ಸರ್ಕಾರದ ಯೋಜನೆಗಳನ್ನು ವಿಶೇಷ ಚೇತನರು  ಸದ್ಬಳಕೆ ಮಾಡಿಕೊಳ್ಳಿ – ಇಓ ರವಿಕುಮಾರ್


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 12 :- ವಿಶೇಷಚೇತನರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿರುವ  ಯೋಜನೆಗಳನ್ನು  ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೂಡ್ಲಿಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ವೈ ರವಿಕುಮಾರ ಸಲಹೆ ನೀಡಿದರು.
 ಅವರು ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ  “ಅಂಗವಿಕಲರ ಗ್ರಾಮೀಣ ಪುನರ್ ವಸತಿ ಯೋಜನೆಯ” ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ  ವಿಕಲಚೇತನರ  ಮನೆ ಬಾಗಿಲಿಗೆ ಯು ಡಿ ಐ ಡಿ ಕಾರ್ಡ್ ಮುಟ್ಟಿಸುವ ಮಾಸಾಚರಣೆ ಕಾರ್ಯಕ್ರಮ  ನಡೆಸಲಾಗುವುದು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ನಮ್ಮ ಭಾಗದ ವಿಕಲಚೇತನರು ಯುಡಿಐಡಿ ಕಾರ್ಡ್ ಪಡೆಯದೆ ಇರುವವರಿಗೆ  ಅದರ ಉಪಯೋಗದ ಮನವರಿಕೆ ಮಾಡಿ   ಯುಡಿಐಡಿ ಕಾರ್ಡ್ ಪಡೆದುಕೋಳ್ಳುವಂತೆ  ತಿಳಿಸುವುದು ತಮ್ಮಗಳ  ಪ್ರತಿಯೊಬ್ಬರ ಜವಾಬ್ದಾರಿ ಆಗಿರುತ್ತದೆ  ಮತ್ತು ಯಾವುದೇ ವಿಕಲಚೇತನರು ಮಾಶಾಸನ (ಪಿಂಚಣಿ) ಪಡೆಯದೆ ವಂಚಿತರಾಗದಂತೆ ಕ್ರಮವಹಿಸಿ ಎಲ್ಲರಿಗೂ ಸೌಲಭ್ಯ ಒದಗಿಸಲು ಕೆಲಸ ನಿರ್ವಹಿಸಬೇಕು ಮತ್ತು ಈವರೆಗೂ ವಿಕಲಚೇತನರು  ಆಧಾರ್ ಕಾರ್ಡ್ ಪಡೆಯದೇ ಇರುವ   ವಿಕಲಚೇತನರ ಮಾಹಿತಿ ಸಂಗ್ರಹಿಸಲು ತಿಳಿಸಿದರು.
ಕೂಡ್ಲಿಗಿ  ಶಿಶು ಅಭಿವೃದ್ಧಿ ಸಹಾಯಕ ಯೋಜನಾ ಅಧಿಕಾರಿ ಮಾಲಾಂಬಿ  ಮಾತನಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಜವಾಬ್ದಾರಿ ಮೈಗೂಡಿಸಿಕೊಳ್ಳಬೇಕು  ಇಲಾಖೆ ಅನುಷ್ಠಾನ ಮಾಡಿದ ಯೋಜನೆಗಳು ವಿಶೇಷ ಚೇತನರಿಗೆ ತಲುಪುವಂತೆ ನಿಗವಹಿಸಲು ತಿಳಿಸಿದರು ಹಾಗೂ ಇಲಾಖೆಯಿಂದ ಅರ್ಜಿ ಆಹ್ವಾನಿಸಿರುವ 8 ಯೋಜನೆಗಳು   ಆನ್ಲೈನ್ ನಲ್ಲಿ ಅರ್ಜಿ  ಸಲ್ಲಿಸುವಂತೆ ಅರ್ಹ ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳುವಂತೆ  ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಎಂ ಆರ್ ಡಬ್ಲ್ಯೂ
ಬಿ ಹೆಚ್ ಚೌಡೇಶ್ , ತಾಲ್ಲೂಕು ಪಂಚಾಯಿತಿ ಪ್ರಭಾರ ವ್ಯವಸ್ಥಾಪಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.

One attachment • Scanned by Gmail