ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮ ಅಗತ್ಯ

ಮಂಗಳೂರು, ನ.೪- ಎಸ್.ಟಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳ ಕಾರ್ಯಕ್ರಮಗಳನ್ನು ಪ್ರತೀ ಶತ ೧೦೦ರಷ್ಟು ಅನುಷ್ಟಾನ ಮಾಡಬೇಕೆಂದು
ಸಮಾಜ ಕಲ್ಯಾಣ ಇಲಾಖೆಯ ಎಸ್.ಟಿ.ಪಿ, ಟಿ.ಎಸ್.ಪಿ ಕೋಶದ ನಿರ್ದೇಶಕಿ ಊರ್ಮಿಳಾ
ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಅನುಷ್ಟಾನಗೊಳಿಸುತ್ತಿರುವ ಕರ‍್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರ ಅನುಸೂಚಿತ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಅನೇಕ ಕಲ್ಯಾಣ ಯೋಜನೆ ಹಾಗೂ ಕರ‍್ಯಕ್ರಮಗಳನ್ನು ಜಾರಿಗೆ ತಂದಿದ್ದು ರಾಜ್ಯದ ಯೋಜನ ವೆಚ್ಚದ ಒಂದು
ಭಾಗವನ್ನು ಮೀಸಲಿಟ್ಟಿದೆ. ಇವುಗಳ ಸಂಪೂರ್ಣ ಜಾವಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಎಸ್.ಟಿ.ಪಿ ಮತ್ತು ಟಿ.ಎಸ್.ಪಿ ಯೋಜನೆ ಗಳನ್ನು ಅನುಷ್ಟಾನಗೊಳಿಸುವಾಗ ಜನಸಂಖ್ಯೆಯ ಪ್ರಮಾಣ ಕ್ಕಾನುಸಸಾರವಾಗಿ ಶೇ ೫೦%ರಷ್ಟು ಯೋಜನೆಗಳನ್ನು ಪ.ಜಾತಿ, ಪ.ಪಂಗಡದವರು ವಾಸಿಸುತ್ತಿರುವ ಕಾಲೋನಿಗಳಲ್ಲಿ ಅನುಷ್ಟಾನಗೊಳಿಸಬೇಕೆಂದು ತಿಳಿಸಿದರು.
ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕರ‍್ಯಕ್ರಮಗಳನ್ನು ಆಗಿಂದ್ದಾಗೆ ಮಾಡಬೇಕೆಂದು ತಿಳಿಸಿದರು. ಯೋಜನೆಗಳ ಲಾಭ ಪಡೆದು ಆರ್ಥಿಕ ಮಟ್ಟವನ್ನು ಉನ್ನತಿಗೊಂಡಿರುವ ಫಲಾನುಭವಿಗಳ ಸಭೆಯಲ್ಲಿ ಮಹಾನಗರ
ಪಾಲಿಕೆಯ ಜಂಟಿ ನಿರ್ದೇಶಕ ಜಿ. ಸಂತೋಷ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ
ಯೋಗಿಶ್ ಎಸ್.ಪಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಅನಿತಾ ಹಾಗೂ
ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.