
ವಿಜಯಪುರ:ಮಾ.2: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರದ ಮಧ್ಯಂತರ ಪರಿಹಾರ ಆದೇಶ ಹಾಗೂ ಎನ್.ಪಿ.ಎಸ್ ಕುರಿತು ಹೇಳಿಕೆ ಸಮಾಧಾನ ತಂದಿಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ತಿಳಿಸಿದ್ದಾರೆ.
ಸರ್ಕಾರ ಸರ್ಕಾರಿ ನೌಕರರಿಗೆ/ಶಿಕ್ಷಕರಿಗೆ ಹೊರಡಿಸಿದ ಶೇಕಡ 17% ಮಧ್ಯಂತರ ಪರಿಹಾರದ ಆದೇಶ ಶಿಕ್ಷಕರಿಗೆ/ ನೌಕರರಿಗೆ ಸಮಾಧಾನ ತಂದಿಲ್ಲ ಈ ಹಿಂದೆ ವೇತನ ಪರಿಷ್ಕರಣೆಯಾಗಿ ದಿನಾಂಕ: 01-07-2022ಕ್ಕೆ 5 ವರ್ಷ ಪೂರ್ಣಗೊಂಡಿದ್ದು, ಕನಿಷ್ಠ ಮಧ್ಯಂತರ ಪರಿಹಾರವನ್ನು ದಿನಾಂಕ: 01-07- 2022 ರಿಂದಲೇ ಅನ್ವಯಿಸಿ ಆದೇಶಿಸಬೇಕಿತ್ತು. ಈಗ ಮಧ್ಯಂತರ ಪರಿಹಾರ ದಿನಾಂಕ: 01-04-2023ರಿಂದ ಘೋಷಿಸಿರುವುದು ನೌಕರರಿಗೆ ಅಸಮಾಧಾನ ತಂದಿದೆ. ಹಾಗಾದರೆ ಸರ್ಕಾರ ಸಂಪೂರ್ಣ ವರದಿಯನ್ನು ಎಲ್ಲಿಂದ ಅನ್ವಯಿಸುತ್ತದೆ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.
ಜೊತೆಗೆ ಎನ್.ಪಿ.ಎಸ್ ಕುರಿತು ಈ ಹಿಂದೆಯೇ ಸಮಿತಿ ರಚನೆಯಾಗಿತ್ತು, ಈಗ ಮತ್ತೊಮ್ಮೆ ಸಮಿತಿ ರಚನೆ ಮಾಡಿರುವುದು ಓPS ನೌಕರರಿಗೆ ತುಂಬಾ ನೋವಿನ ಸಂಗತಿಯಾಗಿದ್ದು, ಒಟ್ಟಾರೆಯಾಗಿ ಇವತ್ತಿನ ಬೆಳವಣಿಗೆಗಳು ರಾಜ್ಯದ ಬಹುತೇಕ ನೌಕರರಿಗೆ ಹಾಗೂ ಶಿಕ್ಷಕರಿಗೆ ಸಮಾಧಾನವನ್ನುಂಟು ಮಾಡಿಲ್ಲ ಎಂದು ತಿಳಿಸಿದ್ದಾರೆ.