ಸರ್ಕಾರದ ಯೋಜನೆಗಳು ಸದುಪಯೋಗ ಪಡೆದುಕೊಳ್ಳಿ- ವಿ.ಹೆಚ್.ನಾಯಕ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಅನೇಕ ಅಧಿಕಾರಿಗಳು ಗೈರು
ಸಿರವಾರ,ಜು,೧೮- ಜನರು ಸರ್ಕಾರದ ಯೋಜನೆಗಳನ್ನು ಪಡೆಯಲು ಸರ್ಕಾರಿ ಕಛೇರಿಗೆ ಅಲೆದಾಟವನ್ನು ತಪ್ಪಿಸುವ ನಿಟ್ಟಿ ನಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ನೀಡಲಾಗುವುದು, ತುಂಗಭದ್ರಾ ನದಿಯ ಪ್ರವಾಹ ಉಂಟಾಗುತ್ತಿರುವುದರಿಂದ ಕೆಲ ಅಧಿಕಾರಿಗಳು ಗೈರು ಆಗಿರಬಹುದು, ಆಯಾ ಇಲಾಖೆಗೆ ದೂರುಗಳನ್ನು ವರ್ಗಾವಣೆ ಮಾಡಿ ವಾರದಲ್ಲಿ ಸಮಸ್ಯೆ ಬಗ್ಗೆ ಹರಿಸುವಂತೆ ತಿಳಿಸಲಾಗುವುದು ಎಂದು ಸಿರವಾರ ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ ಹೇಳಿದರು.
ತಾಲೂಕಿನ ಕಲ್ಲೂರು ಹೊಬ್ಬಳಿಯ ಹೊಕ್ರಾಣಿ ಗ್ರಾಮದ ಸ. ಹಿ. ಪ್ರಾ. ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ ರಾಯಚೂರು, ತಾಲೂಕಾಡಳಿತ ಸಿರವಾರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಳ್ಳಿಯ ಜನರು ಸಣ್ಣಪುಟ್ಟ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ,ತಹಸೀಲ್ದಾರ ಕಚೇರಿ ಮತ್ತು ವಿವಿಧ ಇಲಾಖೆ ಕಚೇರಿಗೆ ಅಲೆಯುವ ಪರಿಸ್ಥಿತಿಯನ್ನು ತಪ್ಪಿಸಲು ಪ್ರತಿ ತಿಂಗಳು ಈ ಕಾರ್ಯಕ್ರಮ ಹಮ್ಮಿಕೊಳಲಾಗಿದೆ. ಎಲ್ಲಾ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದಾರೆ. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಪ್ರಾಸ್ತವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಶೇಖರ ದೊಡ್ಮನೆ ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಗಬಾರದು ಕಡ್ಡಾಯ ವಾಗಿ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿ ಮಾಡಬೇಕು ಸರ್ಕಾರಿ ಶಾಲೆಯ ಬಗ್ಗೆ ಗ್ರಾಮೀಣ ಭಾಗದ ಜನರು ಅರ್ಥ ಮಾಡಿ ಕೊಳ್ಳಬೇಕು ಪ್ರತಿಯೊಬ್ಬ ಪಾಲಕರು ಸರ್ಕಾರಿ ಶಾಲೆಗೆ ದಾಖಲಿಸಿ ಒಳ್ಳೆಯ ಶಿಕ್ಷಣ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ, ಕೃಷಿ ಇಲಾಖೆ ಎಇಓ ರಶ್ಮಿ,ಡಾ.ಶಿವಶಂಕರ, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರವೀಣ್ ಕುಮಾರ,ಅರೋಗ್ಯ ಇಲಾಖೆ ವೈದ್ಯಾಧಿಕಾರಿ ಚಂದ್ರಶೇಖರ ಮಾತನಾಡಿದರು.
ಕೃಷಿ ಇಲಾಖೆಯಿಂದ ರೈತರಿಗೆ ರಿಯಾತಿ ದರದಲ್ಲಿ ತೊಗರಿ ಬಿತ್ತನೆ ಬೀಜವನ್ನು ತಹಸೀಲ್ದಾರ ವಿಜಯೇಂದ್ರ ಹುಲಿ ನಾಯಕ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.
ನಂತರ ಅರ್ಜಿದಾರರಿಗೆ ಮಾಶಾಸನ ಪ್ರಮಾಣ ಪತ್ರಗಳನ್ನು ವಿತರಿಸಿದರು. ೫೬ ಅರ್ಜಿಗಳು ಸಲ್ಲಿಕೆಯಾಗಿದವು ಅದರಲಿ ೨೦ ಅರ್ಜಿಗಳನ್ನು ಪರಿಹಾರ ನೀಡಲಾಯಿತು. ೩೦ ಕ್ಕೂ ಅಧಿಕ ಇಲಾಖೆಗಳಲ್ಲಿ ಬೆರಳೆಣಿಕೆ ಅಧಿಕಾರಿಗಳು ಹಾಜಿರಾಗಿದರು.
ಈ ಸಂದರ್ಭದಲ್ಲಿ ಕಲ್ಲೂರು ನಾಡ ಕಚೇರಿ ಉಪತಹಸೀಲ್ದಾರ ಶ್ರೀನಿವಾಸ ರೆಡ್ಡಿ, ಕಂದಾಯ ನಿರೀಕ್ಷಾ ಶಿವಯೋಗ್ಯಪ್ಪ ಗೌಡ ಪಾಟೀಲ್,ತಾ.ಪಂ ಸಹಾಯಕ ನಿರ್ದೇಶಕ ಬಸವರಾಜ,ಮಲ್ಲಟ ಉಪ ತಹಸೀಲ್ದಾರ ರಾಜಕುಮಾರ,ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರವೀಣ್,ಕಾರ್ಮಿಕ ಇಲಾಖೆ ಅಧಿಕಾರಿ ಶರಣು ಕಡಲೆ,ಪಿಡಿಓ ಪ್ರವೀಣ ಕುಮಾರ,ಗ್ರಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಮಾಚನೂರು,ಕಲ್ಲೂರು ಕೃಷಿ ಇಲಾಖೆ ಎಇಇ ರಶ್ಮಿ,ಎಎಸ್ ಐ ರಾಮಜೀ ನಾಯಕ,ಗ್ರಾಮ ಲೆಕ್ಕಾಧಿಕಾರಿ ರವಿಕುಮಾರ,ಮಲ್ಲಯ್ಯ ನಾಯಕ,ಕಲ್ಲೂರು ಸಿಆರ್ ಪಿ ಪ್ರಶಾಂತ, ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ,ಎಸ್ಡಿಎಂಸಿ ಅಧ್ಯಕ್ಷ ರಾಜಪ್ಪ ಹೊಕ್ರಾಣಿ,ಗ್ರಾಮ ಪಂಚಾ ಯತ್ ಸದಸ್ಯರಾದ ಪ್ರಭು ಸಾಹುಕಾರ, ನಲ್ಲಾರೆಡ್ಡಿ,ಹುಲಿಗೆಪ್ಪ,ರಾಮಣ್ಣ,ಗ್ರಾಮಸ್ಥ ರಾದ ಮಲ್ಲಪ್ಪ ಸಾಹುಕಾರ,ಶಿವರಾಜ ಹೊಕ್ರಾಣಿ,ಜಂಬಣ್ಣ,ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಇದ್ದರು.