ಸರ್ಕಾರದ ಮಾರ್ಗಸೂಚಿ ದಿಕ್ಕರಿಸಿ ಶಹಾಪುರದೆಲ್ಲೆಡೆ ಕದ್ದುಮುಚ್ಚಿ ವ್ಯಾಪಾರ

ಶಹಾಪುರ:ಎ.30:ಕೊರೊನಾ ಎರಡನೇ ಅಲೆಯ ಭೀಕರತೆಗೆ ರಾಜ್ಯದಲ್ಲಿ ದಿನಾಲು ಸಾವಿರಾರು ಸೊಂಕಿತರು ಮತ್ತು ಸಾವಿಗಿಡಾಗುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ 14 ದಿನಗಳ ಲಾಕ್‍ಡೌನ್ ಮಾಡಿ ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲವು ಮಾರಾಟ ನಿಷೇದಿಸಿದೆ. ಆದರೆ ಶಹಾಪುರ ನಗರದಲ್ಲಿ ಕದ್ದುಮುಚ್ಚಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇತ್ತ ನಗರಸಭೆಯ ಪೌರಾಯುಕ್ತರಾದ ರಮೇಶ ಪಟ್ಟೇದಾರರು ಕದ್ದು ಮುಚ್ಚಿ ವ್ಯಾಪಾರ ನಡೆಸುವ ವ್ಯಾಪಾರ ತಡೆಯುವ ನಿಟ್ಟಿನಲ್ಲಿ 6 ತಂಡ ರಚಿಸಿ ಅಂತವರ ವಿರುದ್ದ ಸೂಕ್ತ ದಂಡ ಹಾಕುತ್ತಿದ್ದೆವೆ ಜೊತೆಗೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದೆವೆ ಎಂದು ಹೇಳುತ್ತಿದ್ದಾರೆ.

ಆದರೆ ನಗರದ ಹೃದಯ ಭಾಗದಲ್ಲಿರುವ ತರಕಾರಿ ಮಾರುಕಟ್ಟೆಯ ಸುತ್ತಲು ಇರುವ ಮಹಾಲಕ್ಷ್ಮಿ ಎಲೆಕ್ಟ್ರೀಕಲ್, ಸಂತೋಷ ಡ್ರಸೇಸ್, ರಾಜೇಶ್ವರಿ ಮೋಬೈಲ್ಸ್, ವಿಜಯ ಮೇನ್ಸ ವೇರ್, ಲಕ್ಷ್ಮಿ ಸ್ಟೀಲ್ ಹೌಸ್ ಸೇರಿದಂತೆ ಹಲವೇಡೆ ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿದ್ದು ಕೇಳುವವರೆ ಇಲ್ಲದಂತಾಗಿದೆ. ಈ ಕುರಿತು ನಗಸಭೆಯ ಅಧಿಕಾರಿಗೆ ಕರೆ ಮಾಡಿದರೆ ಅವರು ಸ್ಪಂದನೆ ಇಲ್ಲ. 2 ಗಂಟೆ ತಡವಾಗಿ ನಗರಸಭೆಯ ಅಧಿಕಾರಿಗಳಾದ ವೀರಣ್ಣ, ಶರಣಬಸವ, ಸಂತೋಷ, ಭೀಮಣ್ಣ ಬಂದು ಆಗಲೆ ಈ ಅಂಗಡಿಗಳಿಗೆ ದಂಡ ಹಾಕಲಾಗಿದೆ ಎನ್ನುತ್ತಾರೆ ಆದರೆ ರಸಿದಿ ಕೇಳಿದರೆ ಬೇರೆಯವರ ಹತ್ತಿರ ಇದೆಯಂತ ಬೇಜಬ್ದಾರಿ ಉತ್ತರ ನೀಡುತ್ತಾರೆ. ಸೂಕ್ಷ್ಮವಾಗಿ ಗಮನಿಸಿದಾಗ ನಗರಸಭೆಯ ಅಧಿಕಾರಿಗಳೆ ಕದ್ದುಮುಚ್ಚಿ ನಡೆಸುವ ವ್ಯಾಪಾರಕ್ಕೆ ಕಾರಣಕರ್ತರು ಎನ್ನುವ ವಾದ ಸಾರ್ವಜನಿಕ ವಲಯದಲ್ಲಿ ಅರಿದಾಡುತ್ತಿದೆ.