ.ಪಾಟೀಲ, ಜೀವರಾಜ ಛತ್ರದ, ವಿ.ವಿ.ಮಾತನವರ, ಸಿ.ಎಸ್.ಎಲಿ, ಜಿ.ಬಿ.ಬೂದಿಹಾಳ, ಎಮ್.ಬಿ.ಆಡೂರ ಹೆಚ್.ಬಿ.ದಾಸರ, ಎಮ್.ಎನ್.ನೆರ್ತಿ, ಎಸ್.ಎಸ್.ಅಜಗೊಂಡ್ರ, ಬಿ.ಡಿ.ಪರಶುರಾಮ, ಮಲ್ಲಪ್ಪ ಕರೇಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.