ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ನಡು ರಸ್ತೆಯಲ್ಲಿ ಉರುಳು ಸೇವೆ

ಅಫಜಲಪುರ:ನ.4: ಅತಿವೃಷ್ಠಿ ಪರಿಹಾರದಲ್ಲಿ ರಾಜ್ಯ ಸರಕಾರ ತಾರತಮ್ಯ ನಡಿಸಿದೆ ಎಂದು ತಾಲೂಕ ಜೆ.ಡಿ.ಎಸ್. ಕಾರ್ಯಕರ್ತರು ಸೋಮವಾರದಂದು ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದ ಕಲ್ಬರ್ಗಿ ಹಾಗೂ ವಿಜಯಪುರ ಮುಖ್ಯ ಹೆದ್ದಾರಿ ನಡು ರಸ್ತೆಯ ಮೇಲೆ ಉರುಳು ಸೇವೆ ಮಾಡಿ ಪ್ರತಿಭಟನೆ ಮಾಡಿದರು.

ನಂತರ ಮಾತನಾಡಿದ ತಾಲೂಕ ಜೆ.ಡಿ.ಎಸ್.ಅಧ್ಯಕ್ಷ ರಾಜಕುಮಾರ ಬಡದಾಳ ಮಾತನಾಡಿ ಬೆಂಗಳೂರಿನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದರೆ 25 ಸಾವಿರ ರೂಪಾಯಿ ಸರಕಾರ ಪರಿಹಾರ ನೀಡಲಾಗುತ್ತಿದೆ ಆದರೆ ಕಲ್ಬುರ್ಗಿ ಜಿಲ್ಲೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದರೆ ಕೇವಲ 10 ಸಾವಿರ ರೂಪಾಯಿ ಪರಿಹಾರವನ್ನು ಸರಕಾರ ಘೋಷಣೆ ಮಾಡಿದೆ ಅಲ್ಲದೇ ಬೆಳೆ ಹಾನಿ ವಿಷಯದಲ್ಲಿ ಕೂಡ ತಾರತಮ್ಯೆ ನೀತಿ ಅನುಸರಿಸಲಾಗುತ್ತಿದೆ ಎಂದ ಅವರು ರಾಜ್ಯ ಸರಕಾರದಿಂದ ಪದೇ ಪದೇ ತಾರತಮ್ಯವಾಗುತ್ತದೆ ಎಂದು ಆರೋಪಿಸಿದ ಅವರು ಕೂಡಲೆ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಜೆಡಿಎಸ್ ಪ್ರ.ಕಾರ್ಯದರ್ಶಿ ಸುನೀಲ ಹೊಸ್ಮನಿ, ರೈತ ಘಟಕ ಅಧ್ಯಕ್ಷ ಹಣಮಂತ ಬಿರಾದಾರ, ನಗರ ಘಟಕ ಅಧ್ಯಕ್ಷ ಅಸ್ಲಂ ನಗರಚಿ, ಕುಮಾರಸ್ವಾಮಿ ಸೋನರ, ಶಿವುಕುಮಾರ ಬಡದಾಳ, ಚಂದು ಬಡದಾಳ, ದಶರಥ ಬಡಗೇರ, ಚಂದು ದೇವರಮನಿ, ಮೈಬೂಬ ಸೇರಿದಂತೆ ಅನೇಕರಿದ್ದರು. ನಂತರ ತಹಸೀಲ್ದಾರ ನಾಗಮ್ಮಾ.ಎಮ್.ಕೆ. ಅವರು ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಸಿದರು.